ಚಿನ್ನದ ಬೆಲೆ 50 ರು ದಿಢೀರ್ ಇಳಿಕೆ

ಬೆಳ್ಳಿ ಕೂಡಾ ಸುಮಾರು 300 ರು ಕಳೆದುಕೊಂಡು 61,500 ಪ್ರತಿ ಕೆಜಿಯಂತೆ ಮಾರಾಟವಾಗಿದೆ. ಕೈಗಾರಿಕ ಹಾಗೂ ನಾಣ್ಯ ತಯಾರಿಕೆ ಕಂಪನಿಗಳಿಂದ ಬೇಡಿಕೆ ಕುಸಿದ ಪರಿಣಾಮ ಬೆಳ್ಳಿ ದರ ಇಳಿಕೆಗೆ ಮುಖ್ಯ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ಚಿನ್ನದ ದರ 32,100.00 ರು (24K), 29,850 ರು(22K), ಬೆಳ್ಳಿ 1 ಕಿಲೋ 62,1000 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(32,290), 24K(32420.00) ಇದೆ. ಅಹಮದಾಬಾದಿನಲ್ಲಿ 32435.00(22K), 32310.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 32 ಸಾವಿರ ಗಡಿಯಲ್ಲೇ ಚಿನ್ನದ ದರ ಮುಂದುವರೆದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರು, ಡಚ್ ಚುನಾವಣೆ, ಜರ್ಮನಿಯ ಯುರೋಪಿಯನ್ ಬೇಲ್ ಔಟ್ ಫಂಡ್ ಮುಂತಾದ ಕಾರಣಗಳ ಜೊತೆಗೆ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಪರಿಣಾಮ ಉದ್ಯಮಿಗಳು ಷೇರುದಾರರು ಹಳದಿ ಲೋಹ ಖರೀದಿಯತ್ತ ಹೆಚ್ಚಿನ ಆಸಕ್ತಿ ವಹಿಸದಿರುವುದು ದಿಢೀರ್ ಕುಸಿತಕ್ಕೆ ಕಾರಣ ಎನ್ನಬಹುದು.
ಯುರೋ ವಲಯದಲ್ಲಿನ ಸಾಲ ಬಿಕ್ಕಟ್ಟು ಪರಿಹರಿಸುವಲ್ಲಿ ಯುರೋಪಿನ ಸೆಂಟ್ರಲ್ ಬ್ಯಾಂಕ್ ಸರ್ಕಾರಿ ಬಾಂಡ್ ಖರೀದಿ ಮಿತಿಯನ್ನು ತೆಗೆದು ಹಾಕುವ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ US $ 1,733 ನಷ್ಟಿತ್ತು. ಬೆಳ್ಳಿ ಪ್ರತಿ ಔನ್ಸ್ ಗೆ 33.34 USD ನಷ್ಟಿತ್ತು.
ಎರಡು ವಾರಗಳಲ್ಲಿ 10ಗ್ರಾಮ್‌ಗಳಿಗೆ 1,555ರೂ.ಗಳಷ್ಟು ಏರಿಕೆಯಾಗಿ ದೇಶದೆಲ್ಲೆಡೆ 32 ಸಾವಿರ ರು ಗಡಿ ದಾಟಿತ್ತು. ಶುದ್ಧ ಚಿನ್ನ 10 ಗ್ರಾಮ್‌ಗೆ 32,300 ರೂ., ಆದರೆ 8ಗ್ರಾಮ್‌ಗಳ ನಾಣ್ಯಕ್ಕೆ 200 ರೂ. ಏರಿ 25,250ರೂ.ಗಳಾಗಿತ್ತು.
ಮುಂದಿನ ಹಬ್ಬ ಹಾಗೂ ಮದುವೆ ಋತುವಿನಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದಿಢೀರ್ ಕುಸಿತದಿಂದ ಚೇತರಿಸಿಕೊಳ್ಳಲಿದೆ ಎಂದು ಅಖಿಲ ಭಾರತೀಯ ಸರಾಫ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಂದರ್ ಜೈನ್ ತಿಳಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿದಿರುವುದೂ ಚಿನ್ನದ ಆಮದನ್ನು ದುಬಾರಿಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.












Click it and Unblock the Notifications