ಬಿಬಿಎಂಪಿ ಕಸ ವಾಹನ ಭೀಕರ ಡಿಕ್ಕಿ: ಒಂದು ಸಾವು
ಬೆಂಗಳೂರು,
ಸೆ.10: ನಗರದ ಹೊರವಲಯದಲ್ಲಿ ಮಂಡೂರು ಬಳಿ ಬಿಬಿಎಂಪಿ ಕಸ ಸಾಗಣೆ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಒಂದು ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿಯಲ್ಲಿದ್ದ ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. id="toptextpromo">ಮಹಾದೇವಪುರದ
ಮಂಡೂರು ಸಮೀಪ ಕಸ ವಿಲೇವಾರಿ ಘಟಕಕ್ಕೆ ಕಸ ಸಾಗಿಸುವಾಗ ಮೇಡಹಳ್ಳಿ ಸೇತುವೆಯ ಬಳಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಲಾರಿ ಚಾಲಕ ಪಂಚಾಲಯ್ಯ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಲಾರಿಯಲ್ಲಿದ್ದ ಇನ್ನೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡೂ ಲಾರಿಗಳ ಮುಂಭಾಗ ತೀವ್ರವಾಗಿ ನುಜ್ಜುಗುಜ್ಜಾಗಿದೆ. id='are-slot-1' class='oiad oi-axt oiadv'> id='top-searched-articles'>ಅಪಘಾತಕ್ಕೀಡಾದ
ಈ ಲಾರಿಗಳು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಗೆ ಸೇರಿದ ಲಾರಿಗಳಾಗಿವೆ ಎನ್ನಲಾಗಿದೆ. ಈ ಬಗ್ಗೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯರಾಂ ಹೆಚ್ಚುವರಿ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.











Click it and Unblock the Notifications