ಮೇ31 ಕರ್ನಾಟಕ ಬಂದ್, ಪರೀಕ್ಷೆಗಳು ಮುಂದೂಡಿಕೆ

petrol-rate-hike-karnataka-bandh-may31
ಬೆಂಗಳೂರು, ಮೇ 30: ಆಡಳಿತಾರೂಢ ಯುಪಿಎ ಸರಕಾರ ಎಸೆದಿರುವ 'ಪೆಟ್ರೋಲ್ ಬಾಂಬ್' ನಾಳೆ ಗುರುವಾರ (ಮೇ 31) ಕರ್ನಾಟಕದಲ್ಲಿ ಭಾರಿ ವಿಸ್ಫೋಟವನ್ನುಂಟು ಮಾಡುವ ಲಕ್ಷಣಗಳಿವೆ. NDA ಮೈತ್ರಿಕೂಟದ ಪಕ್ಷಗಳು ಈ ಬಂದ್ ಗೆ ಕರೆ ನೀಡಿವೆ. ರಾಷ್ಟ್ರಮಟ್ಟದಲ್ಲೂ ಬಂದ್ ನಡೆಲಿದ್ದು, ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸಹ ಶಾಂತಿಯುತ ಬಂದ್ ಗೆ ಸಿದ್ಧತೆ ನಡೆಸಿದೆ. ದೈನಂದಿನ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

'ಪಕ್ಷವು ನಾಳೆಯ ಬಂದ್ ಗೆ ಬೆಂಬಲ ಸೂಚಿಸಿದೆ. ಬಂದ್ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು' ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್ ಪ್ರಕಾಶ್ ಹೇಳಿದ್ದಾರೆ.

UPA ನೇತೃತ್ವದ ಕೇಂದ್ರ ಸರಕಾರ ಭಾರಿ ಪ್ರಮಾಣದಲ್ಲಿ ಪೆಟ್ರೋಲ್ ಬೆಲೆಯೇರಿಸಿದೆ. ಇದನ್ನು ಪ್ರತಿಭಟಿಸಿ ಶಾಲೆಗಳು, ಬ್ಯಾಂಕುಗಳು ಮತ್ತಿತರ ಕ್ಷೇತ್ರಗಳು ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಸರಕಾರಿ ಇಲಾಖೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ನಾಳೆ ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡಿವೆ.

ಶಾಲಾ-ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದ್ದರೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೂ ಬಾಧಕವಿಲ್ಲ ಎಂದು KSRTC ವ್ಯವಸ್ಥಾಪಕ ನಿರ್ದೇಶಕ ಎನ್ ಮಂಜುನಾಥ ಪ್ರಸಾದ್ ಹೇಳಿದ್ದಾರೆ. ಆದರೂ, ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ಬದಲಾಗುವ ಸಾಧ್ಯತೆಯಿರುತ್ತದೆ ಎಂದು ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಕಲ್ಲು ತೂರಾಟ, ಹಿಂಸಾಚಾರದಂತಹ ಅಹಿತಕರ ಘಟನೆಗಳು ನಡೆದರೆ ಬಸ್ ಸಂಚಾರ ಸ್ಥಗಿತಗೊಳಿಸವುದಾಗಿ BMTC ಅಧಿಕಾರಿ ಎಂಪಿ ಪ್ರಭುದಾಸ್ ಇದೇ ವೇಳೆ ಹೇಳಿದ್ದಾರೆ.

ಎಡಪಕ್ಷಗಳ ಜತೆ ಗುರುತಿಸಿಕೊಂಡಿರುವ ಆಟೋ ಚಾಲಕರ ಸಂಘಟನೆಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಆಟೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು. ಐಟಿ-ಬಿಟಿ ಸಿಬ್ಬಂದಿಯನ್ನು ಕಚೇರಿಗೆ ತಲುಪಿಸುವ ಕ್ಯಾಬ್‌ಗಳು ಸಂಚಾರಕ್ಕೆ ಹಿಂದೇಟು ಹಾಕಬಹುದು.

ಹಿಂಸಾಚಾರ ನಡೆಯದಿದ್ದರೆ, ಪರಿಸ್ಥಿತಿ ಶಾಂತವಾಗಿದ್ದರೆ ಪೆಟ್ರೋಲ್ ಬಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಮದು ಬೆಂಗಲೂರು ಪೆಟ್ರೋಲ್ ಡೀಲರುಗಳ ಒಕ್ಕೂಟದ ಕಾರ್ಯದರ್ಶಿ ಲೋಕೇಶ್ ಕೃಷ್ಣಾ ಹೇಳಿದ್ದಾರೆ.

ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಅಧಿಕೃತವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ತೀರ್ಮಾನ ಕೈಗೊಂಡಿಲ್ಲ. ಆದರೆ, ಆ ದಿನದ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಹೀಗಾಗಿ, ಅದು ಜಿಲ್ಲಾಧಿಕಾರಿಗಳಿಗೆ ಬಿಟ್ಟ ವಿಷಯ ಎಂದು -ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ತುಷಾರ್‌ ಗಿರಿನಾಥ್‌ ಸ್ಪಷ್ಟಪಡಿಸುತ್ತಾರೆ.

ಭಾರತ್‌ ಬಂದ್‌ ಕರೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ . ಬಸ್‌ ಸಂಚಾರದಲ್ಲಿ ವ್ಯತ್ಯಯವೂ ಉಂಟಾಗುವುದಿಲ್ಲ. ಅಂದು ಈಶಾನ್ಯ ಮತ್ತು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಎಂದಿನಂತೆ ಬಸ್‌ ಸಂಚಾರ ಇರುತ್ತದೆ.

ಈ ಸಂಬಂಧ ಈಗಾಗಲೇ ಎಲ್ಲ ವಿಭಾಗಗಳಿಗೆ ಸುತ್ತೋಲೆ ಸಹ ಹೊರಡಿಸಲಾಗಿದೆ. ಬಂದ್‌ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದರೆ, ಆ ಕ್ಷಣದ ಸನ್ನಿವೇಶವನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಯಾ ವಿಭಾಗಗಳಿಗೆ ಸೂಚಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+