ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗವಾನ್ ಮಹಾವೀರನಿಗೆ ಮದುವೆಯಾಗಿತ್ತಂತೆ?

By Mahesh
|
Google Oneindia Kannada News

bhagawan Mahaveer
ಬೆಂಗಳೂರು, ಸೆ.4: ಕರ್ನಾಟಕದ ಶಿಕ್ಷಣ ಇಲಾಖೆ ಅವಾಂತರದಿಂದ ಜೈನ ಸಮುದಾಯ ಸಿಡಿದೆದ್ದಿದೆ. ಜೈನ ತೀರ್ಥಂಕರ ಮಹಾವೀರನಿಗೆ ವಿವಾಹವಾಗಿತ್ತು ಎಂದು ರಾಜ್ಯದ 8 ನೇ ತರಗತಿಯ ಲಕ್ಷಾಂತರ ಮಕ್ಕಳಿಗೆ ರಾಜ್ಯ ಸರ್ಕಾರ ಬೋಧಿಸುತ್ತಿದೆ. 8 ನೇ ತರಗತಿಯ ಸಮಾಜ ಶಾಸ್ತ್ರ ಪಠ್ಯದ ಪ್ರಕಾರ ಮಹಾವೀರನಿಗೆ ಮದುವೆಯಾಗಿತ್ತಂತೆ.

ಇತಿಹಾಸಕಾರರು, ಸಂಶೋಧಕರು, ಜೈನ ಧರ್ಮೀಯರು ಮಹಾವೀರ ಬ್ರಹ್ಮಚಾರಿ ಎಂದು ನಂಬಿದ್ದರು. ಪ್ರಸಕ್ತ ಸಾಲಿನ 8ನೇ ತರಗತಿ ಪಠ್ಯ ಸಿದ್ದಪಡಿಸಿದ ಇತಿಹಾಸ ನಿಪುಣರು, ಪುಸ್ತಕ ಪಠ್ಯ ಪರಿಶೀಲನೆ ಮಾಡಿದ ಸಮಿತಿಯಿಂದ ಶಿಕ್ಷಣ ಇಲಾಖೆ ಈಗ ಜೈನ ಸಮುದಾಯದ ಆಕ್ರೋಶಕ್ಕೆ ತುತ್ತಾಗಿದೆ.

ಐತಿಹಾಸಿಕ ನಂಬಿಕೆಯೇ ಉಲ್ಟಾ ಆಗುವಂತೆ ಮಾಡಿರುವ ಈ ಅವಾಂತರ ಇಲ್ಲಿಗೆ ನಿಂತಿಲ್ಲ. ಈ ವರ್ಷದ ಐದನೇ ತರಗತಿಯ ಪಠ್ಯ ಪುಸ್ತಕದಲ್ಲೂ ಮಹಾವೀರನ ಬಗ್ಗೆ ಪಾಠವಿದ್ದು, ಇದರಲ್ಲಿನ ಅಂಶಗಳು ಸಮರ್ಪಕವಾಗಿವೆ. ಆದರೆ, ಪ್ರೌಢಾವಸ್ಥೆಗೆ ಬಂದ 8ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳ ಪಠ್ಯದಲ್ಲಿ ಮಾತ್ರ ಮಹಾವೀರನಿಗೆ ಯಶೋಧರಾ ಎಂಬಾಕೆಯೊಂದಿಗೆ ವಿವಾಹವಾಗಿದೆ ಎಂದು ಮುದ್ರಿಸಲಾಗಿದೆ.

ಎಲ್ಲಕ್ಕಿಂತ ಮಿಗಿಲಾಗಿ ಪಠ್ಯದಲ್ಲಿ ಮಹಾವೀರನ ಚಿತ್ರ ಇರಬೇಕಾದ ಜಾಗದಲ್ಲಿ ಪಾರ್ಶ್ವನಾಥ(23ನೇ ತೀರ್ಥಂಕರ)ನ ಚಿತ್ರವನ್ನು ಹಾಕಲಾಗಿದೆ. ಇತಿಹಾಸದ ತಿರುಳನ್ನೇ ತಿರುಚಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ದಾರಿ ತಪ್ಪಿಸಿರುವ ಈ ಪಠ್ಯವನ್ನು ಕೂಡಲೇ ಬದಲಿಸಬೇಕು ಇಲ್ಲವೇ ಪರಿಷ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದ್ದಾರೆ.

ಪಠ್ಯ ಸಿದ್ದಪಡಿಸಿರುವ ತಜ್ಞರ ಸಮಿತಿಯನ್ನು ಕಿತ್ತೊಗೆದು ಲೋಪ ಎಸಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜೈನ ಸಮುದಾಯ ಆಗ್ರಹಿಸಿದೆ. ಇಂಗ್ಲೀಷ್ ನಲ್ಲಿರುವ ಪಠ್ಯದ ಪ್ರತಿ ಹೀಗಿದೆ:

"Vardhamana (Mahaveera was born so) was born in Kundala Grama village in Vaishali, one of the republics. His father was Siddartha the king of the Gnatrika tribe. His mother was Trishala Devi, the princess of the republic of Lichchavi. Vardhamana was married to Yashodhara. At the age of 30 Vardhamana went out in search of truth and renounced his family and house. He wandered for 12 years in this quest and meditated. He punished his body by fasting. At the age of 42 he achieved enlightenment..."

ವರ್ಧಮಾನ ಅವರ ಬದುಕಿನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸುತ್ತಾರೆ ಎಂದು ನಂಬಿದ್ದೇವೆ. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಐತಿಹಾಸಿಕ, ಧಾರ್ಮಿಕ ವಿಷಯಗಳಲ್ಲಿ ಸೂಕ್ಷ್ಮತೆಯಿಂದ ವರ್ತಿಸಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು ಎಂದು ಭಾರತೀಯ ಜೈನ ಮೇಳದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಹೇಳಿದ್ದಾರೆ.[ಅಲ್ಪಸಂಖ್ಯಾತರ ಪಟ್ಟಿಗೆ ಜೈನ ಸಮುದಾಯ]

ಆದರೆ, ಪಠ್ಯ ಪುಸ್ತಕಗಳ ಸಮಿತಿಯ ಮುಖ್ಯಸ್ಥ ಡಾ ಜಿಎಸ್ ಮುಡಂಬಡಿತ್ತಾಯ ಅವರು ಈ ಪ್ರಮಾದವನ್ನು ಸಮರ್ಥಿಸಿಕೊಂಡಿದ್ದಾರೆ. ಜೈನರಲ್ಲಿ ಶ್ವೇತಾಂತರ ಮತ್ತು ದಿಗಂಬರರು ಎಂಬ ಪಂಗಡಗಳಿದೆ. ಇವರಲ್ಲಿ ಶ್ವೇತಾಂಬರರ ಪ್ರಕಾರ ಭಗವಾನ್ ಮಹಾವೀರನಿಗೆ ಮದುವೆಯಾಗಿತ್ತು ಹಾಗೂ ದಿಗಂಬರರ ಪ್ರಕಾರ ಆಗಿಲ್ಲ ಎಂದು ತಿಳಿದು ಬರುತ್ತದೆ. ಅದರಂತೆ ನಾವು ಪಠ್ಯದಲ್ಲಿ ಈ ವಿಷಯ ಸೇರಿಸಿದ್ದೇವೆ ಎಂದಿದ್ದಾರೆ.

English summary
The revised eighth standard Social Science textbook of the state syllabus has angered the Jain community, who say that the chapter on Mahaveera provides wrong information about the Jain saint and carries a wrong picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X