ಬಂದ್ ದಿನ ತೆರೆದಿದ್ದ ಮೈಸೂರು ವಿಪ್ರೋ ಕಚೇರಿಗೆ ಮುತ್ತಿಗೆ
ಬಂದ್ಗೆ ಸ್ಪಂದಿಸಿರುವ ಅನೇಕ ಐಟಿಬಿಟಿ ಕಂಪನಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ಶನಿವಾರ ಕದವನ್ನು ಹಾಕಿವೆ. ಆದರೆ, ವಾರಾಂತ್ಯವಿದ್ದರೂ ಮೈಸೂರಿನಲ್ಲಿನ ವಿಪ್ರೋ ಕಚೇರಿ ಕೆಲಸ ನಿರ್ವಹಿಸುತ್ತಿತ್ತು. ಇದರಿಂದ ರೊಚ್ಚಿಗೆದ್ದ ಜಯ ಕರ್ನಾಟಕ ಕಾರ್ಯಕರ್ತರು ಕಂಪನಿಗೆ ನುಗ್ಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಆರಂಭದಲ್ಲಿ 'ಆಯ್ತು ಮುಚ್ತೀವಿ' ಎಂಬ ಭರವಸೆ ನೀಡಿದ್ದರೂ ವಿಪ್ರೋ ಆಡಳಿತವರ್ಗ ನೂರಾರು ಕೆಲಸಗಾರರನ್ನು ಕಚೇರಿಯಲ್ಲೇ ಉಳಿಸಿಕೊಂಡು, ಹೊರಗೆ ಕದ ಹಾಕಿ ಒಳಗಡೆ ಕೆಲಸ ಮುಂದುವರಿಸಿತ್ತು. ಇದರಿಂದ ರೊಚ್ಚಿಗೆದ್ದ ಕನ್ನಡ ಹೋರಾಟಗಾರರು ವಿಪ್ರೋ ಕಚೇರಿಗೆ ನುಗ್ಗಿ ಎಲ್ಲ ಕೆಲಸಗಾರರನ್ನು ಬಲವಂತವಾಗಿ ಹೊರಹಾಕಿಸಿದರು. ಇಷ್ಟಕ್ಕೆ ಸುಮ್ಮನಾಗದೆ ಕಂಪನಿಯ ಆವರಣದಲ್ಲಿರುವ ಹೂಕುಂಡಗಳನ್ನು ಎತ್ತಿ ನೆಲದ ಮೇಲೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿದ್ದುಕೊಂಡು ದಿನನಿತ್ಯ ಕಾವೇರಿ ನೀರನ್ನು ಕುಡಿಯುತ್ತಿದ್ದರೂ ವಿಪ್ರೋ ಕಂಪನಿಯ ಸಿಬ್ಬಂದಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿಲ್ಲ, ಕರ್ನಾಟಕ ಬಂದ್‌ಗೆ ಸಹಕರಿಸಿಲ್ಲ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಇಂಥವರನ್ನು ರಾಜ್ಯದಿಂದಲೇ ಓಡಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.












Click it and Unblock the Notifications