ಸದಾನಂದ ದಂಪತಿಗೆ ಶುರುವಾಯ್ತು ಲೋಕಾ ಕಂಟಕ

Sadananda Gowda Lokayukta Court orders probe
ಬೆಂಗಳೂರು, ಸೆ.11: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರೂ ತಮ್ಮ ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹಾದಿಯಲ್ಲೇ ಸಾಗಿದ್ದಾರೆ. ಮರೆ ಮಾಚಿ ಆಸ್ತಿ ಮಾಡಿಕೊಂಡಿರುವ ಆರೋಪ ಅವರ ಹೆಗಲಿಗೆ ಬಲವಾಗಿ ಅಂಟಿಕೊಂಡಿದೆ.

ಸದಾನಂದ ಗೌಡರ ಪತ್ನಿ ಡಾಟಿ ಅವರಿಗೂ ಲೋಕಾಯುಕ್ತ ಕಾಟ ಶುರುವಾಗಿದ್ದು, ಅವರ ವಿರುದ್ಧವೂ ಪ್ರಕರಣದಲ್ಲಿ ದೂರು ನೀಡಲಾಗಿದೆ. ಪ್ರಕರಣದ ವಿಚಾರಣೆ ಸೆ. 22ಕ್ಕೆ ನಡೆಯಲಿದೆ.

ಈ ಸಂಬಂಧ ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ಅವರು ಕಳೆದ ವಾರ ದಾಖಲಿಸಿದ್ದ ದೂರು ವಿಚಾರಣೆಗೆ ಅರ್ಹ ಎಂದು ಪರಿಗಣಿಸಿದ ಲೋಕಾಯುಕ್ತ ನ್ಯಾಯಾಧೀಶ ನ್ಯಾ ಎನ್‌.ಕೆ. ಸುಧೀಂದ್ರರಾವ್‌ ಅವರು ಮೇಲ್ನೋಟಕ್ಕೆ ದೂರಿನಲ್ಲಿ ಸತ್ಯಾಂಶವಿದೆ ಅನಿಸುತ್ತದೆ. ಆದ್ದರಿಂದ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದಿದ್ದಾರೆ. ಇದರಿಂದ ಸದಾನಂದ ಗೌಡರಿಗೆ ಕೋರ್ಟ್ ಅಲೆದಾಟ ಶುರುವಾಗಲಿದೆ.

ಜನಪ್ರತಿನಿಧಿಯಾಗಿ ಅಕ್ರಮ ಆಸ್ತಿ ಸಂಪಾದನೆ ಮತ್ತು ಅಧಿಕಾರ ದುರುಪಯೋಗ ಆರೋಪ ಹೊರಿಸಿ ಒಟ್ಟು ಮೂರು ಪ್ರಕರಣಗಳನ್ನು ಸದಾನಂದರ ವಿರುದ್ಧ ಪತ್ರಕರ್ತೆ ನಾಗಲಕ್ಷ್ಮಿ ಬಾಯಿ ದಾಖಲಿಸಿದ್ದಾರೆ.

ಮರೆ ಮಾಚಿರುವ ಆಸ್ತಿ:
ಸದಾನಂದಗೌಡ ಅವರು 1998ರಲ್ಲಿ ಪುತ್ತೂರಿನಲ್ಲಿ 10 ಸೆಂಟ್‌ ನಿವೇಶನವನ್ನು ಅಕ್ರಮವಾಗಿ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಹೊರ ವಲಯದ ಬಾಗಲೂರು ಬಳಿ 7.5 ಗುಂಟೆ ಜಮೀನು ಖರೀದಿಸಿದ್ದಾರೆ. ಇದು ಗೋಮಾಳಕ್ಕೆ ಸೇರಿದ ಭೂಮಿ. ಭೂ ಪರಿವರ್ತನೆ ಮಾಡಿಕೊಳ್ಳದೆಯೇ ಇಲ್ಲಿ ಮನೆ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ ಸಂಸದರಾಗಿದ್ದಾಗ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನ ಪಡೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ಎಚ್‌.ಎಸ್‌.ಆರ್‌.ಬಡಾವಣೆಯಲ್ಲಿ ತಮ್ಮ ಪತ್ನಿ ಡಾಟಿ ಅವರ ಹೆಸರಲ್ಲಿ ಮನೆ ಹೊಂದಿರುವ ಅಂಶವನ್ನು ಪ್ರಸ್ತಾಪಿಸಿಲ್ಲ. ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಧಿಕಾರ ಎಂದು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+