ಗೌರವಕ್ಕೆ ಚ್ಯುತಿತಂದರೆ ಪಕ್ಷ ಬಿಡೋದು ಗ್ಯಾರಂಟಿ:ಬಿಎಸ್‌ವೈ

ನನ್ನ ಗೌರವಕ್ಕೆ ಕುಂದುಂಟುಮಾಡುವ ಪ್ರಯತ್ನ ನಮ್ಮ ಪಕ್ಷದಲ್ಲೇ ನಡೆಯುತ್ತಿದೆ. ಇದು ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಇದೇ ವರ್ತನೆ ಮುಂದುವರಿದರೆ ಪಕ್ಷವನ್ನೇ ತೊರೆದುಬಿಡುವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಪೋದ್ರಿಕ್ತರಾಗಿ ನುಡಿದಿದ್ದಾರೆ.
ನನಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸಿದವರು ನನ್ನ ಪಕ್ಷದವರೇ ಎಂದು ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ ತಮಗೆ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿಯಾಗುವ ಆಸೆಯಿದೆ. ಜನತೆ ಆಶೀರ್ವಾದ ಮಾಡಿದರೆ ಮತ್ತೆ ನಾನು ಸಿಎಂ ಆಗುವುದು ಖಚಿತ ಎಂದು ಭರವಸೆಯ ಮಾತುಗಳಾಡಿದ್ದಾರೆ.
ರೇಣುಕಾಚಾರ್ಯಗೂ ಹೆಚ್ಚುವರಿ ಜವಾಬ್ದಾರಿ ನೀಡಲಿ: ಈ ಮಧ್ಯೆ, ಸಚಿವ ಜಾರಕಿಹೊಳಿ ಅವರು ಹೆಚ್ಚುವರಿ ಖಾತೆ ಬೇಕು ಎಂದು ಪಟ್ಟುಹಿಡಿದಿದ್ದಾರಲ್ಲಾ ಎಂದು ಸುದ್ದಿಗಾರರು ಕೇಳಿದಾಗ, ಹಾಗಾದರೆ ರೇಣುಕಾಚಾರ್ಯಂಗೂ ಹೆಚ್ಚುವರಿ ಖಾತೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಬಿಎಸ್‌ವೈ ಬಿಜೆಪಿ ತೊರೆಯಲ್ಲ- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿಯನ್ನು ತೊರೆಯಲು ಸಾಧ್ಯವೇ ಇಲ್ಲ. ಅವರು ಬಿಜೆಪಿಯಲ್ಲಿ ಪ್ರಮುಖ ಹುದ್ದೆ ಗಿಟ್ಟಿಸಲು ಬಿಜೆಪಿ ತೊರೆಯುತ್ತೇನೆ ಎಂದು ಬೆದರಿಸುವ ಮೂಲಕ ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರಷ್ಟೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರರ ಜತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರಮುಖ ಹುದ್ದೆ ಗಿಟ್ಟಿಸಲು ಯಡಿಯೂರಪ್ಪ ಬೆದರಿಕೆಯ ಮೂಲಕ ಬ್ಲಾಕ್‌ಮೇಲ್ ತಂತ್ರ ಅನುಸರಿಸಿದ್ದಾರೆ ಎಂದು ದೂರಿದರು.
ಯಡಿಯೂರಪ್ಪರಿಗೆ ಈಗ ರೈತರ ಮೇಲೆ ಅತಿಯಾದ ಕಾಳಜಿ ಬಂದಿದೆ. ಇದೆಲ್ಲಾ ಜನರನ್ನು ಮರಳುಗೊಳಿಸುವ ತಂತ್ರ ಎಂದ ಅವರು, ಯಡಿಯೂರಪ್ಪ ಇದೀಗ ರೈತರ ಹಿತ ಮುಖ್ಯ ಎಂದು ಹೇಳುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪರಿಗೆ ಇದೀಗ ಜ್ಞಾನೋದಯವಾಗಿದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.












Click it and Unblock the Notifications