ಡಚ್ಚರಿಗೆ ಅನಿರೀಕ್ಷಿತ ಸೋಲು, ಡೆನ್ಮಾರ್ಕ್ ಗೆ ಜಯ

Denmark 1 beat 0 Netherlands
ಲಿವಿವ್, ಜೂ.10: ಯುರೋ 2012ರ ಮೊದಲ ಪಂದ್ಯದಲ್ಲೇ ಡಚ್ಚರಿಗೆ ಡೆನ್ಮಾರ್ಕ್ ತಂಡ ಡಿಚ್ಚಿ ಕೊಟ್ಟಿದೆ. ಅನಿರೀಕ್ಷಿತ ಸೋಲಿನ ಆಘಾತಕ್ಕೆ ನೆದರ್ಲೆಂಡ್ ತಂಡ ಸಿಲುಕಿದೆ. ಮೈಕಲ್ ಕ್ರೊಹನ್ ಡೆಹ್ಲಿ 24ನೇ ನಿಮಿಷದಲ್ಲಿ ಹೊಡೆದ ಏಕೈಕ ಗೋಲಿನಿಂದ ಗ್ರೂಪ್ ಆಫ್ ಡೆತ್ ನಲ್ಲಿ ಡೆನ್ಮಾರ್ಕ್ ಮೊದಲ ಜಯ ದಾಖಲಿಸಿದೆ.

ಮೊದಲ 20 ನಿಮಿಷದಲ್ಲಿ ಡೆನ್ಮಾರ್ಕ್ ತಂಡಕ್ಕೆ ಚೆಂಡು ಸಿಗದಂತೆ ಕಾದಾಡಿದ ಡಚ್ಚರು, 24ನೇ ನಿಮಿಷದಲ್ಲಿ ಡೆಹ್ಲಿ ಹೊಡೆದ ಕಿಕ್ ಡಚ್ಚರ ಗೋಲ್ ಕೀಪರ್ ಕಾಲಿನ ನಡುವೆ ತೂರಿ ಕೊಂಡು ಹೋಗಿ ಗೋಲ್ ಪೋಸ್ಟ್ ಒಳ ಸೇರಿತು. ನಂತರ ಮೊದಲಾರ್ಧ ಪೂರ್ತಿ ಡೆನ್ಮಾರ್ಕ್ ತಂಡದ ದಾಳಿಗೆ ಸಿಲುಕಿದ ಡಚ್ಚರು ಮಂಕಾಗಿಬಿಟ್ಟರು.

ನಂತರ ಡ್ಯಾನಿಷ್ ತಂಡದ ದಾಳಿಗೆ ಸಿಲುಕಿದ ಡಚ್ಚರು ದಾಳಿ ಮರೆತು ರಕ್ಷಣೆಗೆ ನಿಲ್ಲಬೇಕಾಯಿತು. ರಾಬೆನ್, ವಾನ್ ಪರ್ಸಿ, ಸ್ನೈಡರ್, ನಾಯಕ ಬೊಮ್ಮೆಲ್ ನಂಥ ಉತ್ತಮ ಸ್ಟೈಕರ್, ಹೈಟಿಂಗನಂಥ ಅನುಭವಿ ಇದ್ದರೂ ಡಚ್ಚರು ಸಂಘಟಿತ ಹೋರಾಟ ನೀಡುವಲ್ಲಿ ವಿಫಲರಾದರು.

ಅಫೆಲಾಯ್, ವಾನ್ ಡರ್ ವಾರ್ಟ್, ಹಾಂಟೆಲಾರ್, ಕ್ಯುಟ್ ಬದಲಿ ಆಟಗಾರರಾಗಿ ಮೈದಾನಕ್ಕೆ ಇಳಿಯುವಷ್ಟರಲ್ಲಿ ನೆದರ್ಲೆಂಡ್ ಕೈಯಿಂದ ಪಂದ್ಯ ಜಾರಿತ್ತು. ಸುಮಾರು 11 ಕಾರ್ನರ್ ಕಿಕ್, ಪೆನಾಲ್ಟಿ ಅಂಗಳದ ಬಳಿ ಫ್ರೀ ಕಿಕ್ ಪಡೆದರೂ ಡಚ್ಚರು ಗೋಲು ಗಳಿಸುವಲ್ಲಿ ವಿಫಲರಾದರು.

ನೆದರ್ಲೆಂಡ್ 0 - 1 ಡೆನ್ಮಾರ್ಕ್
20 (8) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 8(0)
53% ಚೆಂಡಿನ ಹಿಡಿತ 47%
11 ಕಾರ್ನರ್ಸ್ 4
8 ಫೌಲ್ಸ್ 12
1 ಆಫ್ ಸೈಡ್ 2
0 ಹಳದಿ ಕಾರ್ಡ್ 2
0 ಕೆಂಪು ಕಾರ್ಡ್ 0

ಎರಡನೇ ಅವಧಿಯಲ್ಲಿ ಕೊಂಚ ಒರಟಾಟಕ್ಕೆ ಇಳಿದ ಡ್ಯಾನಿಷ್ ಆಟಗಾರರು 2 ಹಳದಿ ಕಾರ್ಡ್ ಸಹ ಪಡೆದರು. ಆದರೆ, ಕ್ರೊಹನ್ ಡೆಹ್ಲಿ ಅಲ್ಲದೆ ಎರಿಕ್ ಸನ್, ನಾಯಕ ಆಗ್ಗರ್, ರಾಮ್ಮೆಡೆಲ್ ಉತ್ತಮ ಆಟ ಪ್ರದರ್ಶಿಸಿದರು. 70ನೇ ನಿಮಿಷದಲ್ಲಿ ಮತ್ತೊಮ್ಮೆ ಡೆಹ್ಲಿ ಗೋಲು ಬಾರಿಸುವ ಯತ್ನದಲ್ಲಿ ವಿಫಲರಾದರು.

ಆದರೆ, ಬಿ ಗುಂಪಿನ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಡೆನ್ಮಾರ್ಕ್ ತಂಡ ಉತ್ತಮ ಆರಂಭ ಪಡೆದಿದೆ. ನೆದರ್ಲೆಂಡ್ ಗೆ ಮುಂದಿನ ಹಂತದ ಹಾದಿ ತುಂಬಾ ಕಠಿಣವಾಗಿದೆ. ಜರ್ಮನಿ, ಪೋರ್ಚುಗಲ್ ನಂಥ ಬಲಿಷ್ಠ ತಂಡಗಳ ಸವಾಲನ್ನು ಡಚ್ಚರು ಎದುರಿಸಬೇಕಿದೆ.

ವಿಶ್ವಕಪ್ 2010ರಲ್ಲಿ ಡಚ್ಚರ ಕೈಲಿ ಸೋಲು ಅನುಭವಿಸಿದ್ದ ಡೆನ್ಮಾರ್ಕ್ ತಂಡ 1967ರ ನಂತರ ಮೊದಲ ಗೆಲುವು ಸಾಧಿಸಿದ ದಾಖಲೆ ಮೆರೆಯಿತು. ಡೆನ್ಮಾರ್ಕ್ ಹಾಗೂ ನೆದರ್ಲೆಂಡ್ ತಂಡಗಳೆರಡು 4-2-3-1 ರಣಂತ್ರದೊಂದಿಗೆ ಕಣಕ್ಕಿಳಿದಿದ್ದು ವಿಶೇಷವಾಗಿತ್ತು. ಆದರೆ, ಡೆನ್ಮಾರ್ಕ್ ನ ರಣತಂತ್ರ ಜಯ ತಂದು ಕೊಟ್ಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+