• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗ್ಗೆ ಕಿರುತೆರೆ ನಟಿ, ರಾತ್ರಿಯಲ್ಲಿ ಕಾಲ್ ಗರ್ಲ್ಸ್

By Mahesh
|

ಪುಣೆ, ಆ.3: ಇಬ್ಬರು ಟಿವಿ ನಟಿಯರು ಅವರ ಜೊತೆಗಿದ್ದ ಇಬ್ಬರು ವಿಟರು ಸೇರಿದಂತೆ ಮತ್ತಿಬ್ಬರನ್ನು ಸಹಿತ ಇತ್ತೀಚೆಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಟಿಯರ ಹೆಸರುಗಳನ್ನು ಗೌಪ್ಯವಾಗಿಡಲಾಗಿದೆ. ಬೆಳಗ್ಗೆ ಕಿರುತೆರೆ ನಟಿಯರಾಗಿ ಪಾತ್ರವಹಿಸುತ್ತಿದ್ದವರು ರಾತ್ರಿಯಾಗುತ್ತಿದ್ದಂತೆ ಕಾಲ್ ಗರ್ಲ್ಸ್ ಗಳಾಗಿ ಬಿಡುವುದಾದರೂ ಏಕೆ?

ಬಾಲಿವುಡ್ ಹಾಗೂ ಹಿಂದಿ ಕಿರುತೆರೆಯ ಸಣ್ಣಪುಟ್ಟ ನಟಿಯರಿಂದ ಹಿಡಿದು ಹೈ ಪ್ರೊಫೈಲ್ ನಟಿಯರ ರಾತ್ರಿ ದಂಧೆಗೆ ಪುಣೆ ಅಡ್ಡವಾಗುತ್ತಿದೆ. ಇತ್ತೀಚೆಗೆ ಪುಣೆಯಲ್ಲಿ ಈ ರೀತಿ ನಟಿಮಣಿಯರು ವೇಶ್ಯಾವಟಿಕೆ ಜಾಲದಲ್ಲಿ ಸಿಕ್ಕಿಬೀಳುತ್ತಿರುವುದು ಮುಂದುವರೆಯುತ್ತಲೇ ಇದೆ.

ನಟಿಯರು 2 ಗಂಟೆ ಕಳೆಯಲು 50,000 ದಿಂದ 1ಲಕ್ಷ ರೂ ಬೇಡಿಕೆಯಿಡುತ್ತಿದ್ದರು. ಈ ನಟಿಯರಿಗೆ ಇಬ್ಬರು ನಟಿಯರು ಸಾಥಿಯಾ, ಸಸೂರಲ್ ಸಿಮ್ರಾನ್ ಕಹಾನಿ,ತರಾಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಮತ್ತು ಹರ್ ಹರ್ ಮಹಾದೇವ ಸೇರಿದಂತೆ ಇನ್ನು ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ನಟಿಯರನ್ನು ಗಿರಾಕಿಗಳಿಗೆ ಪರಿಚಯಿಸುತ್ತಿದ್ದ ಮಹಿಳಾ ಏಜೆಂಟ್ (casting ಏಜೆಂಟ್) ಕೂಡ ಸೇರಿದ್ದಾಳೆ. ಧಾರಾವಾಹಿಗಳಿಗೆ ನಟಿಯರನ್ನು ಪೂರೈಕೆ ಮಾಡುವುದರ ಜೊತೆಗೆ ರಾತ್ರಿ ವೇಳೆ ಗಿರಾಕಿ ಕುದುರಿಸುವಲ್ಲಿ ಈ ಏಜೆಂಟ್ ನಿಪುಣೆ ಎಂದು ಹೇಳಲಾಗಿದೆ.

ರಾತ್ರಿ ಕಳೆದು ಬೆಳಗಾಗುವುದರಲ್ಲಿ 50 ಸಾವಿರದಿಂದ 1 ಲಕ್ಷ ರು ಗಳಿಸುತ್ತಿದ್ದ ಇವರು ಪಂಚತಾರಾ ಹೋಟೆಲ್ ಗಳಲ್ಲೇ ಬೀಡುಬಿಡುತ್ತಿದ್ದರು. ಸಮಾಜದ ಗಣ್ಯರು ಇವರ ಗಿರಾಕಿಗಳಾಗಿದ್ದರು.

ಪುಣೆ ಸೋಸಿಯಲ್ ಸರ್ವಿಸ್ ವಿಂಗ್ ನ ಪೊಲೀಸ್ ಇನ್ಸ್ ಪೆಕ್ಟರ್ ಭಾನುಪ್ರಕಾಶ್ ಬರ್ಗೆ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯಲ್ಲಿ ನಡೆಸಲಾಯಿತು. ನಟಿಯರಲ್ಲಿ ಒಬ್ಬಳು ಹರಿಯಾಣದವಳು, ಇನ್ನೊಬ್ಬಳು ಅಹಮದಾಬಾದಿನವಳು ಎಂದು ತಿಳಿದು ಬಂದಿದೆ.

ಹರ್ಯಾಣದ ನಟಿ ಧಾರಾವಾಹಿಗಳಲ್ಲದೆ ಕೆಲವು ಪ್ರಾಂತೀಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಹಮದಾಬಾದಿನ ನಟಿ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತನಿಕೆ ಸಂದರ್ಭದಲ್ಲಿ ತಿಳಿದು ಬಂದಿದೆ.

ಗಿರಾಕಿಗಳು ಸಿಕ್ಕ ನಂತರ ಮೊದಲು ಮುಂಗಡ ಠೇವಣಿ ಪಡೆಯುತ್ತಿದ್ದ ಏಜೆಂಟ್ ನಂತರ ನಟಿ ಮಣಿಯರ ವಿಳಾಸ ನೀಡುತ್ತಿದ್ದಳು. ಕನಿಷ್ಠ 10,000 ರು ಅಡ್ವಾನ್ಸ್ ಪಾವತಿಸಿದ ಮೇಲೆ ಮಾತ್ರ ನಟಿಯರ ಇರುವಿಕೆ ತಾಣದ ಸುಳಿವು ಸಿಗುತ್ತಿತ್ತು.

ಬಂಧಿತರಲ್ಲಿ ದಿನೇಶ್ ಹಾಗೂ ಸ್ಮಿತ ದಿವಾರ್ ಎಂಬುವರ ಹೆಸರು ಮಾತ್ರ ಬಹಿರಂಗಗೊಳಿಸಲಾಗಿದೆ. ಈ ಇಬ್ಬರು ಸಿರೀಯಲ್ ಗಳಿಗೆ ನಟ, ನಟಿಯರನ್ನು ಪೂರೈಕೆ ಮಾಡುವ ಉದ್ಯೋಗ ಮಾಡಿಕೊಂಡಿದ್ದರು. ಈಗ ಸಿಕ್ಕಿಬಿದ್ದಿರುವ ಇಬ್ಬರು ನಟಿಯರನ್ನು ಇಲ್ಲಿನ ಪುಣೆ ಹಾಸ್ಟೆಲ್ ನಲ್ಲಿ ಇರಿಸಲಾಗಿತ್ತು. ನಂತರ ಶಿವಾಜಿನಗರದ ಪಂಚತಾರಾ ಹೋಟೆಲ್ ಗೆ ಕಳಿಸಲಾಯಿತು. ಅಲ್ಲಿಗೆ ಮುಂಗಡ ಹಣ ಪಾವತಿಸಿದ ಗಿರಾಕಿಗಳನ್ನು ಕಳಿಸಲಾಗುತ್ತಿತ್ತು ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pune Social Service wing Policen Tuesday night arrested two TV actresses of Haryana and Ahmedabad origin alongwith two pimps and two others in a high-profile sex racket in Pune. The accused are booked under Protection of Immoral Trafficking Act(PITA) and sent to judicial custody till Aug.6
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more