'ಎಕ್ಸಟರ್ನಲ್ ಅಫೇರ್ಸ್ ರಾಣಿ' ಹೀನಾ ಆತ್ಮಹತ್ಯೆಗೆ ಯತ್ನ

ಪಾಕ್ ಅಧ್ಯಕ್ಷ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಜತೆಗಿನ external affairs ಜಗಜ್ಜಾಹೀರಾಗಿ, ಅದರ ವಿರುದ್ಧ ಫತ್ವಾ ಹೊರಡಿಸಲು ಕರ್ಮಠ ಮನಸ್ಸಿನ ಇಸ್ಲಾಮಿಕ್ ಸಂಘಟನೆಗಳು ಆಲೋಚಿಸುತ್ತಿವೆ ಎಂಬ ವರದಿಗಳ ಸಮ್ಮುಖದಲ್ಲಿ ಪ್ರಕರಣದ ಕಥಾನಾಯಕಿ, ಪಾಕ್ ಸಚಿವೆ ಹೀನಾ ರಬ್ಬಾನಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಬಾಂಗ್ಲಾ ವಾರಪತ್ರಿಕೆ Blitz ವರದಿ ಉಲ್ಲೇಖಿಸಿ, ಪಾಕ್ ದೈನಿಕವೊಂದು (The Daily Ittefaq) ವರದಿ ಮಾಡಿದೆ.
ನಿದ್ರೆ ಮಾತ್ರೆ ಸೇವಿಸಿ ಸಚಿವೆ ಹೀನಾ ರಬ್ಬಾನಿ ಆತ್ಮಹತ್ಯೆಗೆ ಯತ್ನಿಸಿದರು ಎಂದು Blitz ವರದಿ ಮಾಡಿದೆ. ಅದಕ್ಕೂ ಮುನ್ನ, ಈ ಪತ್ರಿಕೆಯೇ ಹೀನಾ ರಬ್ಬಾನಿ- ಬಿಲಾವಲ್ ಭುಟ್ಟೋ ನಡುವಣ ಪ್ರೇಮವನ್ನು ಜಗತ್ತಿಗೆ ಪರಿಚಯಿಸಿದ್ದು.
ಗಮನಾರ್ಹವೆಂದರೆ ಹೀನಾ ರಬ್ಬಾನಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದಕ್ಕೆ ಕಾರಣವೇ ಬೇರೆಯಾಗಿತ್ತು. ಮೊದಲು, ತಮ್ಮ ಕೋಟ್ಯಧಿಪತಿ ಗಂಡ ಫೆರೋಜ್ ಗುಲ್ಜಾರ್ ಪ್ರೇಮ ಪ್ರಕರಣದಲ್ಲಿ ಸಿಲುಕಿದ್ದರು. ತಮ್ಮ ಉದ್ಯಮಿ ಮಿತ್ರಳ ಜತೆ ಗಂಡ ಫೆರೋಜ್ ಗುಲ್ಜಾರ್ ಲವ್ವಿ-ಡವ್ವಿ ಇಟ್ಕೊಂಡಿದ್ದರು. ಇದರಿಂದ ತೀವ್ರವಾಗಿ ಖಿನ್ನತೆಗೊಳಗಾದ ಹೀನಾ ರಬ್ಬಾನಿ ಆಗಲೇ ಆತ್ಮಹತ್ಯೆಗೆ ಯತ್ನಿಸಿದರು ಎಂದು ಪತ್ರಿಕೆ ವರದಿ ಮಾಡಿದೆ.
ಕುತೂಹಲದ ವಿಷಯವೆಂದರೆ. ಇದೆಲ್ಲ ಪಾಕಿಸ್ತಾನದ ಐಎಸ್ಐ ಚಿತಾವಣೆಯ ಮೇರೆಗೆ ನಡೆದಿದೆ. ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು ಬಂಧಿಸಿದ್ದ ಸಾವಿರಾರು ಮಂದಿ ಕಾಣೆಯಾದ ಬಗ್ಗೆ ವಿಶ್ವಸಂಸ್ಥೆ ತನಿಖೆ ಕೈಗೊಳ್ಳುವುದಕ್ಕೆ ಸಚಿವೆ ಹೀನಾ ರಬ್ಬಾನಿ ನೆರವಾಗಿದ್ದರು. ಹೀನಾ ಅಪಾಯದ ಗೆರೆ ದಾಟಿದ್ದರಿಂದ ಕ್ಷುದ್ದಗೊಂಡ ಪಾಕ್ ಐಎಸ್ಐ ಸಚಿವೆ ಹೀನಾ ರಬ್ಬಾನಿಯ ಚಾರಿತ್ರ್ಯವಧೆಗೆ ಇಳಿಯಿತು ಎಂಬ ಮಾತುಗಳು ಈಗ ಕೇಳುಬರುತ್ತಿವೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications