ಖಾಸಗಿ ಕಾರ್ಯಕ್ರಮಕ್ಕೆ ಸರಕಾರಿ ವಾಹನ ಬಳಕೆ, ಛೀ!

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಖಾನಪುರ ಗ್ರಾಮದಲ್ಲಿ ನಡೆದ ದಿ.ಲಕ್ಷ್ಮಣ ನಾಯಕ್ ಅವರ ಪುಣ್ಯ ಸ್ಮರಣೆಯ ರಜತಮಹೋತ್ಸವದ ಕಾರ್ಯಕ್ರಮಕ್ಕೆ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡ, ರಾಯಚೂರ ಸಂಸದ ಸಣ್ಣ ಫಕೀರಪ್ಪ, ಚಿತ್ತಾಪುರ ಶಾಸಕ ವಾಲ್ಮಿಕಿ ನಾಯಕ್ ಆಗಮಿಸಿದರು ಈ ಕಾರ್ಯಕ್ರಮಕ್ಕೆ ಯಾದಗಿರಿ ವಾರ್ತಾ ಇಲಾಖೆ ವಾಹನವನ್ನು ಬಳಸಿಕೊಂಡಿದ್ದಾರೆ.
ಈ ಸರಕಾರಿ ವಾಹನ ಬಳಸಿಕೊಂಡಿದ್ದನ್ನು ನೋಡಿದರೆ ಯಾದಗಿರಿಯಲ್ಲಿ ರಾಜಕೀಯ ಪ್ರಭಾವ ಎಷ್ಟರ ಪ್ರಮಾಣದಲ್ಲಿ ಇದೆ ಎಂಬುದು ತಿಳಿಯುತ್ತೆ. ಈ ಖಾಸಗಿ ಕಾರ್ಯಕ್ರಮಕ್ಕೆ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಿಗೆ ಗೊತ್ತಿದ್ದರು ಗೊತ್ತಿಲ್ಲದ ಹಾಗೆ ವಾಹನ ಬಳಕೆ ಮಾಡಿರುವುದು ಸರೀನಾ ಎನ್ನುವ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಕಾಡುತ್ತಿದೆ.
ಈ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ಕರೆ ಮಾಡಿದ್ದಾಗ ಜಿಲ್ಲಾಧಿಕಾರಿಗಳು ಕರೆಯನ್ನು ಸ್ವೀಕರಿಸುತ್ತಿಲ್ಲ. ಖಾಸಗಿ ಕಾರ್ಯಕ್ರಮಕ್ಕೆ ಸರಕಾರಿ ವಾಹನ ಬಳಕೆ ಮಾಡಿರುವುದು ಕಾನೂನು ಬಾಹಿರ ಆದರೂ ಉಪಯೋಗಿಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ವಾರ್ತಾ ಇಲಾಖೆಯ ಅಧಿಕಾರಿಯ ಮೇಲೆ ಏನಾದರೂ ಕ್ರಮಕೈಗೊಳ್ಳುತ್ತಾರಾ?












Click it and Unblock the Notifications