ಈ ಗಣಪತಿ ಪೆಂಡಾಲಿಗೆ 224 ಕೋಟಿ ವಿಮೆ ಭಾಗ್ಯ

mumbai-andheri-raja-ganpati-gets-rs-224-crore-insurance
ಮುಂಬೈ, ಸೆ.15: ಗಣೇಶನ ಹಬ್ಬಕ್ಕೆ ಇನ್ನು ಮೂರೇ ದಿನ ಬಾಕಿಯಿದೆ. ಈ ಮಧ್ಯೆ, ಮುಂಬೈ ಗಣೇಶೋತ್ಸವಕ್ಕೆ ಈ ಬಾರಿ ವಿಶೇಷ ಮೆರಗು ಬಂದಿದೆ. ಹಾಗೆ ನೋಡಿದರೆ, ಇಲ್ಲಿನ ಗಣೇಶನ ಹಬ್ಬದ ಇತಿಹಾಸ ಅನಾದಿಕಾಲದಿಂದಲೂ ನಿಜಕ್ಕೂ ವೈಭವಯುತವಾಗಿದೆ. ಗಣೇಶನ ಹಬ್ಬದಲ್ಲಿ ದೇಶಭಕ್ತಿಯೊಂದಿಗೆ ಧಾರ್ಮಿಕ ಭಕ್ತಿ-ಭಾವಗಳೂ ಮೇಳೈಸುತ್ತವೆ. ಈ ಖ್ಯಾತಿಗೆ ತಕ್ಕಂತೆ ವಾಣಿಜ್ಯ ನಗರಿ ಮುಂಬೈನಲ್ಲಿನ ಈ ಹಬ್ಬಕ್ಕೆ ಈಗ ಮತ್ತೊಂದು ಗರಿಯೂ ಮೂಡಿದೆ.

ಏನಪಾ ಅಂದರೆ ಇಲ್ಲಿನ GSB King's Circle ನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ವಿನಾಯಕನನ್ನು ಕೂಡಿಸುತ್ತಾರೆ. ಇಲ್ಲಿ ಆಚರಿಸುವ ಹಬ್ಬ ಇಡೀ ಮಹಾನಗರದಲ್ಲಿ ಹೆಚ್ಚು ಜನಪ್ರಿಯ. ಹಾಗಾಗಿ ಇಲ್ಲಿ ಹಾಕುವ ಗಣೇಶನ ಪೆಂಡಾಲಿಗೆ ಈ ಬಾರಿ ವಿಮಾ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಈ ಶ್ರೀಮಂತ ಗಣೇಶನಿಗೆ 224 ಕೋಟಿ ರೂ. ವಿಮೆ ಕಲ್ಪಿಸಲು ವಿಮಾ ಕಂಪನಿಗಳು ನಾಮುಂದು ತಾಮುಂದು ಎಂದಿವೆ.

ಯಾವುದೇ ಅವಘಡ ಅಥವಾ ದಾಳಿಗಳಿಂದಾಗುವ ಅನಾಹುತಗಳನ್ನು ಎದುರಿಸಲು ಗಣೇಶನ ಪೆಂಡಾಲಿಗೆ ಭದ್ರತೆ ಒದಗಿಸುವುದು ಈ ವಿಮೆ ಸೌಲಭ್ಯದ ಉದ್ದೇಶವಾಗಿದೆ. ಸಿಸಿಟಿವಿ ಕ್ಯಾಮರಾ, ಮೆಟಲ್ ಡಿಟೆಕ್ಟರ್ ಗಳು, ಖಾಸಗಿ ಭದ್ರತಾ ಸಂಸ್ಥೆಗಳು ಮತ್ತು ಸ್ವಯಂಸೇವಕರು ಅಹಿರ್ನಿಷಿ ಇಲ್ಲಿನ ಗಣೇಶ ಪೆಂಡಾಲುಗಳನ್ನು ಇಡೀ ತಿಂಗಳು ಕಾಯುತ್ತಾರೆ. ಸುಮಾರು 15 ಲಕ್ಷ ಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನು ಲಾಲಬಾಗ್ಚಾ ರಾಜಾ ಪ್ರದೇಶದಲ್ಲಿ ಹಾಕುವ ಪೆಂಡಾಲಿಗೆ ಕಲ್ಪಿಸುವ ವಿಮಾ ಮೊತ್ತವನ್ನು 14 ಕೋಟಿಯಿಂದ 45 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. 15-20 ದಿನಗಳ ಕಾಲಾವಧಿಗೆ ಈ ಪಾಟಿ ವಿಮೆ ಪರಿಹಾರ ಮೊತ್ತ ನಿಗದಿಪಡಿಸುವುದಕ್ಕೆ ಭಾರಿ ಪ್ರೀಮಿಯಂ ಮೊತ್ತವನ್ನೂ ನಿಗದಿಪಡಿಸಲಾಗುತ್ತದೆ. ಅದು ಹಲವಾರು ಲಕ್ಷ ರೂ. ಗಳದ್ದಾಗಿರುತ್ತದೆ.

'ಅಂಧೇರಿಯ ರಾಜಾ' ಎಂದೇ ಖ್ಯಾತನಾದ ಗಣೇಶನಿಗೆ ಆಜಾದ್ ನಗರ್ ಉತ್ಸವ ಸಮಿತಿಯು 20 ಕೋಟಿ ರೂ. ವಿಮೆ ಒದಗಿಸಲಾಗಿದೆ. ಎಲ್ಲ ವಿನಾಯಕನ ಲೀಲೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+