ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಟ್ವಿಟ್ಟರ್ ನಿಷೇಧ?

 Govt planned barring Twitter after NE exodus
ನವದೆಹಲಿ, ಸೆ.10: ದೇಶದ ವಿವಿಧ ಭಾಗಗಳಲ್ಲಿ ಈಶಾನ್ಯ ರಾಜ್ಯಗಳ ಜನತೆಯ ಆತಂಕಕ್ಕೆ ಕಾರಣವಾದ ಸಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ಇನ್ಮುಂದೆ 8 ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗುತ್ತದೆ ಎಂದು ಸಂವಹನ ಮತ್ತು ಐಟಿ ಸಂಸ್ಥೆ(DEIT) ಮೂಲಗಳು ಹೇಳಿದೆ.

ಟ್ವಿಟ್ಟರ್ ಬಳಕೆ ತಡೆ ಹಿಡಿಯಲು ಸರ್ಕಾರ ಮತ್ತೊಮ್ಮೆ ಚಿಂತನೆ ನಡೆಸಿದೆ. ಟ್ವಿಟ್ಟರ್ ನ್ನು ತಡೆಹಿಡಿಯಲು ಸಂವಹನ ಮತ್ತು ಐಟಿ ಸಂಸ್ಥೆ ಬಯಸಿದ್ದು ಪರಿಣತರೊಂದಿಗೆ ಚರ್ಚಿಸಿ ಮುಂದಿನ ಕಾರ್ಯ ನಡೆಸಲಾಗುತ್ತದೆ.

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಅಸ್ಸಾಂ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಟ್ವಿಟ್ಟರ್ ನಿಷೇಧಿಸಲು ಗುರುತಿಸಿಕೊಳ್ಳಲಾಗಿದೆ. ಟ್ವಿಟ್ಟರ್‌ನಲ್ಲಿದ್ದ ಕೆಲವು ಬರಹಗಳು ಹಾಗೂ ಚಿತ್ರಗಳು ಜನರಲ್ಲಿ ಆತಂಕ ಮತ್ತು ವಲಸೆಗೆ ಕಾರಣವಾಗಿದೆ ಎಂದು ಗೃಹ ಇಲಾಖೆ ಅಭಿಪ್ರಾಯಿಸಿದ ಹಿನ್ನೆಲೆಯಲ್ಲಿ ಡಿಇಐಟಿ ಸಂಸ್ಥೆ ಟ್ವಿಟ್ಟರ್ ನಿಷೇಧಿಸಲು ಚಿಂತಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ ನಾರಾಯಣ್ ಮತ್ತು ಪ್ರಧಾನಿ ಕಾರ್ಯದರ್ಶಿ ಪುಲಕ್ ಚಟರ್ಜಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು ಎಂದು ತಿಳಿಸಿವೆ. ಟ್ವಿಟ್ಟರ್ ಮುಂತಾದ ಆನ್‌ಲೈನ್ ಬರಹಗಳ ಮೇಲೆ ನಿಯಂತ್ರಣವನ್ನು ಇರಿಸಲು ವಿಮರ್ಶೆ ಸಮಿತಿಯನ್ನು ನೇಮಿಸಲು ನಂತರ ತೀರ್ಮಾನಿಸಲಾಯಿತು.

ಪ್ರಚೋದನಕಾರಿ ಹಾಗೂ ತಿರುಚಲ್ಪಟ್ಟ ಬರಹಗಳನ್ನು ಅಪ್‌ಲೋಡಿ ಮಾಡಿ ರಾಷ್ಟ್ರದ ಜನರನ್ನು ಕೋಮುವಾದಕ್ಕೆ ಪ್ರಚೋದಿಸುತ್ತಿದ್ದ ಹಾಗೂ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವಾಸವಾಗಿದ್ದ ಈಶಾನ್ಯ ಜನರ ವಲಸೆಗೆ ಕಾರಣವಾದ 310 ವೆಬ್‌ಪೇಜ್‌ಗಳನ್ನು ತಡೆಹಿಡಿಯಲು ಸರಕಾರವು ಈಗಾಗಲೇ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಈಶಾನ್ಯ ಭಾರತದ ಗಲಭೆಗೆ ಕಾರಣವಾಗಿರುವ ಎಸ್ ಎಂಎಸ್ ಸಂದೇಶಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊಬೈಲ್ ಸಂದೇಶ ಸೇವೆಗೆ ನಿರ್ಬಂಧ ಹೇರಿದ ಬೆನ್ನಲ್ಲೇ ಹಲವು ವೆಬ್ ಪುಟಗಳನ್ನು ಸರ್ಕಾರ ಬಂದ್ ಮಾಡಿತ್ತು.

ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಸಂದೇಶ ಹರಡಲು ವೇದಿಕೆಯಾಗಿ ಗಲಭೆ ಹಬ್ಬಲು ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಸೇರಿದಂತೆ 80 ವೆಬ್ ಪುಟಗಳು ಹಾಗೂ ವೆಬ್ ಖಾತೆಗಳನ್ನು ತಡೆ ಹಿಡಿಯಲು ಸರ್ಕಾರ ಆದೇಶ ರವಾನಿಸಿತ್ತು.

ಮೊಬೈಲ್ ಸಂದೇಶಗಳ ನಿಷೇಧದ ಮುಂದಿನ ಭಾಗವಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳನ್ನು ಕೆಲ ದಿನಗಳ ಮಟ್ಟಿಗೆ ನಿಷೇಧ ಹೇರುವ ಬಗ್ಗೆ ಸರ್ಕಾರದ ನಿರ್ಣಯ ವಿರುದ್ಧ ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ(fsmk) ಸಂಘಟನೆ ಪ್ರತಿಭಟನೆ ನಡೆಸಿತ್ತು.

ಅಂತರ್ಜಾಲದಲ್ಲಿನ ವ್ಯಕ್ತಿಗತ ವಿವರಗಳನ್ನು ಸೆನ್ಸಾರ್ ಮಾಡುವ ಕಾನೂನನ್ನು ಸರ್ಕಾರ ರೂಪಿಸುವ ಹಂತದಲ್ಲಿ ಎಡವಿತ್ತು. ಇದರಿಂದಾಗಿ ಫೇಸ್‌ಬುಕ್‌ನಂಥ ಸಾಮಾಜಿಕ ತಾಣಗಳಲ್ಲಿನ ಬರಹಗಳಿಗೆ ಸೆನ್ಸಾರ್, ಸ್ಕೈಪಿಯಂತಹ ಆನ್‌ಲೈನ್ ಸಂಭಾಷಣೆಗಳನ್ನು ಕದ್ದಾಲಿಸಲು, ಟ್ವಿಟ್ಟರ್ ಅಥವಾ ಬ್ಲಾಗ್‌ಗಳಲ್ಲಿನ ಬರಹಗಳನ್ನು ನಿಯಂತ್ರಣ, ಆನ್‌ಲೈನ್ ಚಟುವಟಿಕೆಗಳ ಮೇಲೆ ಬೇಹುಗಾರಿಕೆ ನಡೆಸಲು ಸಾಧ್ಯವಾಗುತ್ತದೆ ಎಂದು ಧರಣಿ ನಿರತರು ಆರೋಪಿಸಿದ್ದರು. ಹೀಗಾಗಿ ಸರ್ಕಾರದ ನಿಷೇಧಗಳ ಪರ ವಿರೋಧ ಪ್ರತಿಕ್ರಿಯೆಗಳು ನಿರಂತರವಾಗಿ ಸಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+