ಬೆಂಗಳೂರು ವ್ಯಾಪಾರಿಯ 2 ಕೋಟಿ ಮೌಲ್ಯದ ಚಿನ್ನ ಲೂಟಿ

Gold worth 2 cr stolen from Bangalore jewellery firm staff
ಚೆನ್ನೈ, ಮೇ. 26 : ತಮಿಳುನಾಡು ರಸ್ತೆ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೆಂಗಳೂರಿನ ಚಿನ್ನದ ವ್ಯಾಪಾರಿ ಬಳಿ ಕೆಲಸಕ್ಕಿದ್ದ ಕಾರ್ಮಿಕರಿಬ್ಬರ ಬಳಿಯಿದ್ದ 2 ಕೋಟಿ ರು. ಮೌಲ್ಯದ 6 ಕಿ.ಗ್ರಾಂ. ತೂಕದ ಚಿನ್ನದಾಭರಣಗಳನ್ನು ಲಪಟಾಯಿಸಲಾಗಿದೆ.

ಸೇಲಂನಿಂದ ಕಾಂಚೀಪುರಂಗೆ ತೆರಳುತ್ತಿದ್ದಾಗ ತಿರುವಣ್ಣಾಮಲೈ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನ 24 ವರ್ಷದ ವಿನೋದ್ ಮತ್ತು ಅವರ ಜೊತೆಗಿದ್ದ ರಾಜಸ್ತಾನದ 25 ವರ್ಷದ ಖೇತಾರಾಮ್ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಚಿನ್ನದಂಗಡಿ ಇಟ್ಟಿರುವ ಜಗನ್ ಲಾಲ್ ಖತ್ರಿ ಎಂಬುವವರ ಬಳಿ ಇವರಿಬ್ಬರು ಕೆಲಸ ಮಾಡುತ್ತಿದ್ದಾರೆ. ಚೆನ್ನೈ, ಸೇಲಂ, ಕೊಯಮತ್ತೂರು, ಕಾಂಚೀಪುರಂನಿಂದ ಆರ್ಡರ್‌ಗಳನ್ನು ಪಡೆಯುವ ಇವರು, ತಮ್ಮ ಕೆಲಸಗಾರರ ಮುಖಾಂತರ ಗ್ರಾಹಕರಿಗೆ ಆಭರಣಗಳನ್ನು ತಲುಪಿಸುತ್ತಿರುತ್ತಾರೆ.

ಆದರೆ, ಈ ಬಾರಿ ನೌಕರರ ಅಜಾಗರೂಕತೆಯಿಂದಾಗಿ 6 ಕೋಟಿ ರು. ಮೌಲ್ಯದ ಆಭರಣಗಳು ಕಳ್ಳತನಕ್ಕೊಳಗಾಗಿವೆ. ಕಳ್ಳತನವಾಗಿರುವುದು ತಿಳಿಯುತ್ತಿದ್ದಂತೆ ಡ್ರೈವರ್, ಕಂಡಕ್ಟರ್‌ಗೆ ಅವರು ತಿಳಿಸಿದರಾದರೂ ಅಷ್ಟರಲ್ಲಾಗಲೆ ಕಳ್ಳರು ಜಾಗ ಖಾಲಿ ಮಾಡಿಯಾಗಿತ್ತು. ಅವರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಲಪಟಾಯಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ನೌಕರರಿಬ್ಬರು ಬೆಂಗಳೂರಿನಿಂದ ಕಾಂಚೀಪುರಂಗೆ ಆಭರಣಗಳನ್ನು ಕೊಂಡೊಯ್ಯುತ್ತಿದ್ದರು. ಸೇಲಂನಲ್ಲಿ ಇಳಿದು ಕೆಲ ಆಭರಣ ಅಂಗಡಿ ಮಾಲಿಕರನ್ನು ಭೇಟಿ ಮಾಡಿ ಅಲ್ಲಿಂದ ಕಾಂಚೀಪುರಂಗೆ ತೆರಳುತ್ತಿದ್ದರು. ಕಳ್ಳರು ಸೇಲಂನಿಂದಲೇ ಇವರಿಬ್ಬರನ್ನು ಹಿಂಬಾಲಿಸಿರಬಹುದೆಂದು ಶಂಕಿಸಲಾಗಿದೆ. ಬೆಂಗಳೂರಿನ ಚಿನ್ನದ ವ್ಯಾಪಾರಿ ತೆರಿಗೆ ಕಟ್ಟಿದ್ದಾರೋ ಇಲ್ಲವೋ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗೆಯೆ, ಚಿನ್ನ ಕಳೆದುಕೊಂಡಿರುವ ನೌಕರರನ್ನೂ ವಿಚಾರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+