ಹಿರೇಮಠ್ ಜೆಡಿಎಸ್ ಏಜೆಂಟ್: ಡಿಕೆ ಶಿವಕುಮಾರ್

ಎಸ್ ಆರ್ ಹಿರೇಮಠ್ ಅವರು ಜೆಡಿಎಸ್ ನೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಲು ಆರ್ ಟಿಐ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.
ಆದರೆ, ಈ ಎಲ್ಲಾ ಮಾಹಿತಿಗಳು ಎಚ್ ಡಿ ಕುಮಾರಸ್ವಾಮಿ ಬಳಿ ಈ ಮೊದಲೇ ಇತ್ತು ಎಂಬುದನ್ನು ಮರೆಯುವಂತಿಲ್ಲ. ಅಕ್ರಮ ಗಣಿಗಾರಿಕೆ ಆರೋಪ ರಾಜಕೀಯ ಪ್ರೇರಿತ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಡಿರುವ ಷಡ್ಯಂತ್ರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹಿರೇಮಠ್ ಅವರು ಮಾಡಿರುವ ಆರೋಪವನ್ನು ನ್ಯಾಯಾಲಯದ ಮುಂದಿಡಲಿದೆ. ನಾನು ಕಾನೂನು ಸಮರಕ್ಕೆ ಸಿದ್ಧ. ಗಣಿ ಲೂಟಿ ಮಾಡಿದ ಎಚ್ ಡಿ ಕುಮಾರಸ್ವಾಮಿ ಅವರು ಹಿರೇಮಠ್ ಕಣ್ಣಿಗೆ ಯಾಕೋ ಬಿದ್ದಿಲ್ಲ. ನಮ್ಮ ಕುಟುಂಬ ನಡೆಸಿಕೊಂಡು ಬಂದಿರುವ ವ್ಯಾಪಾರ, ವ್ಯವಹಾರದ ಮೇಲೆ ಇವರಿಗೆ ಕಣ್ಣು ಎಂದು ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.












Click it and Unblock the Notifications