ಪ್ರವಾಸದಲ್ಲಿ ಆತಂಕ ಏಕೆ, ಟ್ರಾವೆಲ್ ಕಾರ್ಡ್ ಇದ್ರೆ ಸಾಕು

"ನಾವು ನಮ್ಮ ಗ್ರಾಹಕರಿಗೆ ಪ್ರೀಪೇಯ್ಡ್ ಕಾರ್ಡ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ಈ ದಿನಗಳಲ್ಲಿ ದೊಡ್ಡ ಮೊತ್ತವನ್ನು ಎಲ್ಲಿಗಾದರೂ ಕೊಂಡೊಯ್ಯುವುದು ಅಷ್ಟು ಸುರಕ್ಷಿತವಲ್ಲ ಹಾಗೂ ಅದು ಒಳ್ಳೆಯ ಕ್ರಮವೂ ಅಲ್ಲ. ಈ ಮುಂಚೆ ಅಂತಾರಾಷ್ಟ್ರೀಯ ಟ್ರಾವೆಲರ್ಸ್ ಚೆಕ್ ಗಳು ಈ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿತ್ತು ಈಗ ಟ್ರಾವೆಲ್ ಕಾರ್ಡ್ ಗಳು ಈ ಜಾಗವನ್ನು ತುಂಬುತ್ತಿದೆ" ಎಂದು ಇಂಡಿಯನ್ ಬ್ಯಾಂಕ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿಎಂ ಭಾಶಿನ್ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಹೊತ್ತಿಗೆ ಸುಮಾರು 1 ಲಕ್ಷ ಟ್ರಾವೆಲ್ ಕಾರ್ಡ್ ಹಾಗೂ 2 ಲಕ್ಷ ಗಿಫ್ಟ್ ಕಾರ್ಡ್ ಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ.
ಚೆನ್ನೈ ಮೂಲದ ಇಂಡಿಯನ್ ಬ್ಯಾಂಕ್ ಕಳೆದ ವರ್ಷ ತನ್ನ ಗ್ರಾಹಕರಿಗೆ ಪ್ಲಾಟಿನಂ ಡೆಬಿಟ್ ಕಾರ್ಡ್ ಗಳನ್ನು ಪರಿಚಯಿಸಿತ್ತು ಈಗ ಟ್ರಾವೆಲ್ ಹಾಗೂ ಗಿಫ್ಟ್ ಕಾರ್ಡ್ ಗಳನ್ನು ನೀಡುತ್ತಿದೆ.
ಪ್ರೀಪೇಯ್ಡ್ ಗಿಫ್ಟ್ ಕಾರ್ಡ್ ಗಳು ಸದ್ಯಕ್ಕೆ 1,000 ಹಾಗೂ 5,000 ರು ಗುಣಕದಂತೆ ಲಭ್ಯವಿದೆ. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಸೌಲಭ್ಯ ಹೊಂದಬಹುದು. ಇದೇ ರೀತಿ ಟ್ರಾವೆಲ್ ಕಾರ್ಡ್ ಗಳನ್ನು ಯುಎಸ್ ಡಾಲರ್ ಮೌಲ್ಯದಲ್ಲಿ ನೀಡಲಾಗುತ್ತಿದ್ದು 200 ಯುಎಸ್ ಡಾಲರ್ ಆರಂಭಿಕ ಮೊತ್ತದೊಂದಿಗೆ ಸಿಗುತ್ತಿದೆ ಎಂದು ಇಂಡಿಯನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಿಎನ್ ಹೆಗ್ಡೆ ಹೇಳಿದ್ದಾರೆ.
ಇದಲ್ಲದೆ ಜನಸಾಮಾನ್ಯರಿಗೆ ಗಿಫ್ಟ್ ಕಾರ್ಡ್ ಹಾಗೂ ಮಲ್ಟಿ ಕರೆನ್ಸಿ ಡೆಬಿಟ್ ಕಾರ್ಡ್ ಗಳನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಚಯಿಸಲು ಯೋಜಿಸಿದ್ದೇವೆ. ಸದ್ಯಕ್ಕೆ ಈ ಪ್ರೀಪೇಯ್ಡ್ ಕಾರ್ಡ್ ಗಳು ಆಯ್ದ ಶಾಖೆಗಳಲ್ಲಿ ಮಾತ್ರ ಲಭ್ಯವಿದ್ದು, ನಂತರ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಹೆಗ್ಡೆ ಹೇಳಿದ್ದಾರೆ.












Click it and Unblock the Notifications