• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಸ್ಸಾಂ ಸಮಸ್ಯೆಗೆ ನಮ್ಮ ಅನಕ್ಷರಸ್ಥ ಮುಸ್ಲಿಮರೇ ಕಾರಣ

By Srinath
|
ನವದೆಹಲಿ, ಸೆ.10: ಅಸ್ಸಾಂನಲ್ಲಿ ಇತ್ತೀಚೆಗೆ ತಾಂಡವವಾಡುತ್ತಿರುವ ಜನಾಂಗೀಯ ಕಲಹಕ್ಕೆ ಅಸ್ಸಾಂ ಮುಖ್ಯಮಂತ್ರಿ ತರೂಣ್ ಗೊಗೋಯ್ ಅವರು ಹೊಸ ತಿರುವು ಕೊಟ್ಟಿದ್ದಾರೆ.

ಅಸ್ಸಾಂನ ಜನಾಂಗೀಯ ಕಲಹಕ್ಕೆ ಕಾರಣ ಬಾಂಗ್ಲಾದೇಶದ ಅಕ್ರಮ ವಲಸಿಗರಲ್ಲ; ಬದಲಿಗೆ ನಮ್ಮಲ್ಲೇ ಇರುವ ಅನಕ್ಷರ ಮುಸ್ಲಿಮರು ಇಂತಹ ಸಮಸ್ಯೆಗೆ ಕಾರಣಕರ್ತರಾಗುತ್ತಿದ್ದಾರೆ. ಅನಕ್ಷರಸ್ಥ ಮುಸ್ಲಿಮರಿಂದ ಜನಸಂಖ್ಯಾ ಹೆಚ್ಚಳವಾಗಿ ಕಲಹಕ್ಕೆ ಕಾರಣವಾಗುತ್ತಿದೆ ಎಂದು ಮೂರು ಬಾರಿ ಮುಖ್ಯಮಂತ್ರಿಯಾಗಿರುವ ತರೂಣ್ ಗೊಗೋಯ್ ತಮ್ಮ ರಾಜ್ಯದ ಸಮಸ್ಯೆಗೆ ಹೊಸ ಸ್ವರೂಪ ಕೊಟ್ಟಿದ್ದಾರೆ.

ಇದೇ ವೇಳೇ ರಾಜ್ಯದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ ಎಂಬ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ಅಸ್ಸಾಂನ ಜನಸಂಖ್ಯಾ ಹೆಚ್ಚಳದಲ್ಲಿ ಮುಸ್ಲಿಮರು ಹಿಂದೂ ಸಮೂದಾಯಕ್ಕಿಂತ ಮುಂದಿದ್ದು ಬಡತನ ಮತ್ತು ಅನಕ್ಷರತೆಯು ಮುಸ್ಲಿಂ ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರತಿಯೊಂದು ಕುಟುಂಬದಲ್ಲೂ 6, 7, 8, 9 ಮಕ್ಕಳಿವೆ. ಅನಕ್ಷರತೆಯೇ ಇದಕ್ಕೆ ಹೇತುವಾಗಿದೆ ಎಂದಿದ್ದಾರೆ.

2001 ರ ಜನಗಣತಿಯಲ್ಲಿ ಅಸ್ಸಾಂ ಮಸ್ಲಿಮರ ಜನಸಂಖ್ಯೆಯು ರಾಷ್ಟ್ರದ ಸರಾಸರಿ ಜನಸಂಖ್ಯೆಗಿಂತ ಕಡಿಮೆ ಇದ್ದು ಕೇವಲ ಶೇ. 3 ರಷ್ಟಿತ್ತು. 2011ರಲ್ಲೂ ಇದು ರಾಷ್ಟ್ರದ ಸರಾಸರಿ ಜನಸಂಖ್ಯೆಗಿಂತ ಕಡಿಮೆ ಇದೆ. ಇದು ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ವಿವಿಧ ನ್ಯಾಯಾಧೀಕರಣಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಶಂಕಿತ ಅಕ್ರಮ ವಲಸಿಗರ ವಿರುದ್ಧ ಪ್ರಕರಣಗಳಿದ್ದು ಇದನ್ನು ಸಾಬೀತುಪಡಿಸುವುದು ಕಷ್ಟಸಾಧ್ಯವಾಗಿದೆ ಎಂದವರು ತಿಳಿಸಿದರು. ಬೊಡೊ ಲ್ಯಾಂಡ್ ಬಿಟಿಸಿ ಪ್ರದೇಶದಲ್ಲಿ ಸುಮಾರು 2 ಲಕ್ಷ ಅಕ್ರಮ ವಲಸಿಗರು ಇರುವುದಾಗಿ ತಿಳಿಸಿದ ಬೊಡೊ ಲ್ಯಾಂಡ್ ಕೌನ್ಸಿಲ್ ಅಧ್ಯಕ್ಷ ಹಗ್ರಮಾ ಮೊಹಿಲರಿಯನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಇದು ತಪ್ಪು ಅಂಕಿಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಪಿಎಫ್ ಪಕ್ಷ ಸರ್ಕಾರದ ಮಿತ್ರ ಪಕ್ಷವಾಗಿರುವುದರಿಂದ ಬೋಡೊಗಳ ಬಗ್ಗೆ ಮೃಧು ದೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ರಾಜ್ಯದಲ್ಲಿ 176 ಶಾಸಕರ ಸಭೆಯಲ್ಲಿ 78 ಸ್ಥಾನಗಳೊಂದಿಗೆ ನನ್ನ ಕಾಂಗ್ರೆಸ್ ಪಕ್ಷಕ್ಕೆ ಸುಬಧ್ರವಾಗಿದೆ ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮುಸ್ಲಿಂ ಸುದ್ದಿಗಳುView All

English summary
Assam Chief Minister Tarun Gogoi on Sunday said that Illiterate India Muslims root cause for Assam problem as they have high birth rate among the community. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more