ಕೋಟಿಗಟ್ಟಲೆ ಗ್ಯಾರಂಟಿ ಕೊಟ್ಟ ಮಲ್ಯಗೆ ಸಂಬಳವಿಲ್ಲ

ಕಿಂಗ್ ಫಿಷರ್ ಹೋಲ್ಡಿಂಗ್ ಹಾಗೂ ಸಹಭಾಗಿತ್ವ ಸಂಸ್ಥೆ 2010-11ರಲ್ಲಿ 6,156 ಕೋಟಿ ರು ಗ್ಯಾರಂಟಿ ನೀಡಿತ್ತು. ಇದೇ ಅವಧಿಗೆ ವಿಜಯ್ ಮಲ್ಯ ಅವರು 51 ಕೋಟಿ ಕಮಿಷನ್ ಹಣ ಪಡೆದಿದ್ದರು. ಆದರೆ, ಈ ಬಾರಿ ಯಾವುದೇ ಕಮಿಷನ್ ಹಣ ಪಡೆಯುವುದನ್ನು ತಡೆ ಹಿಡಿಯಲಾಗಿದೆ.
2011-12 ರ ವಾರ್ಷಿಕ ವರದಿ ಪರ್ಕಾರ ಈ ಅವಧಿಯಲ್ಲಿ ವಿಜಯ್ ಮಲ್ಯ ಅವರಿಗೆ ಯಾವುದೇ ಸಂಬಳ ನೀಡಿಲ್ಲವಂತೆ. ಅದರೆ, ಕಿಂಗ್ ಫಿಷರ್ ಸಂಸ್ಥೆ ಸಿಇಒ ಸಂಜಯ್ ಅಗರವಾಲ್ ಅವರ ಸಂಬಳ ಮಾತ್ರ ಡಬಲ್ ಆಗಿದೆ. ಸಂಜಯ್ ಅವರ ಸಂಬಳ 2.12 ಕೋಟಿ ರು ನಿಂದ 4.01 ಕೋಟಿ ರು.ಗೆ ಏರಿಸಲಾಗಿದೆ.
ಈ ಅವಧಿಯಲ್ಲಿ ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಇಳಿಮುಖವಾದರೂ ಸಂಬಳ ಭತ್ಯೆ ವಿಷಯದಲ್ಲಿ ಶೇ 1 ರಷ್ಟು ಕುಸಿತ ಕಂಡು 669.5 ಕೋಟಿ ರು.ಗೆ ಇಳಿದಿತ್ತು.
ಕಿಂಗ್ ಫಿಷರ್ ಸಂಸ್ಥೆಯಲ್ಲಿ 1,651 ಉದ್ಯೋಗಿಗಳ ಕೊರತೆ ಅಥವಾ 5,696 ರಲ್ಲಿ ಶೇ 22 ರಷ್ಟು ಉದ್ಯೋಗ ಕಡಿತ ಅನುಭವಿಸಿದೆ.
ಕಿಂಗ್ ಫಿಷರ್ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಮಲ್ಯ ಅವರು ಆರಂಭದಲ್ಲೇ "holding pattern" basis with limited operation, pending policy changes ಎಂದು ನಮೂದಿಸಿಬಿಟ್ಟಿದ್ದಾರೆ.
2011-12ರಲ್ಲಿ ನಿವ್ವಳ ನಷ್ಟ 2,328ಕೋಟಿ ರು ನಷ್ಟಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ 1,027 ಕೋಟಿ ರು. ನಷ್ಟಿತ್ತು.
ದೀರ್ಘಾವಧಿ ಸಾಲ ಮಾರ್ಚ್ 31,2012ಕ್ಕೆ ಅನ್ವಯವಾಗುವಂತೆ 5,695 ಕೋಟಿ ರು ನಷ್ಟಿದೆ. ಹಿಂದಿನ ವರ್ಷ6,306 ಕೋಟಿ ರು ನಷ್ಟಿತ್ತು.
ಅಲ್ಪಾವಧಿ ಸಾಲ ಮಾತ್ರ ಏರಿಕೆಯಾಗಿದ್ದು ಕಳೆದ ವರ್ಷ 6.4 ಕೋಟಿ ರು ಇದ್ದರೆ, 2011-12 ರಲ್ಲಿ 2,335 ಕೋಟಿ ರು. ಗೆ ಏರಿಕೆಯಾಗಿದೆ. ಈ ಸಾಲಕ್ಕೆ ಆಧಾರವಾಗಿ ಚರಾಸ್ಥಿ, ಟ್ರೇಡ್ ಮಾರ್ಕ್, ಕಂಪನಿ ಬ್ರಾಂಡ್ ನೇಮ್, ಕ್ರೆಡಿಟ್ ಕಾರ್ಡ್, ಕಿಂಗ್ ಫಿಷರ್ ಹೌಸ್ ಭೋಗ್ಯಕ್ಕೆ ನೀಡಲಾಗಿತ್ತು.
ಇಷ್ಟೆಲ್ಲ ತೊಂದರೆ ಇದ್ದರೂ ಆಶಾವಾದಿ ಮಲ್ಯ ಮಾತ್ರ, ಎಫ್ ಡಿಐ ನಿಯಮ ಸಡಿಲಿಕೆಯಾಗಲಿದ್ದು ವಿದೇಶಿ ವಿಮಾನಯಾನ ಸಂಸ್ಥೆ ನೇರ ಬಂಡವಾಳ ಹೂಡಿಕೆ ಮಾಡುವ ಅವಕಾಶ ದೊರೆಯಲಿದೆ ಎಂದು ನಂಬಿದ್ದಾರೆ. ಇದೇ ನಂಬಿಕೆಯನ್ನು ತನ್ನ ಷೇರುದಾರರಿಗೂ ವಿಜಯ್ ಮಲ್ಯ ಹೇಳಿದ್ದಾರೆ.












Click it and Unblock the Notifications