• search

10000 ಸಿಬ್ಬಂದಿ ಕಡಿತಕ್ಕೆ ಮುಂದಾದ ನೋಕಿಯಾ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Stephen Elop
  ಪ್ಯಾರೀಸ್, ಜೂ.14: ಫಿನ್ಲೆಂಡ್ ಮೂಲದ ನೋಕಿಯಾ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಭಾರಿ ನಷ್ಟ ಅನುಭವಿಸಿದ ನಂತರ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ.

  ಜಾಗತಿಕವಾಗಿ ನೋಕಿಯಾ ಸಂಸ್ಥೆ ಸುಮಾರು 10,000 ಜನ ಉದ್ಯೋಗಿಗಳನ್ನು ಹೊರದಬ್ಬುವ ನಿರ್ಧಾರವನ್ನು ಗುರುವಾರ(ಜೂ.14) ಪ್ರಕಟಿಸಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಎರಡು ಮೂರು ತ್ರೈಮಾಸಿಕದಲ್ಲಿ ಭಾರಿ ನಷ್ಟ ಅನುಭವಿಸಿದೆ.

  ಸ್ಟೀಫನ್ ಎಲೋಪ್ ನೋಕಿಯಾ ಸಂಸ್ಥೆ ಚುಕ್ಕಾಣಿ ಹಿಡಿದ ಮೇಲೆ ಇದೆ ಮೊದಲ ಬಾರಿಗೆ ಈ ರೀತಿ ಭಾರಿ ಸಂಖ್ಯೆಯಲ್ಲಿ ಸಿಬ್ಬಂದಿ ಕಡಿತಕ್ಕೆ ಮುಂದಾಗಲಾಗಿದೆ.

  ನೋಕಿಯಾ ಸಂಸ್ಥೆ ಪುನರುಜ್ಜೀವನಕ್ಕೆ 2013ರ ಕೊನೆ ವೇಳೆಗೆ ಸುಮಾರು 1 ಬಿಲಿಯನ್ ಯುರೋ ಅಗತ್ಯ ಬೀಳಲಿದೆ ಎಂದು ಎಲೋಪ್ ಹೇಳಿದ್ದಾರೆ.

  2011ರ ನಂತರ ಸಿಂಬಿಯಾನ್ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಾಫ್ಟ್ ವೇರ್ ಕೈಬಿಟ್ಟಿದ್ದು ನೋಕಿಯಾಗೆ ಭಾರಿ ಹೊಡೆತ ನೀಡಿದೆ. ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್ ಬಿಟ್ಟು ಮೈಕ್ರೋಸಾಫ್ಟ್ ಜೊತೆ ಕೈಜೋಡಿಸಿ ವಿಂಡೋಸ್ ಅಪರೇಟಿಂಗ್ ಸಿಸ್ಟಮ್ ಹಿಂದೆ ಬಿದ್ದ ನೋಕಿಯಾ ಪರಿಸ್ಥಿತಿ ಸದ್ಯಕ್ಕಂತೂ ಗಂಭೀರವಾಗಿದೆ.

  ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಆಪಲ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ನೋಕಿಯಾ ಸಂಸ್ಥೆಗೆ ಬಂಡವಾಳ ಹೂಡಿಕೆದಾರರಿಂದ ಕೂಡಾ ಪೆಟ್ಟು ಬಿದ್ದಿದೆ. ಹೀಗಾಗಿ ಉಳಿದ ಮೂರು ತ್ರೈಮಾಸಿಕಗಳಲ್ಲಿ 650 ಮಿಲಿಯನ್ ಕಲೆಹಾಕುವ ಅಸಾಧ್ಯದ ಗುರಿ ಹೊಂದಿದೆ.

  ಐಷಾರಾಮಿ ಫೋನ್ ಉದ್ಯಮ ವೆರ್ತು ವನ್ನು EQTಗೆ ಮಾರಾಟ ಮಾಡುವ ಸಾಧ್ಯತೆ ದಟ್ಟವಾಗಿದೆ.

  ಎಲ್ಲವೂ ನಿರೀಕ್ಷಿತ: 2012ರ ಅಂತ್ಯದೊಳಗೆ ನಾಲ್ಕು ಸಾವಿರದಷ್ಟು ಸಿಬ್ಬಂದಿ ಕಡಿತ ಮಾಡುವುದಾಗಿ ನೋಕಿಯಾ ಪ್ರಕಟಿಸಿ ನೌಕರರಲ್ಲಿ ಆತಂಕದ ಅಲೆಯೆಬ್ಬಿಸಿತ್ತು. ಆದರೆ, ಗುರುವಾರ(ಜೂ.14) ಹೊರಡಿಸಿರುವ ಪ್ರಕಟಣೆ ಪ್ರಕಾರ 10 ಸಾವಿರ ಜನರು ಉದ್ಯೋಗ ರಹಿತರಾಗಲಿದ್ದಾರೆ.

  ಕಂಪನಿಯ ನೂತನ ಉದ್ಯೋಗ ಕಡಿತದಿಂದಾಗಿ ವರ್ಷಕ್ಕೆ ಸುಮಾರು 146 ಕೋಟಿ ಡಾಲರ್ ವೆಚ್ಚ ಉಳಿತಾಯವಾಗಲಿದೆ ಎಂದು ಎಲೋಪ್ ಹೇಳಿದ್ದರು.

  ನೋಕಿಯಾ ಸ್ಮಾರ್ಟ್ ಫೋನ್ ಗಳಲ್ಲಿ ವಿಂಡೋಸ್ ಫೋನ್ 7 ಫ್ಲಾಟ್ ಫಾರ್ಮ್ ಬಳಕೆ ಮಾಡಲು ನಿರ್ಧರಿಸಿರುವುದು ನಿಜ. ಆದರೆ, ಮೈಕ್ರೋಸಾಫ್ಟ್ ನಿಂದ ನೋಕಿಯಾ ಖರೀದಿ ಸುದ್ದಿ ಆಧಾರ ರಹಿತ ಎಂದು ಎಲೋಪ್ ಸ್ಪಷ್ಟಪಡಿಸಿದ್ದರು.

  ನೋಕಿಯಾ ತಂತ್ರ ಟುಸ್ : ತನ್ನ ಮೊಬೈಲ್ ಉತ್ಪನ್ನಗಳಲ್ಲಿ ಸರ್ಚ್ ಇಂಜಿನ್ ಬಿಂಗ್, ಆಡ್ ಸೆಂಟರ್, ಆಫೀಸ್, ಎಕ್ಸ್ ಬಾಕ್ಸ್, ಬಿಂಗ್ ಬೆಂಬಲಿತ Ovi Maps ಮುಂತಾದ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಹಕರಿಗೆ ಆಕರ್ಷಕ ರೀತಿಯಲ್ಲಿ ನೀಡಬಹುದು. ಈ ಮೂಲಕ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವ ಆಸೆ ನೋಕಿಯಾಗಿತ್ತು.

  2010ರ ಸೆಪ್ಟೆಂಬರ್ ನಲ್ಲಿ ಮೈಕ್ರೋಸಾಫ್ಟ್ ನ ವಾಣಿಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಟೀಫನ್ ಎಲೋಪ್ ಅವರನ್ನು ನೋಕಿಯಾದ ನೂತನ ಸಿಇಒ ಆಗಿ ನೇಮಿಸಲಾಗಿತ್ತು. ಅದಕ್ಕೂ ಮೊದಲು ಸಿಇಒ ಆಗಿದ್ದ ಒಲ್ಲಿ ಪೆಕ್ಕ ಕಲ್ಲಸೊವೊ ರಾಜೀನಾಮೆ ನೀಡಲು ಇದೇ ಸ್ಮಾರ್ಟ್ ಫೋನ್ ಮಾರುಕಟ್ಟೆ ಪೈಪೋಟಿ ಕಾರಣವಾಗಿತ್ತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Finnish cellphone maker Nokia plans to cut another 10,000 jobs globally due to consecutive loss from last two quarters loss. CEO Stephen Elop's re construction plans helping Microsoft than Nokia.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more