ಕಿಂಗ್ ಫಿಷರ್ ಗೆ ಷೇರು ಮಾರಾಟವೇ ಪರಿಹಾರ

ಕಳೆದ ರಾತ್ರಿ ಸಂಸ್ಥೆಯ ಉನ್ನತ ಅಧಿಕಾರಗಳ ಜೊತೆ ಮೂರು ಗಂಟೆಗಳ ಮಾತುಕತೆ ನಡೆಸಿದ ಸಂಜಯ್, ಸಮಸ್ಯೆ ಪರಿಹಾರವಾಗುವವರೆಗೂ ಸಂಸ್ಥೆ ತೊರೆಯಬೇಡಿ ಎಂದು ಕೇಳಿಕೊಂಡಿದ್ದಾರೆ. ಸಭೆಯಲ್ಲಿ ನಡೆದ ಮಾತುಕತೆ ಮುಖ್ಯಾಂಶ ಇಲ್ಲಿದೆ:
ಅಂತಾರಾಷ್ಟ್ರೀಯ ಸಂಸ್ಥೆಗಳು ಕಿಂಗ್ ಫಿಷರ್ ಸಂಸ್ಥೆ ಮೇಲೆ ಬಂಡವಾಳ ಹೂಡಲು ಮುಂದೆ ಬಂದಿದೆ, ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಯುಪಿಎ ಸರ್ಕಾರ ಗೊಂದಲದ ನೀತಿ ಅನುಸರಿಸುತ್ತಿದೆ. ಎಫ್ ಡಿಐ ಕುರಿತ ಗೊಂದಲ ಪರಿಹಾರವಾದ ತಕ್ಷಣ ವಿದೇಶಿ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ.
* ಗಲ್ಫ್, ಎಮಿರೇಟ್ಸ್ ಏರ್ ಲೈನ್ಸ್ ಆಸಕ್ತಿ ತೋರಿದೆ. ಸದ್ಯಕ್ಕೆ ವಾರಕ್ಕೊಮ್ಮೆ ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಬದಲಿ ವಿಮಾನಗಳನ್ನು ಒದಗಿಸುತ್ತಿರುವ ಎಮಿರೇಟ್ಸ್, ಮುಂದೆ ಸಂಪೂರ್ಣವಾಗಿ ಕೈ ಜೋಡಿಸುವ ಸಾಧ್ಯತೆಯಿದೆ.
* ಬ್ಯಾಂಕಿನ ಸಾಲವನ್ನು ತೀರಿಸಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
* ಕಳೆದ ಐದು ತಿಂಗಳ ಸಂಬಳ ಬಾಕಿ ಕೊಡಬೇಕಾಗಿದ್ದು, ಈ ತಿಂಗಳ ಅಂತ್ಯಕ್ಕೆ ಕಂತು ಕಂತಿನಲ್ಲಿ ಸಂಬಳ ನೀಡಲಾಗುವುದು.
*TDS ನೀಡಲಾಗಿದೆ: ಮಾಧ್ಯಮಗಳ ವರದಿಯನ್ನು ನಂಬಬೇಡಿ. ಆದಾಯ ತೆರಿಗೆ ಇಲಾಖೆಗೆ TDS(tax deducted at sources) ಸಲ್ಲಿಸಲಾಗಿದೆ. 2009-10ರ ಬಾಕಿ ಮೊತ್ತ ಪಾವತಿಸಲು ಇದು ಸಹಕಾರಿಯಾಗಿದ್ದು, ಬ್ಯಾಂಕ್ ಖಾರೆ ಜಪ್ತಿ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ.
* ನಿಯಮಿತ ಹಾರಾಟ: 20 ಏರ್ ಕ್ರಾಫ್ಟ್ ಹಾಗೂ 120 ಪೈಲಟ್ ಗಳೊಂದಿಗೆ ಸದ್ಯಕ್ಕೆ ಕಾರ್ಯ ನಿರ್ವಹಿಸಲಾಗುವುದು.
ಸ್ಪೈಸ್ ಜೆಟ್ ಸಿಇಒ, ಮಾರಿಟ್ಟ್ ಇಂಟರ್ ನ್ಯಾಷನಲ್, ಯುಎಸ್ ಏರ್ ವೇಸ್ ನಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇರುವ ಕಿಂಗ್ ಫಿಷರ್ ನ ಹಾಲಿ ಸಿಇಒ ಸಂಜಯ್ ಬಗ್ಗೆ ಉದ್ಯೋಗಿಗಳಿಗೆ ಸದ್ಯಕ್ಕೆ ಭರವಸೆ ಮೂಡಿದೆ. ಸಮಸ್ಯೆ ಪರಿಹಾರಕ್ಕಾಗಿ ವಿಜಯ್ ಮಲ್ಯ ಹಾಗು ಸಂಜಯ್ ಹಗಲು ರಾತ್ರಿ ತಲೆಕೆಡಿಸಿಕೊಳ್ಳುವುದು ಇನ್ನೂ ತಪ್ಪಿಲ್ಲ.












Click it and Unblock the Notifications