ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಐಎಎಲ್ ನಿಂದ ಹೊಸ ಟ್ಯಾಕ್ಸಿ ಸೇವೆ ಆರಂಭ

By Mahesh
|
Google Oneindia Kannada News

BIAL int BIAL introduces airport taxi service
ಬೆಂಗಳೂರು, ಜೂ.18: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ (BIAL) ತನ್ನದೇ ಹೊಸ ಟ್ಯಾಕ್ಸಿ ಸೇವೆ 'ದಿ ಏರ್ ಪೋರ್ಟ್ ಟ್ಯಾಕ್ಸಿ' ಯನ್ನು ಆರಂಭಿಸಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಿಂದ ನಗರದ ನಾನಾ ಭಾಗಗಳಿಗೆ ಈ ಟ್ಯಾಕ್ಸಿ ಸೇವೆ ಲಭ್ಯವಿರುತ್ತದೆ.

ಸುಮಾರು 1,400 ಟ್ಯಾಕ್ಸಿಗಳಿಗೆ ಹಸಿರು ಬಾವುಟ ತೋರಿಸುವ ಮೂಲಕ ಎಸಿಪಿ ಎಂಎಸ್ ಸಲೀಂ ಅವರು ಟ್ಯಾಕ್ಸಿ ಸೇವೆಯನ್ನು ಉದ್ಘಾಟಿಸಿದರು. 2012ರ ಕೊನೆ ವೇಳೆಗೆ ಇನ್ನೂ 600 ಟ್ಯಾಕ್ಸಿಗಳನ್ನು ಸೇರಿಸಲಾಗುವುದು ಎಂದು ಬಿಐಎಎಲ್ ಅಧಿಕಾರಿಗಳು ಹೇಳಿದ್ದಾರೆ.

ಟಯೋಟಾ ಇಟಿಯೋಸ್, ಮಾರುತಿ ಡಿಜೈರ್ ಹಾಗೂ ಮಹೀಂದ್ರಾ ವೆರಿಟೊ ಮುಂತಾದ ವಾಹನಗಳನ್ನು ಟ್ಯಾಕ್ಸಿಗಳಾಗಿ ಪರಿವರ್ತಿಸಲಾಗಿದೆ. ಎಲ್ಲಾ ವಾಹನಗಳಿಗೆ ಜಿಪಿಎಸ್/ಜಿಪಿಆರ್ ಎಸ್, ಡಿಜಿಟಲ್ ದರ ಮೀಟರ್, ಪ್ರಿಂಟರ್ ಹಾಗೂ POS ಮೆಷಿನ್ ಗಳನ್ನು ಅಳವಡಿಸಲಾಗಿದೆ.

ಈ ಟ್ಯಾಕ್ಸಿ ಸೇವೆಯಿಂದ 2000ಕ್ಕೂ ಅಧಿಕ ಜನ ಚಾಲಕರು ಹಾಗೂ 200ಕ್ಕೂ ಅಧಿಕ ಕಾಲ್ ಸೆಂಟರ್ ಸಹಾಯವಾಣಿ ಕೇಂದ್ರದ ಉದ್ಯೋಗಿಗಳಿಗೆ ಅವಕಾಶ ಒದಗಿಸಿದೆ.

ಬಿಐಎಎಲ್ ನ ಟ್ಯಾಕ್ಸಿ ಚಾಲಕರು ನಮ್ಮ ಬ್ರಾಂಡ್ ನ ರಾಯಭಾರಿಗಳಾಗಿರುತ್ತಾರೆ. ಚಾಲಕರಿಗೆ ಕೌಶಲ್ಯ ತರಬೇತಿ, ಬೆಂಕಿ ಅನಾಹುತ ರಕ್ಷಣೆ, ರಕ್ಷಣಾತ್ಮಕ ಚಾಲನೆ ಬಗ್ಗೆ ತಯಾರಿ ಕೊಡಲಾಗುತ್ತದೆ, ಚಾಲಕರ ಕಣ್ಣಿನ ಪರೀಕ್ಷೆ ಸಹ ಮುಖ್ಯವಾಗಿದೆ.

ಟ್ಯಾಕ್ಸಿ ಸೇವೆಗೆ ಪ್ರತ್ಯೇಕ ವಿಭಾಗ ನೇಮಿಸಲಾಗುವುದು. ಪ್ರಯಾಣಿಕರೇ ನಮ್ಮ ಪ್ರಭುಗಳು ಎಂದು ಬಿಐಎಎಲ್ ನ ಉಪಾಧ್ಯಕ್ಷ ರೆನೆ ಬಾಮನ್ ಹೇಳಿದ್ದಾರೆ.

ಬಿಐಎಎಲ್ ಹೊಸ ರನ್ ವೇ: 2013ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಹೊಸ ಟರ್ಮಿನಲ್ ಬಿಲ್ಡಿಂಗ್ ಹಾಗೂ ರನ್ ವೇ ನಿರ್ಮಾಣ ಪೂರ್ಣಗೊಳ್ಳಲಿದೆ. ಸುಮಾರು 1,200 ಕೋಟಿ ರು ವೆಚ್ಚದ ಈ ಯೋಜನೆಗೆ ಶೇ 75 ರಷ್ಟು ಬಂಡವಾಳವನ್ನು ಸಾಲ ಮೂಲಕ ಸಂಗ್ರಹಿಸಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರತದಲ್ಲಿ ಮುಂಬೈ ಹಾಗೂ ದೆಹಲಿ ನಂತರ ಮೂರನೇ ಅತ್ಯಧಿಕ ಜನದಟ್ಟಣೆ ಇರುವ ವಿಮಾನ ನಿಲ್ದಾಣ ಎನಿಸಿದೆ. 2011ರಲ್ಲಿ 10.24 ಮಿಲಿಯನ್ ದೇಶಿ ಟ್ರಾಫಿಕ್ ದಾಖಲಿಸಿದೆ.

ಬಿಐಎಎಲ್ ನಲ್ಲಿ ಹೈದರಾಬಾದ್ ಮೂಲದ ಜಿವಿಕೆ ಗ್ರೂಪ್ ಶೇ 43ರಷ್ಟು ಷೇರುಗಳನ್ನು ಹೊಂದಿದೆ. ಸಿಮೆನ್ಸ್ ಸಂಸ್ಥೆ ಶೇ 26 ರಷ್ಟು ಹಾಗೂ ಯೂನಿಕ್ ಜ್ಯೂರಿಚ್ ಶೇ 5ರಷ್ಟು ಬಂಡವಾಳ ಹೂಡಿಕೆ ಮಾಡಿದೆ.

ಕರ್ನಾಟಕ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ ಹಾಗೂ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಉಳಿದ ಶೇ 26ರಷ್ಟು ಷೇರುಗಳನ್ನು ಹೊಂದಿದೆ.

English summary
Bangalore's Additional Commissioner of Police MA Saleem inaugurated Bangalore International Airport Limited (BIAL)'s own taxi service, branded 'The Airport Taxi', at Bengaluru International Airport today(Jun.18).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X