ಕಳಂಕಿತರನ್ನು ಸೇರಿಸಿ 35 ಐಎಎಸ್ ಗಳ ವರ್ಗಾವರ್ಗಿ

ಆಡಳಿತ ಯಂತ್ರ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಬಡ್ತಿ ನೀಡುವುದು ಸಾಮಾನ್ಯ ವಿಷಯವಾಗಿದೆ. ಅಧಿಕಾರಿಗಳ ಸೇವೆ ರಾಜ್ಯದ ಎಲ್ಲಾ ಭಾಗದ ಜನಕ್ಕೂ ಸಿಗುವಂತಾಗಲಿ ಎಂಬುದು ನಮ್ಮ ಆಶಯ ಎಂದು ಸದಾನಂದ ಗೌಡರು ಹೇಳಿದ್ದಾರೆ.
* ಸುಬೀರ್ ಹರಿಸಿಂಗ್: ಹೆಚ್ಚುವರಿ ಮುಖ್ಯಕಾರ್ಯದರ್ಶಿ,
* ಕೌಶಿಕ್ ಮುಖರ್ಜಿ: ಅಭಿವೃದ್ಧಿ ಆಯುಕ್ತ,
* ಡಾ.ಸಿ.ಎಸ್.ಕೆಡರ್: ಬಿಡಿಎ ಮುಖ್ಯಸ್ಥ
* ಅನಿತಾ ಕೌಲ್: ಯೋಜನಾ ಇಲಾಖೆ ಪ್ರಧಾನ ಕಾರ್ಯದರ್ಶಿ
* ವಿ.ಉಮೇಶ್: ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ
* ಎಂ.ಎನ್.ವಿದ್ಯಾಶಂಕರ್: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ
* ಜಿ.ವಿ.ಕೃಷ್ಣರಾವ್: ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ
* ಆರ್. ಶ್ರೀಧರನ್: ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ.
* ಪ್ರದೀಪ್ ಸಿಂಗ್ ಕರೋಲಾ:ಬಿಡಿಎ ಆಯುಕ್ತ
* ಯೋಗೇಂದ್ರ ತ್ರಿಪಾಠಿ: ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ
* ಪರಮೇಶ್ ಪಾಂಡೆ: ಡಿಪಿಎಆರ್ ಇ-ಆಡಳಿತ ಪ್ರಧಾನ ಕಾರ್ಯದರ್ಶಿ
* ಭರತ್‌ಲಾಲ್ ಮಿನಾ: ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ
* ಡಾ. ಅಮಿತಾಪ್ರಸಾದ್: ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ
* ಸಂಜೀವ್ ಕುಮಾರ್:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ.
* ರಾಜೀವ್ ಚಾವ್ಲಾ: ಬಿಎಂಆರ್‌ಡಿಎ ಆಯುಕ್ತ
* ಅನಿಲ್ ಕುಮಾರ್ ಜಾ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ(ಗಣಿ, ಸಣ್ಣ ಕೈಗಾರಿಕೆ ಹಾಗೂ ಜವಳಿ)ಯ ಕಾರ್ಯದರ್ಶಿ
* ಪಿ.ಎನ್. ಶ್ರೀನಿವಾಸಾಚಾರಿ: ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ
* ಕೆ.ಎಸ್. ಪ್ರಭಾಕರ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
* ತುಷಾರ್ ಗಿರಿನಾಥ್: ಸರ್ವ ಶಿಕ್ಷ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ.
* ಅರವಿಂದ ಶ್ರೀವಾಸ್ತವ: ಹಣಕಾಸು ಇಲಾಖೆ(ವೆಚ್ಚ) ಕಾರ್ಯದರ್ಶಿ
* ಎಂ.ಇ.ಶಿವಲಿಂಗಮೂರ್ತಿ: ಡಿಪಿಎಆರ್(ಜನಸ್ಪಂದನ) ಸರಕಾರದ ಹೆಚ್ಚುವರಿ ಕಾರ್ಯದರ್ಶಿ
* ಎನ್.ಪ್ರಭಾಕರ್: ಮೈಸೂರು ಸಕ್ಕರೆ ಕಾರ್ಖಾನೆ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಬಿ.ಜಿ. ನಂದಕುಮಾರ್: ಕಂದಾಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ,
* ಪಿ.ಹೇಮಲತಾ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ.
* ಬಿ.ಎನ್.ಕೃಷ್ಣಯ್ಯ: ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ
* ಡಾ.ಎಂ.ಎನ್. ಅಜಯ್ ನಾಗಭೂಷಣ್: ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ
* ಸಿ.ಶೀಖಾ: ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ
* ಡಾ.ಕೆ.ವಿ. ತ್ರಿಲೋಕ್ ಚಂದ್ರ: ತೋಟಗಾರಿಕೆ ಇಲಾಖೆಯ ನಿರ್ದೇಶಕ
* ಎಂ.ವಿ. ವೀರ ಭದ್ರಯ್ಯ: ಬೆಂಗಳೂರು ನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
* ಎನ್.ಪ್ರಕಾಶ್ :ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ
* ಆರ್.ಆರ್. ಜನ್ನು: ಆಹಾರ, ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ನಿರ್ದೇಶಕ,
* ವಿ.ಶಂಕರ್: ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ,
* ಎಫ್.ಆರ್. ಜಾಮ್ದಾರ್: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ,
* ಜಿ.ಸತ್ಯವತಿ: ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ
ಕೆಎಎಸ್: ಮೈಸೂರು ನಗರ ಪಾಲಿಕೆಯ ಆಯುಕ್ತರಾಗಿದ್ದ ರಾಯ್ಕರ್‌ರನ್ನು ನಗರ ಮೂಲಭೂತಸೌಕರ್ಯ ಮತ್ತು ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ(ಆಡಳಿತ)ರನ್ನಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಳಂಕಿತರಿಗೆ ಬಡ್ತಿ: ನಿಕಟಪೂರ್ವ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು 2008ರಲ್ಲಿ ನೀಡಿದ ವರದಿ ಪ್ರಕಾರ 1999 ರಿಂದ 2000ರಲ್ಲಿ ಮೈಸೂರು ಮಿನಿರಲ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ.ಉಮೇಶ್ ಅವರಿಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಮಹತ್ವದ ಸ್ಥಾನ ನೀಡಿರುವ ಸರ್ಕಾರದ ಕ್ರಮ ಪ್ರಶ್ನಾರ್ಹವಾಗಿದೆ.
ಮೈಸೂರು ಮಿನಿರಲ್ಸ್ ಲಿ ಅಕ್ರಮದಿಂದ ಸರ್ಕಾರಕ್ಕೆ 6.90 ಕೋಟಿ ರು ನಷ್ಟ ಉಂಟಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ವರದಿಯಲ್ಲಿ ಸೂಚಿಸಲಾಗಿತ್ತು. ಆದರೆ, ಕಳಂಕಿತರಿಗೆ ಸರ್ಕಾರ ಮಣೆ ಹಾಕಿದೆ.
ಲೋಕಾಯುಕ್ತ 2ನೇ ವರದಿಅಲ್ಲಿ ಕಳಂಕಿತ ಎಂದು ಗುರುತಿಸಲ್ಪಟ್ಟಿದ್ದ ಕೆಎಸ್ ಪ್ರಭಾಕರ್ ಹಾಗೂ ಕೆ ಇ ಶಿವಲಿಂಗಮೂರ್ತಿ ಅವರಿಗೂ ಉತ್ತಮ ಹುದ್ದೆ ನೀಡಲಾಗಿದೆ.












Click it and Unblock the Notifications