ಕಾವೇರಿ ಎಕ್ಸ್ ಪ್ರೆಸ್ ಪಲ್ಟಿ, ಸಂಚಾರ ಅಸ್ತವ್ಯಸ್ತ

ಮೈಸೂರು-ಚೆನ್ನೈ ನಡುವಿನ ಕಾವೇರಿ ಎಕ್ಸ್ ಪ್ರೆಸ್ ರೈಲು ಬೆಳ್ಳಂಬೆಳ್ಳಗೆ ಮಳೆ ಹೊಡೆತಕ್ಕೆ ಸಿಲುಕಿತು. ಚಿತ್ತೂರು ಜಿಲ್ಲೆ ಕುಪ್ಪಂ ಬಳಿ ಮಲ್ಲನೂರು ಹಾಗೂ ಪಚ್ಚ್ರೂರು ಅರಣ್ಯ ಪ್ರದೇಶದಲ್ಲಿ ಕಾವೇರಿ ಎಕ್ಸ್ ಪ್ರೆಸ್ ನ ನಾಲ್ಕು ಬೋಗಿಗಳು ಪಲ್ಟಿ ಹೊಡೆಯಿತು. ಈ ದುರ್ಘಟನೆಯಲ್ಲಿ ಸುಮಾರು 10 ಜನರಿಗೆ ಗಾಯಗಳಾಗಿದ್ದು, ಒಬ್ಬರು ಮೃತ ಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಬಂದಿದೆ.
ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಈ ಘಟನೆ ನಂತರ ಬೆಂಗಳೂರು ಹಾಗೂ ಚೆನ್ನೈ ನಡುವಿನ ರೈಲು ಸಂಚಾರ ಅಸ್ತವ್ಯಸ್ಥಗೊಂಡಿದೆ. ಹಲವು ರೈಲುಗಳ ಮಾರ್ಗ ಬದಲಾವಣೆ, ಕೆಲವು ರೈಲುಗಳ ಸಂಚಾರ ಸ್ಥಗಿತ ಹಾಗೂ ಕೆಲವು ರೈಲುಗಳ ವಿಳಂಬವಾಗಿ ಹೊರಡುವ ಸಾಧ್ಯತೆಯಿದೆ ಎಂದು ರೈಲ್ವೇ ಇಲಾಖೆ ಹೇಳಿದೆ.
ಸಹಾಯವಾಣಿ: 2287 3103
ಕಾವೇರಿ ಎಕ್ಸ್ ಪ್ರೆಸ್ ಪ್ರತಿದಿನ ರಾತ್ರಿ 20:15 ಕ್ಕೆ ಮೈಸೂರು ಬಿಟ್ಟು 23:30ಕ್ಕೆ ಬೆಂಗಳೂರು ತಲುಪಲಿದೆ. 23:45ಕ್ಕೆ ಬೆಂಗಳೂರನ್ನು ಬಿಟ್ಟು ಚೆನ್ನೈ ನಗರವನ್ನು 7:35ಕ್ಕೆ ತಲುಪಬೇಕಾಗುತ್ತದೆ.












Click it and Unblock the Notifications