ಆಕ್ಸೆಂಚರ್ ನಲ್ಲಿ ಈ ವರ್ಷ ನೇಮಕಾತಿ ಹಬ್ಬ

Posted By:
Subscribe to Oneindia Kannada
Jobs in Accenture India
ಬೆಂಗಳೂರು, ಜು,27: ಉದ್ಯೋಗ ಸಿಗದೆ ಬರಗೆಟ್ಟಿರುವ ಐಟಿ ಪದವೀಧರರಿಗೆ ಆಕ್ಸೆಂಚರ್ ಕಂಪನಿ ಕಡೆಯಿಂದ ಒಳ್ಳೆ ಸುದ್ದಿ ಬಂದಿದೆ. ಬೆಂಗಳೂರು, ಪುಣೆ, ಚೆನ್ನೈ, ಮುಂಬೈ ಹಾಗೂ ನವದೆಹಲಿಯಲ್ಲಿ ತನ್ನ ಘಟಕ ವಿಸ್ತರಣೆಗೆ ಮುಂದಾಗಿರುವ ಆಕ್ಸೆಂಚರ್ 1.5 ಲಕ್ಷದಿಂದ 2 ಲಕ್ಷ ಚ.ಅ ವಿಸ್ತೀರ್ಣದ ಕಚೇರಿಗಳನ್ನು ಹೊಂದಲಿದೆ. ಈ ಕಚೇರಿಗಳಿಗೆ ಹೊಸ ನೇಮಕಾತಿ ಮಾಡಲು ಆಕ್ಸೆಂಚರ್ ಸಜ್ಜಾಗಿದೆ.

2 ಲಕ್ಷ ಚದರ ಅಡಿ ವಿಸ್ತೀರ್ಣದ ಮೂಲ ಸೌಕರ್ಯ ವುಳ್ಳ ಕಚೇರಿ ಸ್ಥಳದಲ್ಲಿ ಸುಮಾರು 2000 ಜನ ಕೆಲಸ ಮಾಡಬಹುದು. ERP, CRM, SCM, EAI (enterprise application integration), ಅನ್ವಯ ತಂತ್ರಾಂಶ ಅಭಿವೃದ್ಧಿ, ಐಟಿ ಮೂಲ ಸೌಕರ್ಯ, ಕೆಪಿಒ/ಬಿಪಿಒ, ಟೆಲಿಕಾಂ, ಯೋಜನಾ ನಿರ್ವಹಣೆ, ಬಿಸಿನೆಸ್ ಅನಾಲಿಸ್ಟ್ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ ಆಕ್ಸೆಂಚರ್ ಹೊಸಬರನ್ನು ನೇಮಿಸಲಿದೆ.

ಆರಂಭಿಕ ಹಂತದಲ್ಲಿ 6,000 ರಿಂದ 7,000 ಜನ ಕ್ಯಾಂಪಸ್ ಸಂದರ್ಶನ ಮೂಲಕ ಕಂಪನಿ ಸೇರಲಿದ್ದಾರೆ. ಒಟ್ಟಾರೆ 10,000 ದಿಂದ 13,000 ಉದ್ಯೋಗಿಗಳು ಆಕ್ಸೆಂಚರ್ ಸೇರುವ ಅವಕಾಶ ಸಿಗಲಿದೆ.

ಭಾರತದಲ್ಲಿ 35,000 ಉದ್ಯೋಗಿಗಳು, ಅಮೆರಿಕದಲ್ಲಿ 40,000 ಉದ್ಯೋಗಿಗಳು ಹಾಗೂ ಫಿಲಿಫೈನ್ಸ್ ನಲ್ಲಿ 35,000 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ,ಆಗಸ್ಟ್ ತಿಂಗಳ ಕೊನೆಗೆ ಉದ್ಯೋಗಿಗಳ ಸಂಖ್ಯೆಯನ್ನು 80,000ಕ್ಕೆ ಹೆಚ್ಚಿಸಿಕೊಳ್ಳುವ ಇರಾದೆ ಆಕ್ಸೆಂಚರ್ ಗಿದೆ.

ಒಟ್ಟಾರೆ ವಿಕಿಪೀಡಿಯ ಮಾಹಿತಿ ಪ್ರಕಾರ ಜಾಗತಿಕವಾಗಿ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 243,545 ಸಂಖ್ಯೆಯನ್ನು ಆಕ್ಸೆಂಚರ್ ಮೀರಿಸಿದ್ದು 251,000 ದಾಟುತ್ತದೆ. ಭಾರತದಲ್ಲಿ ಆಕ್ಸೆಂಚರ್ ಸಂಸ್ಥೆ ಉತ್ತಮ ನಿರ್ವಹಣೆ ಹೊಂದಿದ್ದು, ಕಳೆದ ತ್ರೈಮಾಸಿಕದಲ್ಲಿ ಹೊರಗುತ್ತಿಗೆ ವಿಭಾಗದ ಆದಾಯ 3.19 ಬಿಲಿಯನ್ ಡಾಲರ್ ಗಳಿಸಿದೆ(ಒಟ್ಟಾರೆ ಆದಾಯ 7.15 ಬಿಲಿಯನ್ ಡಾಲರ್) ಶೇ ಆದಾಯ 16ರಷ್ಟು ದಾಖಲೆ ಪ್ರಮಾಣದ ಏರಿಕೆ ಕಂಡಿರುವುದರಿಂದ ಭಾರತದಲ್ಲಿ ಹೆಚ್ಚಿನ ನೇಮಕಾತಿಗೆ ಸಂಸ್ಥೆ ಮುಂದಾಗಿದೆ.

ನಂದನ್ ನಿಲೇಕಣಿ ನೇತೃತ್ವದ Unique Identification Authority of India (UIDAI) ಯೋಜನೆ ಕೈ ಜೋಡಿಸಿರುವ ಆಕ್ಸೆಂಚರ್ ಸಂಸ್ಥೆ ಬಯೋಮೆಟ್ರಿಕ್ ಗುರುತು ಪತ್ತೆ ವ್ಯವಸ್ಥೆ ತಂತ್ರಜ್ಞಾನ ಒದಗಿಸಿದೆ. ಇದಲ್ಲದೆ ಭಾರತೀಯ ಅಂಚೆ ಇಲಾಖೆ ಗಣಕೀಕರಣ, ತಾಂತ್ರಿಕ ಸುಧಾರಣೆಯಲ್ಲೂ ಆಕ್ಸೆಂಚರ್ ತೊಡಗಿಕೊಂಡಿದೆ.

'ನಮ್ಮ ಸಂಸ್ಥೆ ಬೆಂಗಳೂರಿನಲ್ಲಿ ಭದ್ರವಾಗಿ ತಳವೂರಿದೆ. ಚೆನ್ನೈ ಹಾಗೂ ಹೈದರಾಬಾದ್ ಘಟಕ ಕೂಡಾ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಶೈಕ್ಷಣಿಕ ಅನುಕೂಲಕರ ವಾತಾವರಣ ಹೊಂದಿರುವ ಪುಣೆಯಲ್ಲಿ ಮುಂದಿನ ವಿಸ್ತರಣೆ ನಡೆಯಲಿದೆ. ಈ ವರ್ಷ ಕ್ಯಾಂಪಸ್ ಸಂದರ್ಶನ ಹೆಚ್ಚಾಗಲಿದೆ' ಎಂದು ಆಕ್ಸೆಂಚರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಸಕ ಅವಿನಾಶ್ ವಶಿಷ್ಠ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Accenture India has started large scale campus hiring and According Wikipedia says the company has a global headcount of 251,000, a tad higher than TCS's 243,545. Accenture is likely to recruit in ERP, CRM, SCM, EAI, IT infrastructure, KPO/BPO, telecom application,
Please Wait while comments are loading...