ಗೌಡರ ವಿರುದ್ಧ ಹರಿಹಾಯ್ದ ಮಾನವ ಹಕ್ಕು ಕಾರ್ಯಕರ್ತ

ನೀವು ಒಬ್ಬ ಮುಖ್ಯಮಂತ್ರಿಯಾ, ನಿಮಗೆ ಮಾನ ಮರ್ಯಾದೆ ಅನ್ನೊಂದು ಏನಾದ್ರೂ ಇದೆಯಾ? ನಿಮ್ಮ ಮತ್ತು ಯಡಿಯೂರಪ್ಪ ಮಧ್ಯೆ ಏನಾದರೂ ಭಿನ್ನಾಭ್ರಿಪ್ರಾಯ ಇದ್ದರೆ ಅದನ್ನು ನಿಮ್ಮ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಗಂಟೆಗೆ ಒಂದು ತರ ಊಸರವಳ್ಳಿ ತರ ಹೇಳಿಕೆ ನೀಡಬೇಡಿ. ನೀವು ಒಬ್ಬ ಸಿಎಂ ಅನ್ನೋದನ್ನು ಮರೀಬೇಡಿ understand.. ಎಂದು ಅಬ್ರಹಾಂ ಸಿಎಂ ವಿರುದ್ದ ಗರಂ ಆಗಿದ್ದಾರೆ.
ನಿಮ್ಮ ಮತ್ತು ಯಡಿಯೂರಪ್ಪ ನಡುವಣ ego clash ಗೆ ರಾಜ್ಯವನ್ನು ಯಾಕ್ರೀ ಹಾಳು ಮಾಡುತ್ತೀರಾ? ವಿಧಾನಸೌಧದಲ್ಲಿ ಕೂತು ಏನ್ರೀ ಮಾಡ್ತೀರಾ? ಅಷ್ಟು ಸ್ಪಷ್ಟವಾಗಿ ನಾನು ದಾಖಲೆ ನೀಡಿದರೂ ಸಿಇಸಿಗೆ ಉಡಾಫೆಯ ಉತ್ತರ ನೀಡುತ್ತೀರಾ, ನಿಮ್ಮ ಮುಖ್ಯ ಕಾರ್ಯದರ್ಶಿಗೆ ಏನು ಇಂಗ್ಲಿಷ್ ಬರೋಲ್ವಾ? ಬರೋಲ್ಲಾಂದ್ರೆ ಯಾಕ್ರೀ ಆ ಸ್ಥಾನದಲ್ಲಿ ಅವರನ್ನು ಇಟ್ಟು ಕೊಂಡಿದ್ದೀರಾ ಎಂದು ಅಬ್ರಹಾಂ ಗುರುವಾರ (ಮೇ 24) ಜನಶ್ರೀ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಯಾರನ್ನೂ ರಕ್ಷಿಸುವ ಕೆಲಸ ಮಾಡೋಕೆ ಹೋಗಬೇಡಿ. ನೀವು ಮತ್ತು ನಿಮ್ಮದೇ ಜಾತಿಯ ಗೃಹ ಸಚಿವರ ಬಣ್ಣ ಬಯಲು ಮಾಡುತ್ತೇನೆ. ಜನ ಬಿಜೆಪಿ ಮೇಲೆ ವಿಶ್ವಾಸ ಇಟ್ಟು ನಿಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ, ಅದನ್ನು ಉಳಿಸುವ ಕೆಲಸ ಮಾಡಿ ಮೊದಲು. ದೇಶದಲ್ಲಿ ನ್ಯಾಯ ಅನ್ನೋದು ಎಲ್ಲರಿಗೂ ಒಂದೇ , ನೆನಪಿಟ್ಟುಕೊಳ್ಳಿ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಅಬ್ರಹಾಂ ಸಿಎಂ ಸದಾನಂದ ಗೌಡ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಹಿನ್ನಲೆ: ಮೂವರು ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್, ಕೃಷ್ಣ ಮತ್ತು ಕುಮಾರಸ್ವಾಮಿ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಲಾಗಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳ ಬೇಕೆಂದು ಅಬ್ರಹಾಂ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ನ್ಯಾಯಾಲಯ ತನಿಖೆ ನಡೆಸಿ ವರದಿ ನೀಡುವಂತೆ ತನ್ನ ಪೊಲೀಸರಿಗೆ ಸೂಚಿಸಿತ್ತು.
ತನಿಖೆ ವಿರುದ್ದ ಮಾಜಿ ಸಿಎಂ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಸುಪ್ರೀಂಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಆಗ ಅಬ್ರಹಾಂ ಸಿಇಸಿ ಮೊರೆ ಹೋಗಿದ್ದರು.












Click it and Unblock the Notifications