ಚುನಾವಣೆಗೂ ಮುನ್ನವೇ 32 ಕೋಟಿ ರು ಜಪ್ತಿ

ಉಪ ಚುನಾವಣೆಗೂ ಮುನ್ನ ಭಾರಿ ಪ್ರಮಾಣದ ಮೊತ್ತವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 32 ಕೋಟಿ ರು ನಗದು ಹಾಗೂ 9 ಕೋಟಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆದರೆ, ಈ ದುಡ್ಡು ಯಾವ ಪಕ್ಷಕ್ಕೆ ಸೇರಿದ್ದು, ಯಾವ ಅಭ್ಯರ್ಥಿಗೆ ಸೇರಿದ್ದು ಎಂಬುದರ ಬಗ್ಗೆ ಗುಟ್ಟು ಇನ್ನೂ ಹೊರ ಬಿದ್ದಿಲ್ಲ.
2009 ರ ಲೋಕಸಭೆ ಚುನಾವಣೆಯಲ್ಲಿ ನಡೆದ ಅಕ್ರಮಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದ ಅವ್ಯವಹಾರಗಳನ್ನು ನಿರೀಕ್ಷಿಸಲಾಗಿದೆ. ಜೂ 12 ರಿಂದ ನಡೆಯಬೇಕಿರುವ ಆಂಧ್ರಪ್ರದೇಶ ಉಪ ಚುನಾವಣೆಯನ್ನು ಮುಂದೂಡಲು ಕೆಲವರು ಯೋಜಿಸಿದ್ದಾರೆ ಎಂಬ ಸುದ್ದಿ ಇದೆ.
ಇತ್ತೀಚೆಗೆ ಜಾರ್ಖಂಡ್ ನಲ್ಲಿ ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ 2.15 ಕೋಟಿ ರು ವಶಪಡಿಸಿಕೊಳ್ಳಲಾಗಿತ್ತು. ನಂತರ ಚುನಾವಣಾ ಆಯೋಗ ಚುನಾವಣೆಯನ್ನು ಮುಂದೂಡಿದ್ದರು. ಇದೇ ರೀತಿ ಆಂಧ್ರದಲ್ಲೂ ಚುನಾವಣೆ ಮುಂದೂಡಲು ಸಂಚು ರೂಪಿಸಿರುವ ಶಂಕೆ ಪೊಲೀಸರಿಗೆ ಸಿಕ್ಕಿದೆ.
ವೈಎಸ್ ಜಗನ್ ಬಂಧನ ನಂತರ ಮೋಪಿದೇವಿ ವೆಂಕಟ ರಮಣ ಬಂಧಿಸಿದ್ದ ಸಿಬಿಐ ತಂಡ ಕೆಲ ಹಿರಿಯ ಸಚಿವರು, ನಾಯಕರನ್ನು ಮತ್ತೊಮ್ಮೆ ವಿಚಾರಣೆಗೆ ಎಳೆಯುವ ಸಾಧ್ಯತೆಯಿದೆ. ಪೊಲೀಸ್ ಇಲಾಖೆ ಮಾಹಿತಿಯನ್ನು ಆಧಾರಿಸಿ ಚುನಾವಣೆ ಸಾಂಗವಾಗಿ ನಡೆಯಲು ಕಿರಣ್ ಕುಮಾರ್ ರೆಡ್ಡಿ ಸರ್ಕಾರ ಸಾಕಷ್ಟು ಶ್ರಮವಹಿಸುತ್ತಿದೆ.












Click it and Unblock the Notifications