CM ಆಗುವಂತೆ ಹೈಕಮಾಂಡ್ 3 ಬಾರಿ ಸೂಚಿಸಿತ್ತು

'ಕಾಂಗ್ರೆಸ್ ಹೈಕಮಾಂಡ್ ನನಗೆ ಮುಖ್ಯಮಂತ್ರಿಯಾಗುವಂತೆ ಈ ಹಿಂದೆ ಮೂರು ಬಾರಿ ಕೇಳಿಕೊಂಡಿತ್ತು. ರಾಜ್ಯದಲ್ಲಿ 2 ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಹೀಗೆ ಹೇಳಿತ್ತು. ಆದರೆ ನಾನೇ ನಯವಾಗಿ ತಿರಸ್ಕರಿಸಿದೆ' ಎಂದು ತಿಳಿಸಿದ್ದಾರೆ.
ಸುಮಾರು ಒಂದು ವರ್ಷದಿಂದ ಲೋಕಾಯುಕ್ತ ನೇಮಕ ಮಾಡದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳದಿರುವ ಬಗ್ಗೆ ರಾಜ್ಯದಲ್ಲಿನ ಹಾಲಿ ಕಾಂಗ್ರೆಸ್ ನಾಯಕರನ್ನು ಪೂಜಾರಿ ಇದೇ ವೇಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ KPCC ಅಧ್ಯಕ್ಷರಾಗಿದ್ದ ಪೂಜಾರಿ ಕಾಂಗ್ರೆಸ್ ಕಚೇರಿಗೆ ಮಹತ್ವದ ಸ್ಥಾನ ಕಲ್ಪಿಸಿದ್ದರು. ಪಕ್ಷದ ಕಾರ್ಯಕರ್ತರು ತಮ್ಮ ಅಹವಾಲುಗಳನ್ನು ಹಿಡಿದು ನೇರವಾಗಿ ಕಚೇರಿಗೆ ಬರುತ್ತಿದ್ದರು ಎಂಬುದು ಗಮನಾರ್ಹ.
ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಸವಿರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ, ಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ರಾಜೀವ್ ಗಾಂಧಿ ಅವರು 1990ರಲ್ಲಿ ಜನಾರ್ದನ ಪೂಜಾರಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ತದನಂತರ, KPCC ಅಧ್ಯಕ್ಷರಾದರು.
ಮಂಗಳೂರು ಲೋಕಸಬೇ ಚುನಾವಣೆಯಲ್ಲಿ ಅಪಜಯ ಅನುಭವಿಸಿದರೂ ಪಿವಿ ನರಸಿಂಹ ರಾವ್ ಅವರು ಪೂಜಾರಿ ಅವರನ್ನು ಮತ್ತೊಮ್ಮೆ 1991-96 ಅವಧಿಗೆ AICC ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ಆಗ ಪ್ರಧಾನಿ ನರಸಿಂಹ ರಾವ್ ಅವರ ಆಪ್ತಕೂಟದಲ್ಲಿ ಪೂಜಾರಿ ಬಹುವಾಗಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ಬಿಜೆಪಿ ಮತ್ತು ಆರೆಸ್ಸೆಸ್, ಕರಾವಳಿ ಭಾಗದಲ್ಲಿ ಬಿಲ್ಲವರು ಮತ್ತು ಬಂಟರ ನಡುವೆ ವೈಷಮ್ಯ ಸೃಷ್ಟಿಸಿದೆ. 'ಬಿಲ್ಲವ' ಕೋಟಾ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ನೀಡಿದರೆ 'ಬಂಟ' ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವ ಸ್ಥಾನದ ಆಸೆ ತೋರಿಸಿ, ದೂರ ಅಟ್ಟಿದೆ ಎಂದು ಹಾಲಾಡಿ ರಾಜೀನಾಮೆ ಬಗ್ಗೆ ಪೂಜಾರಿ ಷರಾ ಬರೆದರು.












Click it and Unblock the Notifications