ಅಕಟಕಟಾ..ಈ ಮಲಯಾಳಿ ಮಳ್ಳಿಗೆ 10 ಜನ ಗಂಡಂದಿರು

Woman arrested for cheating 10 husbands
ಚೆನ್ನೈ, ಆ 28: ಕೇರಳ ಮೂಲದ ಶಹನಾಜ್ ಎನ್ನುವ ಮಲಯಾಳಿ ಮಹಿಳೆ ಮಾಡಿದ ಮನೆಹಾಳು ಕೆಲಸಕ್ಕೆ ಚೆನ್ನೈ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಇದೊಂದು ಬಹು ಪತ್ನಿತ್ವದ ಕೇಸ್ ಅಲ್ಲ ಬದಲಿಗೆ ಬಹು ಪತಿತ್ವದ ಕೇಸ್. ಈಕೆ ಬಾಯ್ಬಿಟ್ಟ ಮಾಹಿತಿಯ ಪ್ರಕಾರ ಈಕೆಗೆ ಒಟ್ಟು ಹತ್ತು ಜನ ಗಂಡಂದಿರು, ಅಲ್ಲದೇ ಹತ್ತೂ ಜನರಿಗೆ ಉಂಡೆ ನಾಮ ತಿನ್ನಿಸಿದ್ದಾಳೆ.

ಮಣಿಕಂಠನ್ ಮತ್ತು ಪ್ರಸನ್ನ ಎನ್ನುವ ಈ ಇಬ್ಬರು ಈಕೆಯ ಗಂಡಂದಿರ ಪಟ್ಟಿಯಲ್ಲಿ ಸೇರಿರುವವರು. ಇವರು ನೀಡಿದ ದೂರಿನ ಅನ್ವಯ ಪೋಲೀಸರು ವಿಚಾರಣೆ ಆರಂಭಿಸಿದ್ದಾರೆ.

33ವರ್ಷದ ಈ ಮಳ್ಳಿಯನ್ನು ತನಿಖೆ ಮಾಡಿದಾಗ ಈಕೆ ಬಾಯ್ಬಿಟ್ಟ ಘೋರ ಸತ್ಯ ಕೇಳಿ ಹೀಗೂ.. ಉಂಟೇ ಎಂದು ಹೌಹಾರಿದ್ದಾರೆ.

ಮಣಿಕಂಠನ್ ಎನ್ನುವ ಮಿಕವನ್ನು ಬಲೆ ಹಾಕುವಾಗ ಈಕೆ ತಾನೊಬ್ಬ ಅನಾಥೆ ಎಂದು ಹೇಳಿಕೊಂಡಿದ್ದಳು. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ವಕೀಲೆಯಾಗಿದ್ದು ಸಿವಿಲ್ ಪರೀಕ್ಷೆ ಬರೆಯುತ್ತಿದ್ದೇನೆ ಎಂದು ನಂಬಿಸಿದ್ದಳು.

ಮದುವೆಯಾದ ಎರಡೇ ತಿಂಗಳಲ್ಲಿ ಪರೀಕ್ಷೆ ಹತ್ತಿರ ಬರುತ್ತಿದೆ, ಜೊತೆಗಿದ್ದರೆ ಓದುವುದಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ವರ್ಕಿಂಗ್ ವುಮೆನ್ ಹಾಸ್ಟೆಲ್ ಸೇರಿಕೊಳ್ಳುತ್ತೇನೆ. ಪರೀಕ್ಷೆ ಮುಗಿದ ಮೇಲೆ ಮತ್ತೆ ಒಟ್ಟಿಗೆ ಸಂಸಾರ ನಡೆಸೋಣ ಎಂದು ಮಣಿಕಂಠನ್ ನನ್ನು ನಂಬಿಸಿದ್ದಾಳೆ.

ಒಂದು ತಿಂಗಳಾದ ನಂತರ ಮತ್ತೆ ಬರುತ್ತೇನೆ. ಹಾಸ್ಟೆಲ್ ಮತ್ತು ಪರೀಕ್ಷೆಗೆ ಹಣ ಬೇಕಾಗಿದೆ ಹಣ ಹೊಂದಿಸಿಕೊಡುವಂತೆ ಗಂಡನನ್ನು (ಮಣಿಕಂಠನ್) ಕಾಡಿಬೇಡಿದ್ದಾಳೆ. ಈಕೆಯ ಮೋಡಿಗೆ ಮರುಳಾದ ಗಂಡ ಹಣ ಹೊಂದಿಸಿ ಕೊಟ್ಟಿದ್ದಾನೆ.

ಹಣ ಕೈಗೆ ಬಂದ ಕೂಡಲೇ ಮನೆಯಿಂದ ಕಾಲ್ಕಿತ್ತ ಈ ಮಹಿಳೆ ತಿಂಗಳು ಮುಗಿದರೂ ನಾಪತ್ತೆಯಾಗಿದ್ದಾಳೆ.

ಇದರಿಂದ ಅನುಮಾನಗೊಂಡ ಗಂಡನಿಗೆ ತಾನು 'ಬಕ್ರಾ' ಆಗಿದ್ದೇನೆ ಎಂದು ಅರಿವಾಗಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದಾಗ ಈಕೆಯ ಜನ್ಮರಹಸ್ಯ ಹೊರಬಿದ್ದಿದೆ. ತಮಿಳುನಾಡಿನ ಹಲವು ಠಾಣೆಗಳಲ್ಲಿ ಈಕೆಯ ಮೇಲೆ ಕೇಸ್ ದಾಖಲಾಗಿದೆ.

ಪೊಲೀಸರು ಕೇರಳದಲ್ಲೂ ವಿಚಾರಣೆ ನಡೆಸಿದಾಗ ಹತ್ತಾರು ವರ್ಷದಿಂದ ಈ ವ್ಯವಹಾರದಲ್ಲಿ ಸಕ್ರಿಯವಾಗಿ ಶಹನಾಜ್ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗುತ್ತದೆ.

ಮಣಿಕಂಠನ್, ಪ್ರಸನ್ನ, ಚಂದ್ರಬಾಬು, ಶರವಣ, ರಾಜೇಶ್... ಹೀಗೆ ಈ ಪಟ್ಟಿ ಬೆಳೆಯುತ್ತಾ ಹತ್ತಕ್ಕೆ ನಿಲ್ಲುತ್ತದೆ. 11 ವರ್ಷದ ಹಿಂದೆ ಈಕೆ ಸಿದ್ದಿಕಿ ಎನ್ನುವವನನ್ನು ಮದುವೆಯಾಗಿದ್ದಳು, ಈ ಇಬ್ಬರಿಗೆ ಒಂದು ಮಗು ಕೂಡಾ ಇದ್ದವು.

ಮೊದಲು ಮಿಕವನ್ನು ಗುರುತಿಸಿ ಗೆಳೆತನ ಸಂಪಾದಿಸಿ ಕೊಳ್ಳುವ ಈ ಮಹಿಳೆ ಚಾಣಾಕ್ಷತನದಿಂದ ಅವರ ಆಭರಣ, ಹಣದೊಂದಿಗೆ ನಾಪತ್ತೆಯಾಗುತ್ತಾಳೆ. ಮಣಿಕಂಠನ್ ಗೆ ನಾಮ ಹಾಕಿ ಇನ್ನೊಂದು ಮಿಕಕ್ಕೆ ಹೊಂಚು ಹಾಕುತ್ತಿದ್ದಾಗ ಈ ಮಹಿಳೆಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+