• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೂಗಲ್ ಬಿಟ್ಟ ಗರ್ಭಿಣಿ ಮರಿಸ್ಸಾ ಈಗ ಯಾಹೂ ಸಿಇಒ

By Mahesh
|
Marissa Mayer
ಬೆಂಗಳೂರು, ಜು.17: ಮರಿಸ್ಸಾ ಮೇಯರ್. 37 ವರ್ಷದ ಅತ್ಯಂತ ಜನಪ್ರಿಯ ಹಾಗೂ ಸಮರ್ಥ ಅಧಿಕಾರಿಣಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಮರಿಸ್ಸಾ ಮೇಯರ್ ಈಗ ಇಂಟರ್ನೆಟ್ ದಿಗ್ಗಜ ಯಾಹೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಆಗಿ ಮಂಗಳವಾರ(ಜು.17) ದಿಂದ ಕಾರ್ಯ ನಿರ್ವಹಿಸಲಿದ್ದಾರೆ.

13 ವರ್ಷಗಳ ಕಾಲ ಗೂಗಲ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಮರಿಸ್ಸಾ ಗರ್ಭಿಣಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಸ್ವತಃ ಮರಿಸ್ಸಾ ಅವರೇ ಫಾರ್ಚ್ಯೂನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಕ್ಟೋಬರ್ 7ಕ್ಕೆ ಗಂಡು ಶಿಶು ಜನನದ ನಿರೀಕ್ಷೆಯಿದೆ ಎಂದು ಮರಿಸ್ಸಾ ಸಂತಸದಿಂದ ಹೇಳಿಕೊಂಡಿದ್ದಾರೆ.

ಗರ್ಭಿಣಿ ಸಿಇಒ ಆಗಿ ಆಯ್ಕೆ: ಆದರೆ, ತನ್ನ ಗರ್ಭಾವಸ್ಥೆ ಬಗ್ಗೆ ಜನವರಿಯಲ್ಲೇ ತಿಳಿದಿದ್ದ ಮರಿಸ್ಸಾ ಯಾಹೂ ಸಂಸ್ಥೆ ಆಕೆಯನ್ನು ತನ್ನ ಸಂಸ್ಥೆಯ ಉನ್ನತ ಸ್ಥಾನಕ್ಕಾಗಿ ಆಯ್ಕೆ ಮಾಡಿ ಸಂಪರ್ಕಿಸಿದಾಗ(ಜೂ.18) ಮರಿಸ್ಸಾ ವಿಷಯ ಮುಚ್ಚಿಟ್ಟು ಜೂನ್ ತಿಂಗಳ ನಂತರ ಗರ್ಭಾವಸ್ಥೆಯ ಬಗ್ಗೆ ತಿಳಿಯಲಿದೆ ಎಂದಿದ್ದರು.

ಆದರೆ, ಯಾಹೂ ಬೋರ್ಡ್ ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಜೂನ್ ಅಥವಾ ಜನವರಿ ಅಕೆ ವೈಯಕ್ತಿಕ ವಿಷಯವನ್ನು ಆಡಳಿತ್ಮಾಕ ಕಾರ್ಯಕ್ಷಮತೆ ಜೊತೆ ತಗುಲಿಹಾಕುವುದು ಸರಿಯಿಲ್ಲ. ವೃತ್ತಿ ಪರರಿಗೆ ಮಾದರಿಯಾಗಿರುವ ಮರಿಸ್ಸಾ, ಸಂಸಾರ ಹಾಗೂ ಸಂಸ್ಥೆ ಎರಡಲ್ಲೂ ನಿಭಾಯಿಸಬಲ್ಲರು ಎಂದು ಯಾಹೂ ಸಮರ್ಥಿಸಿಕೊಂಡಿದೆ.

ಸೆಪ್ಟೆಂಬರ್ ನಲ್ಲಿ ಯಾಹೂ ಬೋರ್ಡ್ ಮೀಟಿಂಗ್ ಗೆ ಮರಿಸ್ಸಾ ಗೈರು ಹಾಜರಾಗಬಹುದು ಆದರೆ, ತಾಯ್ತನದ ರಜೆ ಹೆಚ್ಚಿನ ವಾರಗಳು ದಾಟುವುದಿಲ್ಲ ಎಂದು ನಂಬಿದ್ದೇವೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.

ಗೂಗಲ್ ನ ಹೆಮ್ಮೆಯ ಉದ್ಯೋಗಿ: ಗೂಗಲ್ ಮ್ಯಾಪ್, ಗೂಗಲ್ ಅರ್ಥ್, ಜಗಾತ್, ಸ್ಟ್ರೀಟ್ ವ್ಯೂ ಹಾಗೂ ಸ್ಥಳೀಯ ಸರ್ಚ್ ಇಂಜಿನ್ ಮೊಬೈಲ್ ಸರ್ಚ್ ಮುಂತಾದ ಜನಪ್ರಿಯಾ ಉತ್ಪನ್ನಗಳ ಹಿಂದಿನ ಶಕ್ತಿಯಾಗಿ ಮರಿಸ್ಸಾ ಗುರುತಿಸಿಕೊಂಡಿದ್ದಾರೆ.

1999 ರಲ್ಲಿ ಗೂಗಲ್ ನ 20ನೇ ಉದ್ಯೋಗಿಯಾಗಿ ಸೇರಿಕೊಂಡಿದ್ದ ಮರಿಸ್ಸಾ, ಸಂಸ್ಥೆ ಜೊತೆಗೆ ವೈಯಕ್ತಿಕವಾಗಿ ಕೂಡಾ ಅತ್ಯುತ್ತಮ ಸಾಧನೆ ಮೆರೆದರು. ಐಗೂಗಲ್, ಗೂಗಲ್ ಟೂಲ್ ಬಾರ್, ಗೂಗಲ್ ನ್ಯೂಸ್ ಅಲ್ಲದೆ ಜೀಮೇಲ್ ಸೇರಿದಂತೆ 100ಕ್ಕೂ ಅಧಿಕ ಗೂಗಲ್ ಉತ್ಪನ್ನಗಳ ಕಾರ್ಯ ನಿರ್ವಹಣೆ ಹಿಂದೆ ಮರಿಸ್ಸಾ ಜಾಣ್ಮೆ, ಪರಿಶ್ರಮ ಅಡಗಿದೆ.

ಯಾಹೂ ಮಾಜಿ ಸಿಇಒ ಸ್ಕಾಟ್ ಥಾಮ್ಸನ್ ಅವರು ನಕಲಿ resume ಪ್ರಕರಣದಲ್ಲಿ ಸಿಕ್ಕಿ ಬಿದ್ದು ವಜಾಗೊಂಡ ಮೇಲೆ ಲಿವಿನ್ಸೊಹ್ನ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿತ್ತು. 700 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಬೃಹತ್ ಸಂಸ್ಥೆಯ ಚುಕ್ಕಾಣಿ ಹಿಡಿಯಲು ತುಂಬಾ ಸಂತಸವಾಗುತ್ತಿದೆ ಎಂದು ಮೇಯರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಾಹೂ ಸುದ್ದಿಗಳುView All

English summary
Internet gaint Yahoo named 37 year old Marissa Mayer a brain behind Google Maps, Google Earth, Zagat, Street View as its new ceo. The new appointment will be effective from Tuesday (Jul.17). "I am honored and delighted to lead Yahoo!, one of the Internet's premier destinations for more than 700 million users,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more