ಎಂ.ಟೆಕ್ ವಿದ್ಯಾರ್ಥಿನಿ ಮಾನಸ ನೇಣಿಗೆ ಶರಣು

21 ವರ್ಷದ ಮಾನಸ ಮೆರುಗು IIT Madrasನಲ್ಲಿ ಮೊದಲ ವರ್ಷದ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕ್ಯಾಂಪಸ್ಸಿನಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ದುಪ್ಪಟ್ಟದಿಂದ ಈಕೆ ನೇಣು ಹಾಕಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರುವ ಈ ವಿದ್ಯಾರ್ಥಿನಿ ಗೋದಾವರಿಯ ಕರೀಂನಗರದ ರಾಮಗುಂಡಂನವರೆಂದು ಗುರುತಿಸಲಾಗಿದೆ. ಮಾನಸ ಅಪ್ಪ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.
ಎರಡು ವಾರದ ಹಿಂದೆಯಷ್ಟೇ ಮಾನಸ ಕಾಲೇಜಿಗೆ ಸೇರಿದ್ದಳು. ಅನಂತಪುರದ ಪುಟ್ಟಪರ್ತಿಯ ಕಾಲೇಜಿನಲ್ಲಿ ಮಾನಸ ಬಿ.ಟೆಕ್ ಮುಗಿಸಿದ್ದಳು. ಈಕೆ ಆಂಧ್ರದ ಶ್ರೀನಿವಾಸ ಎಂಬುವವರನ್ನು ವಿವಾಹವಾಗಿದ್ದರು. ಮಾನಸ-ಶ್ರೀನಿವಾಸ ದಂಪತಿಗೆ ಒಬ್ಬ ಪುತ್ರನಿದ್ದಾನೆ.
'ಹಾಸ್ಟೆಲಿನ ಕಾರ್ಪೆಂಟರ್ ರಿಪೇರಿಗೆಂದು ಈಕೆಯ ಕೋಣೆ ಬಳಿ ಬಂದಾಗ ದುಪ್ಪಟ್ಟದಿಂದ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಆಕೆ ಪ್ರಾಣ ತ್ಯಜಿಸಿದ್ದಾಳೆ ಎಂದು ವೈದ್ಯರು ತಿಳಿದರು. ಆಕೆಯ ಶವವನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿಡಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications