ನಿರ್ಮಲ್ ಬಾಬಾ ಬಂಧನಕ್ಕೆ ಕೋರ್ಟ್ ಹೇಳಿದ್ದೇನು?

ನಿರ್ಮಲ್ ಬಾಬಾ ವಿರುದ್ಧ arrest warrant ಹೊರಡಿಸಿದ್ದ ಬೀನಾದ ಮ್ಯಾಜಿಸ್ಟ್ರೇಟ್ ಕೋರ್ಟು, ಕಟುಶಬ್ದಗಳಲ್ಲಿ ಬಾಬಾನನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ನಿರ್ಮಲ್ ಬಾಬಾನ ಶಕ್ತಿ ಅಷ್ಟೊಂದು ಪರಿಣಾಮಕಾರಿಯಾಗಿದ್ದರೆ ಈ ಭ್ರಷ್ಟಾಚಾರ, ಈ ಹಣದುಬ್ಬರದ ಪೆಡಂಭೂತಗಳನ್ನು ಓಡಿಸಲಿ.
AC room ಕುಳಿತು ಈ ಬಾಬಾ ಮಾಡುವುದಾದರೂ ಏನು? ಅಮಾಯಕ ಜನರ ಕೋಟ್ಯಂತರ ರುಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿದ್ದಾನೆ. ಇದೇ ವೇಳೆ ಕೋಟ್ಯಂತರ ಜನ ಹಸಿವಿನಿಂದ ಒದ್ಲಾಡುತ್ತಿದ್ದಾರೆ' ಎಂದು ಜಡ್ಜ್ ದೇವಾಲಿಯಾ ಸಿಕ್ಕಾಪಟ್ಟೆ ಗರಂ ಆಗಿದ್ದರು.
ಆದರೆ ಅಲಹಾಬಾದ್ ಹೈಕೋರ್ಟ್ ಬಾಬಾ ಮೇಲೆ ಕೃಪೆ ತೋರಿದ್ದು, ಆತನ ರಕ್ಷಣೆಗೆ ಧಾವಿಸಿದೆ. ಮೊದಲು chargesheet ದಾಖಲಿಸಿ, ಆನಂತರವಷ್ಟೇ ಬಂಧನದ ಮಾತು ಎಂದು ಮೇಲಿನ ಕೋರ್ಟು ಹೇಳಿದೆ. ಅಷ್ಟೇ ಅಲ್ಲ.
ಏನು ಕೆಳ ನ್ಯಾಯಾಲಯವು ಬಾಬಾ ವಿರುದ್ಧ ಬಂಧನಕ್ಕೆ ವಾರಂಟ್ ಹೊರಡಿಸಿ, observations ಮಾಡಿತ್ತು. ಅದು ಸರ್ವಥಾ ಸಾಧುವಲ್ಲ ಎಂದು ಕಿಡಿಕಾರಿದೆ ಎಂದು ವರದಿಯಾಗಿದೆ. ಮ್ಯಾಜಿಸ್ಟ್ರೇಟ್ ಜಡ್ಜ್ Devaliya ಅವರು ಸಲ್ಲದ ವ್ಯಾಖ್ಯಾನ ಮಾಡಿದ್ದಾರೆ ಎಂಬುದು ಅಲಹಾಬಾದ್ ಕೋರ್ಟ್ ವ್ಯಾಖ್ಯಾನ.
'ಯಾರೋ ಹಸಿವಿನಿಂದ ಸಾಯುತ್ತಿದ್ದಾರೆ ಅಂದರೆ ನಿರ್ಮಲ್ ಬಾಬಾ ಏನು ಮಾಡಬೇಕು? ಭ್ರಷ್ಟಾಚಾರ, ಹಣದುಬ್ಬರ ಪೆಡಂಭೂತಗಳನ್ನು ಓಡಿಸುವುದು ಸರಕಾರದ ಕೆಲಸ. ಹಾಗಂತ ಪ್ರಧಾನಿಯ ಬಂಧನಕ್ಕೆ ಆದೇಶ ಹೊಇರಡಿಸಲಾಗುತ್ತದೆಯೇ? ಏನೂ ಅಂತ ಮಾತ್ನಾಡ್ತೀರಿ?' ಎಂದು ಅಲಹಾಬಾದ್ ಹೈಕೋರ್ಟು, ಜಡ್ಜ್ Devaliya ಅವರನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಸೋ, ಸದ್ಯಕ್ಕಂತೂ ನಿರ್ಮಲ್ ಬಾಬಾ ಬಂಧನವಿಲ್ಲ ಅಂತಾಯ್ತು.












Click it and Unblock the Notifications