ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಹೆತ್ತಮ್ಮ ಕಂದನ ಮಾರಿದ್ದು ಮೊಬೈಲ್ ಖರೀದಿಸಲು

By Srinath
|
Google Oneindia Kannada News

odisha-jajpur-mother-sold-baby-boy-to-buy-mobile-phone
ಜಾಜ್ಪುರ, ಅ.4: ಹೌದು, ಇಡೀ ದೇಶವೇ ಆ ಪ್ರಕರಣದ ಬಗ್ಗೆ ಮರುಕಪಟ್ಟಿತ್ತು. ಮಾಧ್ಯಮಗಳೂ ಒಂದೇ ಸಮನೆ ಸುದ್ದಿ ಬಿತ್ತರಿಸಿದ್ದವು. ಕೊನೆಗೆ ಅದನ್ನು ಕಂಡು/ಕೇಳಿದ ಹೈಕೋರ್ಟ್ ಸ್ವತಃ ಮುಂದಾಗಿ ಪ್ರಕರಣ ದಾಖಲಿಸಿಕೊಳ್ಳುವಂತೆ ಒರಿಸ್ಸಾ ಪೊಲೀಸರಿಗೆ ಆದೇಶ ನೀಡಿತು. ಸರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬೆಚ್ಚಿಬೀಳುವ ಅಂಶಗಳನ್ನು ಹೊರಗೆಡವಿದ್ದಾರೆ.

ಆಧುನಿಕ ಜೀವನದ ತೆವಲುಗಳನ್ನು ಹಚ್ಚಿಕೊಂಡ ಸದರಿ ಮಹಿಳೆ ತನ್ನ 17 ತಿಂಗಳ ಮಗುವನ್ನೇ ಮಾರಾಟ ಮಾಡಿಬಿಟ್ಟಿದ್ದಳು. ಬಂದ ಹಣದಿಂದ ಆ ಹೆತ್ತಮ್ಮ ಮೊದಲು ಒಂದು ಮೊಬೈಲ್ ಖರೀದಿಸಿದಳು. ಇನ್ನೂ ಒಂದಷ್ಟು ದುಡ್ಡು ಉಳಿದಾಗ ಒಂದು ಜೀನ್ಸ್ ಖರೀದಿಸಿದಳು. ಇಷ್ಟಕ್ಕೂ ಆ ನಾರಿ ತನ್ನ ಮಗನನ್ನು ಮಾರಿದ್ದು ಎಷ್ಟಕ್ಕೆ ಅಂದರೆ ಕೇವಲ 5,000 ರೂಪಾಯಿಗೆ.

ಜಿಲ್ಲೆಯ ಮುಂದಾಮಲ ಗ್ರಾಮದ ಆ ಮಹಿಳೆಯನ್ನು ರಾಕ್ಷಸಿ ಅನ್ನಬೇಕೋ, ಅಮಾಯಕಳೂ ಅನ್ನಬೇಕೋ ತಿಳಿಯುತ್ತಿಲ್ಲ. ಅಥವಾ ಇಂದಿನ ಥಳಕುಬಳಕು ಜೀವನಶೈಲಿಯೇ ಅಮ್ಮನಂತಹ ಅಮ್ಮನ ಮನಸ್ಸನ್ನೇ ಬದಲಿಸುವಷ್ಟು ಪ್ರಭಾವಯಾಗಿಬಿಟ್ಟಿತೇ?

ರಾಖಿ ಪಾತ್ರ ಎಂಬ ಸದರಿ ಮಹಿಳೆಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ ಜಾಜ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ಆಕೆಯ ವೃತ್ತಾಂತ ಕೇಳಿ ಹೌಹಾರಿದ್ದಾರೆ. ಆರಂಭದಲ್ಲಿ, ತನ್ನ ಗಂಡ ಜೈಲಿನಲ್ಲಿದ್ದಾನೆ. ಅವನನ್ನು ಬಿಡಿಸಿಕೊಳ್ಳುವುದಕ್ಕಾಗಿ ವಕೀಲರಿಗೆ ಫೀಸು ಕೊಡಲು ಮಗುವನ್ನೇ ಮಾರಾಟ ಮಾಡಬೇಕಾಯಿತು ಎಂದು ಕಥೆ ಕಟ್ಟಿದ್ದಳು ರಾಖಿ.
ಆದರೆ ತನಿಖೆಯಿಂದ ತಿಳಿದುಬಂದ ವಿಷಯ ಏನೆಂದರೆ ಆಕೆ ಬಡತನದಿಂದಾಗಿ ತನ್ನ ಮಗನನ್ನು ಮಾರಾಟ ಮಾಡಿರಲಿಲ್ಲ. ತಪಾಸಣೆ ವೇಳೆ ಆಕೆಯಿಂದ ಮೊಬೈಲ್, ಜೀನ್ಸ್, ಮತ್ತಿತರ ಹೊಸ ಪರಿಕರಗಳನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಅಂದಹಾಗೆ, ಈ ಕಥಾನಕದ ಕೇಂದ್ರ ಬಿಂದು 17 ತಿಂಗಳ ಮಗುವನ್ನು ಪೊಲೀಸರು ನಿನ್ನೆ ಕಟಕ್ ನಲ್ಲಿ ಪತ್ತೆಹಚ್ಚಿದ್ದರು. ಕೋರ್ಟ್ ಸೂಚನೆಯಂತೆ ಮಗುವನ್ನು ಹೆತ್ತಮ್ಮ ರಾಖಿಗೆ ಹಸ್ತಾಂತರಿಸಿದಾಗ ಆಕೆ ಮಗುವನ್ನು ಸ್ವೀಕರಿಸಲಿಲ್ಲ. ನಿರುಪಾಯರಾದ ಪೊಲೀಸರು ಮುಗ್ಧ ಮಗುವನ್ನು ಮಕ್ಕಳ ಕ್ಷೇಮಾಭ್ಯುದಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

20 ವರ್ಷದ ರಾಖಿ, ದಿನಗೂಲಿ ಕಾರ್ಮಿಕಳು. ತನಗೆ ಪರಿಚಯವಿದ್ದ ಆಟೋರಿಕ್ಷಾದವನಿಗೆ ಹೇಳಿ, ಸೆಪ್ಟೆಂಬರ್ 17ರಂದು ಮಗುವನ್ನು ಮಾರಿಬಿಟ್ಟಿದ್ದಳು. ಒರಿಸ್ಸಾ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರೇ ಪ್ರಕರಣವನ್ನು ಗಮನಿಸಿ, ಪೊಲೀಸ್ ತನಿಖೆಗೆ ಕಳೆದ ಶುಕ್ರವಾರ ಆದೇಶಿಸಿದ್ದರು. (PTI)

English summary
Odisha Jajpur mother Rakhi Patra sold 17 month-old her son for Rs 5000 to buy mobile phone. Rakhi, who is 20 years old and a daily wage earner, had in association with a rickshaw puller sold her son t
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X