ಐಸಿಐಸಿಐ Q2 ನಿರೀಕ್ಷೆಗೂ ಮೀರಿದ ಲಾಭ

ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ 1,956 ಕೋಟಿ ರುನಂತೆ ಶೇ 30 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,503 ಕೋಟಿ ರು ಮಾತ್ರ ಗಳಿಸಿತ್ತು.
ಸಂಸ್ಥೆಯ ಒಟ್ಟಾರೆ ಅನುತ್ಪಾದಕ ಆಸ್ತಿ(NPAs) 2,138 ಕೋಟಿ ರುಗೆ ಏರಿದೆ. ಕಳೆದ ತ್ರೈಮಾಸಿಕದಲ್ಲಿ 1,941 ಕೋಟಿ ರು ನಷ್ಟಿತ್ತು.
ಕಂಪನಿಯ ಒಟ್ಟಾರೆ ಬಡ್ಡಿ ದರ ಅಂತರ ಸುಧಾರಣೆಗೊಂಡು 3.00 % ನಷ್ಟಾಗಿದೆ. 2012ರ Q2 ನಲ್ಲಿ 2.61 % ನಷ್ಟಿತ್ತು. ನಿವ್ವಳ ಬಡ್ಡಿ ಬಡ್ಡಿ ಗಳಿಕೆ 2013ರ Q2 ನಲ್ಲಿ ಶೇ 35 ರಂತೆ 3,371 ಕೋಟಿ ರು ಗೆ ಏರಿದೆ. 2012ರ Q2 ನಲ್ಲಿ 2,506 ಕೋಟಿ ರು ನಷ್ಟಿತ್ತು.
ತೆರಿಗೆ ನಂತರದ ನಿವ್ವಳ ಲಾಭ ಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 20 ರಷ್ಟು ಪ್ರಗತಿ ಸಾಧಿಸಲಾಗಿದ್ದು, 2,390 ಕೋಟಿ ರು ಪ್ರಸಕ್ತ ತ್ರೈಮಾಸಿಕದಲ್ಲಿ ಗಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,992 ಕೋಟಿ ರು ನಷ್ಟಿತ್ತು.
ಸಂಸ್ಥೆಯ capital adequacy ratio 18.28% ನಷ್ಟಿದ್ದು, ಆರ್ ಬಿಐಗೆ ಬೇಕಾದ ಶೇ 9.0 ಮಿತಿಗಿಂತ ಸಾಕಷ್ಟು ಮೇಲಿದೆ.
ಐಸಿಐಸಿಐ ಬ್ಯಾಂಕಿನ ಷೇರುಗಳು ಬಿಎಸ್ ಇನಲ್ಲಿ 2.50 ಗಂಟೆ ಸುಮಾರಿಗೆ 1080.50 ರು ನಂತೆ ಶೇ 0.52 ರಷ್ಟು ಕುಸಿದಿತ್ತು. ಎನ್ ಎಸ್ ಇನಲ್ಲಿ 1080.85 ರು ನಂತೆ ಶೇ 0.58ರಷ್ಟು ಇಳಿದಿತ್ತು.
ಮಾರುಕಟ್ಟೆ ಮೌಲ್ಯ (m-cap) ಆಧಾರದ ಮೇಲೆ ಟಾಪ್ 10 ಸಂಸ್ಥೆಗಳಲ್ಲಿ. ಐಸಿಐಸಿಐ 1,24,718.29 ಕೋಟಿ ರು. ನೊಂದಿಗೆ 10ನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಗಸ್ಟ್ ತಿಂಗಳಿನಲ್ಲಿ 1,12,006 ಕೋಟಿ ರು. ಆದಾಯದೊಂದಿಗೆ ಐಸಿಐಸಿಐ 10ನೇ ಸ್ಥಾನಕ್ಕೇರಿತ್ತು.
ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಶುಕ್ರವಾರ, 26,2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.












Click it and Unblock the Notifications