ಜಗನ್ ಬ್ಯಾಂಕ್ ಜಪ್ತಿ, ಕೋರ್ಟಿನಿಂದ ರಿಲೀಫ್

Jagan Bank accounts defreezing
ಹೈದರಾಬಾದ್, ಮೇ.23: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಕಡಪ ಸಂಸದ ಜಗನ್ ಮೋಹನ್ ರೆಡ್ಡಿಗೆ ಹೈಕೋರ್ಟ್ ಕೊಂಚ ರಿಲೀಫ್ ಕೊಟ್ಟಿದೆ.

ಜಗನ್ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ ಕ್ರಮವನ್ನು ಸಿಬಿಐ ಸಮರ್ಥಿಸಿಕೊಂಡಿತ್ತು. ಆದರೆ, ಸಾಕ್ಷಿ ಡೈಲಿ ಸೇರಿದಂತೆ ಬ್ಯಾಂಕ್ ಖಾತೆ ಜಪ್ತಿಗೆ ಷರತ್ತುಬದ್ಧ ತಾತ್ಕಾಲಿಕ ತಡೆ ನೀಡಲಾಗಿದೆ.

ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ತಾತ್ಕಾಲಿಕವಾಗಿ ಬ್ಯಾಂಕ್ ಜಪ್ತಿಯನ್ನು ಹಿಂಪಡೆಯುವಂತೆ ಸಿಬಿಐಗೆ ಸೂಚಿಸಲಾಗಿದೆ. bank guarantee ನೀಡಿ ಬ್ಯಾಂಕ್ ವ್ಯವಹಾರ ಮುಂದುವರೆಸಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಸಾಕ್ಷಿ ಡೈಲಿ, ಸಾಕ್ಷಿ ಟಿವಿ ಮತ್ತು ಜನನಿ ಇನ್ಫ್ರಾ ಕಂಪನಿಗಳ ಬ್ಯಾಂಕ್ ಖಾತೆ ಜಪ್ತಿ ಮಾಡಿದ್ದ ಸಿಬಿಐ ತಂಡ ತನ್ನ ದಾಳಿಯ ಬಗ್ಗೆ ವಿವರಣೆ ನೀಡಿ, ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳದಿದ್ದರೆ ಅನೇಕ ಅನಾಹುತ ನಡೆಯುತ್ತಿತ್ತು ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಒಟ್ಟು 103 ಕೋಟಿ ರು.ಗೂ ಅಧಿಕ ಹಣ ಸಿಬಿಐ ಪಾಲಾಗಿತ್ತು.

ಸಿಬಿಐ ಕ್ರಮವನ್ನು ಖಂಡಿಸಿ ಆಂಧ್ರಪ್ರದೇಶ ಪತ್ರಕರ್ತರ ಒಕ್ಕೂಟ ಖಂಡಿಸಿದೆ. ಸಾಕ್ಷಿ ಪತ್ರಿಕೆಗೆ ಸರ್ಕಾರಿ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿರುವುದನ್ನು ಸಹ ಒಕ್ಕೂಟ ವಿರೋಧಿಸಿತ್ತು. ಫೇಸ್ ಬುಕ್ ನಲ್ಲಿ ಸಾಕ್ಷಿ ಪತ್ರಿಕೆ ಅಭಿಯಾನ ಆರಂಭಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+