ಹಾದಿಬೀದಿ ರಂಪವಾದ ಕೆಎಂಎಫ್ ಕುರ್ಚಿ ವಿವಾದ

ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿರುವ ಡಾ. ಎಂ ಎನ್ ವೆಂಕಟರಾಮು ಅವರನ್ನು ವ್ಯವಸ್ಥಾಪಕ ಹುದ್ದೆಯಿಂದ ಬದಲಿಸಿ ಆ ಸ್ಥಾನಕ್ಕೆ ಪ್ರೇಮನಾಥ್ ಅವರನ್ನು ನೇಮಿಸಲಾಗಿತ್ತು.
ಆದರೆ ನಿರ್ದೇಶಕ ಸ್ಥಾನ ಕುರ್ಚಿಯಿಂದ ಕೆಳಗಿಳಿಯಲು ವೆಂಕಟರಾಮು ನಿರಾಕರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗಾಗಿ ಈ ಸಂಬಂಧ ಮುಂದಿನ ಕ್ರಮ ಚರ್ಚಿಸುವ ಸಲುವಾಗಿ ಕೆಎಂಎಫ್ ಆಡಳಿತ ಮಂಡಳಿಯ ತುರ್ತು ಸಭೆ ಕರೆಯಲಾಗಿತ್ತು.
ಸಭೆ ನಡೆಯುತ್ತಿದ್ದ ವೇಳೆ ವೆಂಕಟರಾಮು ಅವರ ಬೆಂಬಲಿಗರು ಪ್ರೇಮನಾಥ್ ಮೇಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಲಿಂಗೇಶ್ ಎನ್ನುವ ವ್ಯಕ್ತಿ ಪ್ರೇಮನಾಥ್ ಅವರ ಕೊರಳ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೆಲ ಹೊತ್ತು ಕೆಎಂಎಫ್ ಪ್ರಧಾನ ಕಚೇರಿ ಇರುವ ಡೈರಿ ವೃತ್ತದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.












Click it and Unblock the Notifications