• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯನ್ನರನ್ನು ಹೊರ ದಬ್ಬಿದ ಗ್ರೀಕ್ ವೀರರು

By Mahesh
|
ವಾರ್ಸಾ, ಜೂ.17: ಗಿರ್ಗೊಸ್ ಕರಗೌನಿಸ್ ಎಂಬ ಹಳೆ ಹುಲಿ ಮತ್ತೊಮ್ಮೆ 2004ರ ಯುರೋ ಚಾಂಪಿಯನ್ ತಂಡಕ್ಕೆ ಮರು ಹುಟ್ಟು ನೀಡಿದ್ದಾನೆ. ಪಂದ್ಯ ಗೆಲ್ಲುವ ತಂಡ ರಷ್ಯಾಗೆ ಭಾರಿ ಮುಖಭಂಗವಾಗಿದ್ದು, ಏಕೈಕ ಗೋಲಿನಿಂದ ಪಂದ್ಯವನ್ನು ಕಳೆದುಕೊಂಡಿದ್ದಷ್ಟೇ ಅಲ್ಲ, ಟೂರ್ನಿಯಿಂದಲೂ ಅರ್ಶಿವಿನ್ ಅವರ ರಷ್ಯನ್ನರು ಹೊರಬಿದ್ದಿದ್ದಾರೆ.

ರಷ್ಯಾ ಕೂಡಾ ಎ ಗುಂಪಿನ ಅಂಕಪಟ್ಟಿಯಲ್ಲಿ ರಷ್ಯಾ ಹಾಗೂ ಗ್ರೀಸ್ ಸಮಾನ ಅಂಕ ಗಳಿಸಿದ್ದರೂ ಪರಸ್ಪರ ಕಾದಾಟದಲ್ಲಿ ಗ್ರೀಸ್ ಮೇಲುಗೈ ಸಾಧಿಸಿದ್ದರಿಂದ ನಾಕೌಟ್ ಹಂತಕ್ಕೇರುವ ಅರ್ಹತೆ ಪಡೆಯಿತು.

16 ಪಂದ್ಯಗಳು ಸೋಲು ಕಾಣದಿದ್ದ ಅಜೇಯ ತಂಡ ರಷ್ಯಾ ತಂಡದ ವಿರುದ್ಧ ಕಳೆದ ನಾಲ್ಕು ಬಾರಿ ಸೋತಿದ್ದ ಗ್ರೀಸ್ ತಂಡ ಭಾರಿ ಆಘಾತ ನೀಡಿದೆ. ಆಂಡ್ರೆ ಅರ್ಶವಿನ್ ತಂಡ ದಾಳಿ ತಂತ್ರವನ್ನು ಮುಂದಿಟ್ಟುಕೊಂಡು ಕಣಕ್ಕಿಳಿದ ರಷ್ಯನ್ನರು, ರಕ್ಷಣಾ ವ್ಯೂಹ ರಚಿಸುವಲ್ಲಿ ವಿಫಲವಾಗಿದ್ದು ತೀವ್ರ ಹೊಡೆತ ನೀಡಿತು.

ರಷ್ಯನ್ನರ ಟಾಪ್ ಸ್ಕೋರರ್ ಅಲಾನ್ ಜಗವೋಫ್ ಹಾಗೂ ಅರ್ಶವಿನ್ ಕ್ರಾಸ್ ಹೊಡೆತಗಳು ಮೊದಲ ಹತ್ತು ನಿಮಿಷಗಳಲ್ಲೇ ಗ್ರೀಕರನ್ನು ಕಾಡತೊಡಗಿತು. 10ನೇ ನಿಮಿಷದಲ್ಲಿ ಅರ್ಶವಿನ್, 12 ನೇ ನಿಮಿಷದಲ್ಲಿ ಜಗವೋಫ್ ಗೋಲು ಹೊಡೆತದಲ್ಲಿ ವಿಫಲರಾದರು.

36ನೇ ನಿಮಿಷದಲ್ಲಿ ಸೆಗೈ ಇಗ್ನಾಶೆವಿಚ್ ಹಾಗೂ 40 ಗ್ಲುಶಾಕೋವ್ ಹಾಗೂ 45ನೇ ನಿಮಿಷದಲ್ಲಿ ರೊಮಾನ್ ಶಿರಾಕೋವ್ ಅವರು ಸತತ ದಾಳಿ ನಡೆಸಿದರೂ ಯತ್ನ ಕೈಗೂಡಲಿಲ್ಲ.

35 ವರ್ಷದ ಅನುಭವಿ ಆಟಗಾರ ಕರಗೋನಿಸ್ 2004ರಲ್ಲಿ ಪೋರ್ಚುಗಲ್ ತಂಡಕ್ಕೆ ಶಾಕ್ ನೀಡಿ ಕಪ್ ಎತ್ತಿದ್ದಂತೆ ಈ ಬಾರಿ ಕೂಡಾ ತಂಡಕ್ಕೆ ಬೆನ್ನೆಲುಬಾಗಿ ರಷ್ಯಾಗೆ ಶಾಕ್ ನೀಡಿದರು. ಮೊದಲಾರ್ಧದ ನಂತರ ಹೆಚ್ಚಿನ ಅವಧಿಯಲ್ಲಿ ಸೆಗೈ ಇಗ್ನಾಶೆವಿಚ್ ಮಾಡಿದ ತಪ್ಪಿನ ಲಾಭ ಪಡೆದ ಗ್ರೀಕ್ ನಾಯಕ ಕರಗೋನಿಸ್ ಉತ್ತಮ ಗೋಲು ಹೊಡೆದು ರಷ್ಯಾಗೆ ಆಘಾತ ನೀಡಿದರು.

2 ಪಂದ್ಯಗಳಿಂದ ಕೇವಲ 1 ಅಂಕ ಗಳಿಸಿದ್ದ ಗ್ರೀಕರು ಕರಗೋನಿಸ್ ಗೋಲಿನ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಬಿಟ್ಟರು. ಆದರೆ, ದ್ವೀತಿರ್ಯಾರ್ಧದಲ್ಲಿ ಹೆಚ್ಚಿನ ಅವಧಿಯಲ್ಲಿ ಚೆಂಡಿನ ಹಿಡಿತ ಹೊಂದಿದ್ದ ರಷ್ಯನ್ನರು ಸುಮಾರು 26 ಬಾರಿ ಗೋಲು ಹೊಡೆಯುವ ಯತ್ನದಲ್ಲಿ ವಿಫಲರಾದರೂ ಎಂದರೆ ರಷ್ಯನ್ನರ ದಾಳಿ ಅಂದಾಜು ಮಾಡಬಹುದು.

ಗ್ರೀಸ್ 1 - 0 ರಷ್ಯಾ
3(2) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 15(10)
5 ಕಾರ್ನರ್ಸ್ 12
8 ಫೌಲ್ಸ್ 14
1 ಆಫ್ ಸೈಡ್ 0
2 ಹಳದಿ ಕಾರ್ಡ್ 4
0 ಕೆಂಪು ಕಾರ್ಡ್ 0

ಜೆಕ್ ರಿಪಬ್ಲಿಕ್ ವಿರುದ್ಧ 4-1 ಗೋಲುಗಳ ಅಂತರದ ಭರ್ಜರಿ ಜಯ ಗಳಿಸಿದ್ದ ರಷ್ಯಾ, ಮುಂದಿನ ಪಂದ್ಯದಲ್ಲಿ ಆತಿಥೇಯ ಪೋಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದರು. ಹೀಗಾಗಿ ಸಹಜವಾಗಿ ಉತ್ತಮ ಲಯದಲ್ಲಿದ್ದ ರಷ್ಯನ್ನರು ಈ ಪಂದ್ಯವನ್ನು ಗೆಲ್ಲುವ ಫೇವರೀತ್ ಎನ್ನಲಾಗಿತ್ತು. ಆದರೆ, ರಷ್ಯನ್ನರ ಆಸೆಗೆ ಗ್ರೀಕರು ತಣ್ಣೀರೆರಚಿದರು.

ದ್ವಿತೀಯಾರ್ಧದಲ್ಲಿ ಪೆನಾಲ್ಟಿ ಕಿಕ್ ಪಡೆಯುವ ಅವಕಾಶದಲ್ಲಿ ಕರಗೋನಿಸ್ ಸ್ವಲ್ಪದರಲ್ಲೇ ವಂಚಿತರಾದರು. ಇತ್ತೀಚೆಗೆ ಪೆನಾಲ್ಟಿ ಮಿಸ್ ಮಾಡಿಕೊಂಡಿದ್ದ ಕರಗೋನಿಸ್ ಈ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಪಾಪಪ್ರಜ್ಞೆಯನ್ನು ಕಳೆದುಕೊಂಡರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಫುಟ್ಬಾಲ್ ಸುದ್ದಿಗಳುView All

English summary
A Giorgos Karagounis goal seconds before the break gave 2004 champions Greece a surprise 1-0 win over Russia in Euro 2012 Group A in National Stadium in Warsaw, giving them a shock quarter-final berth at their rivals' expense.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more