• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ವಿಚಾರಣೆಗೆ ತತ್ತರಿಸಿದ ಶ್ರೀಮಂತ ಶ್ರೀನಿವಾಸ

By Mahesh
|
ಹೈದರಾಬಾದ್, ಜೂ.18: ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಬೋರ್ಡ್ ಆಫ್ ಕ್ರಿಕೆಟ್ ಇನ್ ಇಂಡಿಯಾ(BCCI) ಅಧ್ಯಕ್ಷ ಹಾಗೂ ಇಂಡಿಯಾ ಸಿಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್ ಶ್ರೀನಿವಾಸನ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ಹೈದರಾಬಾದಿನ ಸಿಬಿಐ ದಿಲ್ ಖುಷ್ ಅತಿಥಿಗೃಹಕ್ಕೆ ಸೋಮವಾರ(ಜೂ.18) ಬಂದ ಶ್ರೀನಿವಾಸನ್ ಅವರು ಸಿಬಿಐ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶ ಉಪ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ ಜಗನ್ ಮೋಹನ್ ರೆಡ್ಡಿ ನಗೆ ಬೀರುತ್ತಿರುವ ಸಂದರ್ಭದಲ್ಲಿ ಇಂಡಿಯಾ ಸಿಮೆಂಟ್ಸ್ ಮಾಲೀಕ ಶ್ರೀನಿವಾಸನ್ ಅವರಿಗೆ ವಿಚಾರಣೆ ಭೀತಿ ಆವರಿಸಿದೆ.

ಜಗನ್ ಮೋಹನ್ ರೆಡ್ಡಿ ಅವರ ಒಡೆತನದ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಉದ್ಯಮಿಗಳ ಮೇಲೆ ಸಿಬಿಐ ಕಣ್ಣಿರಿಸಿದೆ. ಶ್ರೀನಿವಾಸನ್ ಅವರು ಜಗನ್ ಅವರ ಸಿಮೆಂಟ್ ಕಂಪನಿಯಲ್ಲಿ ತೊಡಗಿಸಿರುವ ಬಂಡವಾಳದ ಬಗ್ಗೆ ಸಿಬಿಐ ಪ್ರಶ್ನಿಸಲಾಗಿದೆ.

ಶ್ರೀನಿವಾಸನ್ ಮೇಲಿರುವ ಆರೋಪವೇನು? : ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ನ ಅಧ್ಯಕ್ಷಶ್ರೀನಿವಾಸನ್ ಒಡೆತನದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಿಂದ ಜಗನ್ ಒಡೆತನದ ಸಂಸ್ಥೆಗಳಲ್ಲಿ 135 ಕೋಟಿ ರು ಹೂಡಿಕೆ ಮಾಡಲಾಗಿದೆ.

ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಪೈ ಲಿ. ಸಂಸ್ಥೆ ಘಟಕಗಳಿಗೆ ಅಗತ್ಯವಿದ್ದ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರು

ಇಂಡಿಯಾ ಸಿಮೆಂಟ್ಸ್ ಒಟ್ಟು 7 ಕಡೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ದಕ್ಷಿಣ ಭಾರತ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದೆ. ವಾರ್ಷಿಕವಾಗಿ 9 ಮಿಲಿಯನ್ ಟನ್ ಗಳಷ್ಟು ಉತ್ಪಾದನೆ ಹೊಂದಿದೆ. ಶಂಕರ್ ಸಿಮೆಂಟ್ಸ್ ಹಾಗೂ ಕೋರಮಂಡಲ್ ಸಿಮೆಂಟ್ ಬ್ರ್ಯಾಂಡ್ ಅಡಿಯಲ್ಲಿ ಇಂಡಿಯಾ ಸಿಮೆಂಟ್ಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದ.

ಶ್ರೀನಿವಾಸನ್ ಅವರ ಎರಡು ಘಟಕಗಳಿಗೆ ಅಕ್ರಮವಾಗಿ ಕೃಷ್ಣಾ ಹಾಗೂ ಕಗ್ನಾ ನದಿ ನೀರನ್ನು ಹರಿಸಲಾಗಿತ್ತು. ನಲ್ಗೊಂಡ ಘಟಕಕ್ಕೆ ಪ್ರತಿದಿನ 3 ಲಕ್ಷ ಗ್ಯಾಲನ್ ನಿಂದ 10 ಲಕ್ಷ ಗ್ಯಾಲನ್ ನೀರು ಹಾಗೂ ರಂಗಾರೆಡ್ಡಿ ಜಿಲ್ಲೆಯ ಇನ್ನೊಂದು ಘಟಕಕ್ಕೆ ಪ್ರತಿದಿನ 13 ಲಕ್ಷ ಗ್ಯಾಲನ್ ನೀರು ಹರಿಸಲಾಗಿದೆ.

ಉತ್ತಮ ನೀರು ಸೌಲಭ್ಯ ಸಿಕ್ಕ ಮೇಲೆ ಆಂಧ್ರಪ್ರದೇಶ ರಾಜ್ಯದಲ್ಲಿ ಇಂಡಿಯಾ ಸಿಮೆಂಟ್ಸ್ ವಹಿವಾಟು ದ್ವಿಗುಣಗೊಂಡಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದ ಸಿಬಿಐ ತಂಡ ಜೂ.7ರಂದು ಶ್ರೀನಿವಾಸನ್ ಅವರಿಗೆ ಸಮನ್ಸ್ ನೀಡಿತ್ತು. ಶ್ರೀನಿವಾಸನ್ ಅಲ್ಲದೆ ಅಂದಿನ ನೀರಾವರಿ ಸಚಿವ ಹಾಲಿ ಐಟಿ ಸಚಿವ ಪೊನ್ನಲ ಲಕ್ಷ್ಮಯ್ಯ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.

ಜಗನ್ ವಿಚಾರಣೆ ವಿವರ: ಜಗನ್ ಮೋಹನ್ ರೆಡ್ಡಿ ಅಲ್ಲದೆ ಜಗನ್ ಅವರ ಆರ್ಥಿಕ ಸಲಹೆಗಾರ ವಿ ವಿಜಯ್ ಸಾಯಿ ರೆಡ್ಡಿ, ಮಾಜಿ ಆಂಧ್ರ ಸಚಿವ ಮೋಪಿದೇವಿ ವೆಂಕಟರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಹಾಗೂ ಸರ್ಕಾರಿ ಅಧಿಕಾರಿ ಕೆವಿ ಬ್ರಹ್ಮಾನಂದ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ನಡುವೆ ಜಗನ್ ಮೋಹನ್ ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿ ಜೂ.25ರ ತನಕ ಇರುವುದರಿಂದ ಜಗನ್ ಚಂಚಲಗುಡ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಜಗನ್ ಅವರಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ವಲಯದಲ್ಲಿ ಅಕ್ರಮ ಎಸೆಗಿ ಗಳಿಸಿದ ಆಸ್ತಿಯ ಬಗ್ಗೆ ಮಾತ್ರ ದಾಖಲೆಗಳನ್ನು ಸಂಗ್ರಹಿಸಿ ಮೂರು ಎಫ್ ಐಆರ್ ದಾಖಲಿಸಲಾಗಿದೆ. ಜಗನ್ ಅವರ ಆಸ್ತಿ 16,97,335 ಕೋಟಿ ರು ಎಂದು ಟಿಡಿಪಿ ಮಾಡಿರುವ ಆರೋಪದ ಬಗ್ಗೆ ಇನ್ನೂ ಸಿಬಿಐ ಕಣ್ಣಿಟ್ಟಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗನ್ ಮೋಹನ್ ರೆಡ್ಡಿ ಸುದ್ದಿಗಳುView All

English summary
After being summoned by the investigative agency Central Bureau of Investigation (CBI), the chief of the Board Of Control For Cricket In India (BCCI), N Srinivasan appeared before CBI at the Dilkusha Guest House in Hyderabad on Monday, Jun 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more