ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ :ರಾಜ್ಯದಲ್ಲಿ ಕಾಂಗ್ರೆಸ್, ಕೇಂದ್ರದಲ್ಲಿ NDA ಮುನ್ನಡೆ

|
Google Oneindia Kannada News

Survey NDA edge over UPA
ನವದೆಹಲಿ, ಆ 18: ಇಂಡಿಯಾ ಟುಡೆ ಮತ್ತು ಎ ಸಿ ನಿಲ್ಸನ್ ನಡೆಸಿದ ಸರ್ವೇ ಅನ್ವಯ (ಒಂದು ವೇಳೆ ಈಗಲೇ ಚುನಾವಣಾ ನಡೆದರೆ) ದಕ್ಷಿಣಭಾರತದಲ್ಲಿ ಮೊದಲಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಲಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಅತ್ತ ಕೇಂದ್ರದಲ್ಲಿ NDA ಮೈತ್ರಿಕೂಟ ಗದ್ದುಗೆ ಏರುವ ಸಾಧ್ಯತೆ ನಿಚ್ಚಳವಾಗಿದೆ.

19 ರಾಜ್ಯಗಳ 125 ಲೋಕಸಭಾ ಕ್ಷೇತ್ರದ ಸುಮಾರು 16ಸಾವಿರ ಮತದಾರರ ಅಭಿಪ್ರಾಯದ ಪ್ರಕಾರ ಈ ಸರ್ವೇ ನಡೆಸಲಾಗಿದ್ದು ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎರಡು ಅಸೆಂಬ್ಲಿ ಕ್ಷೇತ್ರವನ್ನು ಸರ್ವೇಗೆ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯಾ ಟುಡೆ ಮತ್ತು ಎ ಸಿ ನಿಲ್ಸನ್ ಹೇಳಿದೆ.

ಆಂತರಿಕ ಕಚ್ಚಾಟ, ಭ್ರಷ್ಟಾಚಾರದಿಂದ ರಾಜ್ಯದಲ್ಲಿ ಬಿಜೆಪಿ ಜನಪ್ರಿಯತೆ ಕುಸಿಯುತ್ತಿದ್ದು ಇದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಲಿದೆ. ಜೆಡಿಎಸ್ ಈಬಾರಿಯ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸರಿಯಾದ ಪೈಪೋಟಿ ನೀಡಲಿದೆ ಎಂದು 'ಮೂಡ್ ಆಫ್ ದಿ ನೇಶನ್' ಜನಾಭಿಪ್ರಾಯ ಸಂಗ್ರಹದಲ್ಲಿ ಹೇಳಿದೆ.

ಒಂದನ್ನು ಮೀರಿಸುವ ಇನ್ನೊಂದು ಹಗರಣ, ರೂಪಾಯಿ ಮೌಲ್ಯ ಕುಸಿತ, ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆ ಮುಂತಾದವುಗಳಿಂದ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟ ಮುಂಬರುವ ಚುನಾವಣೆಯಲ್ಲಿ 'ಕೈ' ಸುಟ್ಟು ಕೊಳ್ಳಲಿದೆ ಎಂದು ಸರ್ವೇಯಲ್ಲಿ ಹೇಳಿದೆ.

ಕಳೆದ ಚುನಾವಣೆಯಲ್ಲಿ 259 ಸ್ಥಾನ ಗಳಿಸಿದ್ದ ಯುಪಿಎ ಮೈತ್ರಿಕೂಟ ಈ ಬಾರಿಯ ಚುನಾವಣೆಯಲ್ಲಿ 171-181ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಗಬಹುದು. 159 ಸ್ಥಾನದಿಂದ NDA ಮೈತ್ರಿಕೂಟ 195- 205ಸ್ಥಾನ ಗೆದ್ದು ತನ್ನ ಬಲ ಹೆಚ್ಚಿಸಿಕೊಳ್ಳಬಹುದು.

ಆದಾಗ್ಯೂ NDA ಮೈತ್ರಿಕೂಟಕ್ಕೆ ನಿಚ್ಚಳ ಬಹುಮತ ಸಿಗುವ ಸಾಧ್ಯತೆ ಕಮ್ಮಿಯಿದ್ದು ಎರಡೂ ಮೈತ್ರಿಕೂಟದ ಹೊರತಾದ ಪಕ್ಷಗಳು ಸರಕಾರ ನಿರ್ವಹಣೆಯಲ್ಲಿ ನಿರ್ಣಾಯಕವಾಗಲಿದೆ ಎಂದಿದೆ.

ಸರ್ವೇ ಪ್ರಕಾರ NDA ಒಕ್ಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿ ಪೈಪೋಟಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೆ ಬಿಹಾರದ ಸಿಎಂ ನಿತೀಶ್ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ.

ಚುನಾವಣೆ ನಡೆಯಲು ಇನ್ನೂ 20ತಿಂಗಳು ಬಾಕಿಯಿದ್ದು ಈ ಸಮೀಕ್ಷೆಯ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿಕೆ ನೀಡಿದ್ದಾರೆ.

English summary
National Democratic Alliance (NDA ) and other parties an upper hand in the next Lok Sabha polls, scheduled in 2014, the findings of latest India Today-Nielsen "Mood of the Nation " opinion poll indicate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X