ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಶಾಲೆಯ ಭ್ರಷ್ಟ ಜಡ್ಜುಗಳು ಒಂದೇ ಜೈಲಿಗೂ

By Srinath
|
Google Oneindia Kannada News

reddy-bail-deal-judge-prabhakar-rao-suspended
ಹೈದರಾಬಾದ್, ಜುಲೈ7‌: ಅವರೆಲ್ಲ ಒಂದೇ ಮರದ ಬಳ್ಳಿಗಳು. ಆದರೆ ಆ ಮರಕ್ಕೆ ಭ್ರಷ್ಟಾಚಾರದ ಪಿಡುಗು ಅಂಟಿಕೊಂಡಿತು. ಹಾಗಾಗಿ ಆ ತ್ರಿಮೂರ್ತಿ ನ್ಯಾಯಮೂರ್ತಿಗಳು ಈಗ ಒಂದೇ ಜೈಲಿಗೆ ಸೇರಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಒಂದೇ ಶಾಲೆಯಲ್ಲಿ ಓದಿಕೊಂಡಿದ್ದ ಆ ಮೂರೂ ಭ್ರಷ್ಟ ನ್ಯಾಯಮೂರ್ತಿಗಳು ಈಗ ಜೈಲು ಕಂಬಿಗಳ ಹಿಂದೆ ಬಂಧಿಗಳಾಗಿದ್ದಾರೆ.

10 ಕೋಟಿ ರೂ. ಲಂಚ ಪಡೆದು ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಯ ಆಂಧ್ರದಲ್ಲಿ ಮತ್ತೊಬ್ಬ ನ್ಯಾಯಾಧೀಶನ ತಲೆದಂಡವಾಗಿದೆ. ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಡಿ. ಪ್ರಭಾಕರ ರಾವ್‌ ಅವರನ್ನು ಶುಕ್ರವಾರ ಹೈಕೋರ್ಟ್‌ ಅಮಾನತುಗೊಳಿಸಿದೆ.

ಆಂಧ್ರಪ್ರದೇಶ ಚುನಾವಣಾ ಆಯೋಗದ ಕಾನೂನು ಕಾರ್ಯದರ್ಶಿಯಾಗಿದ್ದ ಪ್ರಭಾಕರ ರಾವ್‌ ಅವರನ್ನು ಲಂಚ ಪ್ರಕರಣದ ಹಿನ್ನೆಲೆಯಲ್ಲಿ ಗುರುವಾರವಷ್ಟೇ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗ ಮಾಡಲಾಗಿತ್ತು. ಶುಕ್ರವಾರ ಆ ಹುದ್ದೆಯಿಂದಲೂ ಹೈಕೋರ್ಟ್‌ ಅಮಾನತುಗೊಳಿಸಿದೆ.

ಆಂಧ್ರ ಹೈಕೋರ್ಟ್, ಜಡ್ಜ್ ಪಟ್ಟಾಭಿಯನ್ನು ಈಗಾಗಲೇ ಅಮಾನತುಗೊಳಿಸಿದೆ. ಇನ್ನು ನ್ಯಾಯಮೂರ್ತಿ ಚಲಪತಿ ರಾವ್ ಲಂಚ ಪ್ರಜರಣ ಘಟಿಸುವ ಒಂದು ತಿಂಗಳ ಹಿಂದಷ್ಟೇ ಸೇವೆಯಿಂದ ನಿವೃತ್ತಗೊಂಡಿದ್ದರು.

ತಾತ್ಪರ್ಯ: ಹೀಗೆ ಸಾಕ್ಷಾತ್ತು ಮೂವರು ಜಡ್ಜುಗಳನ್ನೇ ಕೆಲಸದಿಂದ ಕಿತ್ತುಹಾಕಿ, ಜೈಲಿಗಟ್ಟಿರುವುದನ್ನು ನೋಡಿದರೆ ಆ ಜನಾರ್ದನ ರೆಡ್ಡಿಗೆ ಪ್ರಕರಣದಿಂದ ಮುಕ್ತಿಯಿಲ್ಲ ಎಂಬುದು ಸರ್ವವಿಧಿತ. ಜತೆಗೆ, ಈ 10 ಕೋಟಿ ರೂ. ಲಂಚವನ್ನು arrange ಮಾಡಿದ ತಮ್ಮುಡು KMF ಸೋಮಶೇಖರ ರೆಡ್ಡಿಗೂ ದುರ್ದೆಸೆ ಆರಂಭವಾಗಿದೆ ಎಂದೇ ಅರ್ಥ. ಅಣ್ಣ-ತಮ್ಮಂದಿರಿಬ್ಬರೂ ಒಂದೇ ಜೈಲುವಾಸಿಗಳಾಗುವ ದಿನಗಳು ದೂರವಿಲ್ಲ.

ಜಡ್ಜ್ ಪ್ರಭಾಕರನೇ ಸಿಬಿಐಗೆ ದೂರಿಕೊಂಡನೆ?
ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿದರೆ 10 ಕೋಟಿ ರೂ. ಲಂಚ ನೀಡುವುದಾಗಿ ಪ್ರಭಾಕರ ರಾವ್‌ ಅವರು ಸಿಬಿಐ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಪಟ್ಟಾಭಿ ಅವರಿಗೆ ಆಮಿಷವೊಡ್ಡಿದ್ದರು. ಇದೇ ವೇಳೆ, ನಿವೃತ್ತ ನ್ಯಾಯಾಧೀಶ ಚಲಪತಿಗಾರು ರೆಡ್ಡಿಗೆ ಜಾಮೀನು ನೀಡಿದರೆ 5 ಕೋಟಿ ರೂ. ನೀಡುವುದಾಗಿ ತಿಳಿಸಿದ್ದರು.

ಆದರೆ ಪ್ರಭಾಕರ ರಾವ್‌ಗಿಂತ ಚಲಪತಿ ಮೇಲೆ ಹೆಚ್ಚು ವಿಶ್ವಾಸ ಹೊಂದಿದ್ದ ಪಟ್ಟಾಭಿ ರಾಮರಾವ್‌, ಚಲಪತಿಯಿಂದ 5 ಕೋಟಿ ರೂ. ಲಂಚ ಪಡೆಯಲು ಸಮ್ಮತಿಸಿದ್ದರು. ಬಳಿಕ ಜಾಮೀನನ್ನೂ ನೀಡಿದ್ದರು ಎನ್ನಲಾಗಿದೆ.

ಪ್ರಭಾಕರ್‌ ರಾವ್‌ ಅವರ ಮಾತು ಧಿಕ್ಕರಿಸಲು ಜಡ್ಜ್ ಪಟ್ಟಾಭಿಗೆ ಮತ್ತೊಂದು ಕಂಟಕ ಎದುರಾಗಿತ್ತು. ಪ್ರಭಾಕರ್‌ ಒಡ್ಡಿದ್ದ ಷರತ್ತೊಂದು ಜಡ್ಜ್ ಪಟ್ಟಾಭಿಗೆ unsafe ಅನ್ನಿಸಿತ್ತು. ಜಾಮೀನು ನೀಡುವ ಮೊದಲು ತಮ್ಮ ಜತೆ ಬಂದು ರೆಡ್ಡಿ ಬಂಟರನ್ನು ಕಾಣುವಂತೆ ಪ್ರಭಾಕರ್‌ ಅವರು ಪಟ್ಟಾಭಿಗೆ ಸೂಚಿಸಿದ್ದರು. ಆದರೆ ಚಲಪತಿ ಇಂತಹ ಯಾವುದೇ ಷರತ್ತನ್ನೂ ಹಾಕಿರಲಿಲ್ಲ. ಹಾಗಾಗಿ, ಪಟ್ಟಾಭಿ 5 ಕೋಟಿ ರೂ. ಲಂಚಕ್ಕೇ ಒಪ್ಪಿಕೊಂಡರು ಎಂದು ಮೂಲಗಳು ಹೇಳಿವೆ.

ತಮ್ಮ ಆಫ‌ರ್‌ ತಿರಸ್ಕರಿಸಿ ಚಲಪತಿ ಅವರ ಮಾತಿಗೆ ಮನ್ನಣೆ ನೀಡಿದ ಪಟ್ಟಾಭಿ ವಿರುದ್ಧ ಪ್ರಭಾಕರ ರಾವ್‌ ಸಿಟ್ಟಾಗಿದ್ದರು. ಲಂಚ ಪ್ರಕರಣವನ್ನು ಬಯಲಿಗೆಳೆಯುವುದಾಗಿಯೂ ಹೆದರಿಸಿದ್ದರು ಎಂದು ಭ್ರಷ್ಟಾಚಾರ ನಿಗ್ರಹ ಘಟಕದ ವಿಚಾರಣೆ ವೇಳೆ ಪಟ್ಟಾಭಿ ಪುತ್ರ ರವಿಚಂದ್ರ ಬಾಯಿಬಿಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

English summary
Illegal Mining- Janardhan Reddy bail deal- Judge Prabhakar Rao suspended,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X