ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸುರೇಶ್ ಅಕ್ರಮ ನಿವೇಶನ ಆರೋಪದ ವಿವರ

By Srinath
|
Google Oneindia Kannada News

ಬೆಂಗಳೂರು, ಜೂನ್ 23: ಬಿಜೆಪಿಯ mister clean, ನಗರಾಭಿವೃದ್ಧಿ ಹಾಗೂ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಅವರು ತಮ್ಮ ಸಚಿವ ಸ್ಥಾನಕ್ಕೆ ಶನಿವಾರ ಬೆಳಗ್ಗೆ ದಿಢೀರನೆ ರಾಜೀನಾಮೆ ನೀಡಿರುವುದಕ್ಕೆ ಕಾರಣವಾಗಿರುವ ಅಕ್ರಮ ನಿವೇಶನ ಆರೋಪದ details ಇಲ್ಲಿದೆ:

minister-suresh-kumar-resigns-details-of-controversy

ಸುರೇಶ್ ಕುಮಾರ್ ಅವರು ಪ್ರತಿನಿಧಿಸುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನಿವಾಸಿ ಎಸ್ ಭಾಸ್ಕರನ್ ಎಂಬುವವರು ಈ ದೂರು ಸಲ್ಲಿಸಿದ್ದಾರೆ. ಭಾಸ್ಕರನ್ ಅವರು ಸುರೇಶ್ ಅವರ ಗೆಳೆಯರು, ಸುಮಾರು 18 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರೂ ಸಹ.

ದೂರಿನ ವಿವರ: ರಾಜಮಹಲ್ ವಿಲಾಸ್ ಸೆಕೆಂಡ್ ಸ್ಟೇಜ್ ಬಡಾವಣೆಯಲ್ಲಿ ಸುರೇಶ್ ಕುಮಾರ್ ಅವರು 4,000 ಚದರಡಿಯ ಬಿಡಿಎ ನಿವೇಶನವನ್ನು ಖರೀದಿಸಿದ್ದಾರೆ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ 2009ರಲ್ಲಿ 10 ಲಕ್ಷ ರುಪಾಯಿ ಪಾವತಿಸಿ, ಸುರೇಶ್ ಈ ನಿವೇಶನ ಖರೀದಿಸಿದ್ದಾರೆ. ಅದರ ಇಂದಿನ ಮಾರುಕಟ್ಟೆ ಮೌಲ್ಯ ಸುಮಾರು 3 ಕೋಟಿ ರು. ಎಂದು ಅಂದಾಜಿಸಲಾಗಿದೆ.

ಆಶ್ಚರ್ಯದ ಸಂಗತಿಯೆಂದರೆ ಸುರೇಶ್ ಕುಮಾರ್ ಅವರ ತಾಯಿ ಮತ್ತು ಮಗಳು ಈ ಹಿಂದೆಯೇ ತಲಾ ಒಂದೊಂದು ನಿವೇಶನ ಹೊಂದಿದ್ದಾರೆ. ಭಾಸ್ಕರನ್ ಅವರು ಸುರೇಶ್ ಕುಮಾರ್ ಅವರ ಅಕ್ರಮದ ನಿವೇಶನಗಳ ಬಗ್ಗೆ ಬಿಡಿಎ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ನಿವೇಶನ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ. ಒಂದು ವೇಳೆ, ನಿವೇಶನವನ್ನು ಬಿಡಿಎ ವಾಪಸ್ ಪಡೆಯದಿದ್ದರೆ ಹೈಕೋರ್ಟೋ ಅಥವಾ ಲೋಕಾಯುಕ್ತ ನ್ಯಾಯಾಲಯಕ್ಕೆ ಹೋಗುವುದಾಗಿ ಅವರು ಹೇಳಿದ್ದಾರೆ.

ಅದು ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳು ಆಗಿದ್ದ ಕಾಲ... ಸಚಿವ ಸುರೇಶ್ ಕುಮಾರ್ ಅವರು ಗಾಯತ್ರಿನಗರದ ಮನೆಯೊಂದರಲ್ಲಿ ತಮ್ಮ ತಾಯಿ ಮತ್ತು ಕುಟುಂಬದ ಸಮೇತ ವಾಸವಾಗಿದ್ದರು. ಆದರೆ ಆ ಮನೆಯನ್ನು ರಸ್ತೆ ವಿಸ್ತರಣೆಗಾಗಿ ಬಿಬಿಎಂಪಿ ಸ್ವಾಧೀನ ಪಡಿಸಿಕೊಂಡಿತು.

ಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಬೀಳುತ್ತಿದ್ದಂತೆ 2009ರ ಫೆಬ್ರವರಿ 24ರಂದು ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು 'ನನ್ನ ಮನೆಯನ್ನು BBMP ಸ್ವಾಧೀನಪಡಿಸಿಕೊಂಡಿದೆ. ನನ್ನ ಕುಟುಂಬಕ್ಕೆ ಈಗ ಆಶ್ರಯ ಇಲ್ಲವಾಗಿದೆ. ಈ ಹಿಂದೆ, ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾನು ಶಾಸಕನಾಗಿದ್ದಾಗ 2004ರಲ್ಲಿ G category site ನನ್ನ ಹೆಸರಿಗೆ ಮಂಜೂರು ಮಾಡಿದ್ದರು.

ಆದರೆ ಅದನ್ನು ನಾನು ತಿರಸ್ಕರಿಸಿದ್ದೆ. ಏಕೆಂದರೆ ಬೆಂಗಳೂರಿನಲ್ಲಿ ನನಗೆ ಮನೆಯಿದೆ (ಹಾಲಿ, ಗಾಯತ್ರಿನಗರದ ಮನೆ). ಆದ್ದರಿಂದ ಬಿಡಿಎ ಸೈಟು ಪಡೆಯಲು ನನಾನು ಅರ್ಹನಲ್ಲ. ಆದರೆ ಈಗ ಆ ಮನೆಯು BBMP ಸ್ವಾಧೀನಪಡಿಸಿಕೊಂಡಿದೆ. ಆದ್ದರಿಂದ ಈಗ ನನಗೊಂದು ನಿವೇಶನ ನೀಡಬೇಕು' ಎಂದು ಕೋರಿದ್ದರು.

ಅದಾಗುತ್ತಿದ್ದಂತೆಯೇ, ಪಕ್ಷದ ನಿಷ್ಠಾವಂತ ಸುರೇಶ್ ಕುಮಾರ್ ಅವರ ಪತ್ರಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸುರೇಶ್ ಕುಮಾರ್ ಅವರಿಗೆ ನಾಗರಭಾವಿಯಲ್ಲಿ ನಿವೇಶನ ಮಂಜೂರು ಮಾಡಿದರು. ಅದರಂತೆ 2010ರ ಜನವರಿ 23ರಲ್ಲಿ ಸುರೇಶ್ ಕುಮಾರ್ ಹೆಸರಿಗೆ ನಿವೇಶನ ನೋಂದಣಿಯಾಯಿತು. ಆ ಸೈಟ್ ಇದ್ದ ಜಾಗ ಮುಂದೆ ಡಿನೋಟಿಫೈ ಆಗುತ್ತಿದ್ದಂತೆ ಸುರೇಶ್ ಕುಮಾರ್ ಗೆ ಆ ನಿವೇಶನವೂ ಇಲ್ಲವಾಯಿತು.

ಮುಂದೆ, 2011 ಮೇ 18ರಂದು RMV Extension II Stageನಲ್ಲಿ ಅಮೂಲ್ಯ ಸೈಟನ್ನು ಆ ವೇಳೆಗೆ ಸಚಿವಾಗಿದ್ದ ಸುರೇಶ್ ಕುಮಾರ್ ಗೆ ಪರ್ಯಾಯ ನಿವೇಶನವೊಂದು ಅಧಿಕೃತವಾಗಿ ನೋಂದಣಿಯಾಯಿತು.

ಈ ಮಧ್ಯೆ, ಸತ್ಯನಾರಾಯಣ ಹೌಸಿಂಗ್ ಕೋ ಆಪರೇಟೀವ್ ಸೊಸೈಟಿ ಮುಖಾಂತರ ಬೆಂಗಳೂರು ಉತ್ತರ ತಾಲೂಕಿನಲ್ಲಿ ಮದನನಾಯಕನಹಳ್ಳಿಯಲ್ಲಿ ಸುರೇಶ್ ಅವರ ತಾಯಿ ಸುಶೀಲಮ್ಮ ಮತ್ತು ಅವರ ಪುತ್ರಿ ದಿಶಾ ಕುಮಾರ್ ಅವರಿಗೆ 30/40 ಅಡಿ ಅಳತೆಯ 2 ನಿವೇಶನಗಳು ಇದ್ದವು. 2009 ಡಿಸೆಂಬರ್ 3ರಂದು ಇವರಿಬ್ಬರ ಹೆಸರಿನಲ್ಲಿ ನೋಂದಣಿಯಾಗಿತ್ತು. ಸೊಸೈಟಿ ನಿಯಮಗಳ ಪ್ರಕಾರ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ನಿವೇಶನ ವಿತರಿಸುವಂತಿಲ್ಲ.

ಆದರೆ ಭಾಸ್ಕರನ್ ಹೇಳುವಂತೆ ಬಿಡಿಎ ಕಾನೂನಿಗೆ ವಿರುದ್ಧವಾಗಿ ಅವೆರಡೂ ನಿವೇಶನಗಳ ಬಗ್ಗೆ ಮಾಹಿತಿ ಗೌಪ್ಯವಾಗಿರಿಸಿ, ಸುರೇಶ್ ಅವರು RMV Extension II Stageನಲ್ಲಿ ಅಮೂಲ್ಯ ಸೈಟನ್ನು ತಮ್ಮ ಹೆಸರಿಗೆ ನೋಂದಾವಣೆ ಮಾಡಿಸಿಕೊಂಡಿದ್ದರು.

ಸುರೇಶ್ ಅವರ ತಾಯಿ ಸುಶೀಲಮ್ಮ ಅವರು 2011ರ ನವೆಂಬರಿನಲ್ಲಿ ಆ ಮನೆಯನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಬಸವೇಶ್ವರ ನಗರದಲ್ಲಿ ಭಾರಿ ಬಂಗಲೆಯೊಂದನ್ನು ಖರೀದಿಸಿದರು ಎಂದು ಭಾಸ್ಕರನ್ ದೂರಿದ್ದಾರೆ.

English summary
Karnataka BJP Minister S Suresh Kumar resigns details of controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X