KAS ಮಹಾಂತೇಶ್ ಹತ್ಯೆ: ಇಬ್ಬರ ಬಂಧನ

ಇಂದು ಸಂಜೆ ವೇಳೆಗೆ ಬಂಧಿತರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ, ಪ್ರಕರಣದ ಹೂರಣವನ್ನು ಅವರು ಬಯಲಿಗಿಡುವ ಲಕ್ಷಣಗಳಿವೆ. ಈ ಮೊದಲು ಪ್ರಕರಣದ ಸಂಬಂಧ ಕುಶಾಲನಗರ ಮೂಲದ ಯುವತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದೀಗ ಸ್ಪಷ್ಟ ರೂಪ ಪಡೆಯುತ್ತಿದೆ. ಗಮನಾರ್ಹವೆಂದರೆ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಆದರೆ ಬಂಧಿತರ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಈ ಮಧ್ಯೆ, ಮಹಾಂತೇಶ್ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಸಂಚಲವನ್ನುಂಟು ಮಾಡಿದೆ. ರಾಜ್ಯದ ಸಂಸದರು ಕೈಕಟ್ಟಿಕೊಂಡು, ಬಾಯ್ಮುಚ್ಚಿಕೊಂಡಿದ್ದರೂ ನೆರೆಯ ಕೇರಳದ ಸಂದರೊಬ್ಬರು ಪ್ರಕರಣವನ್ನು ರಾಜ್ಯಸಭೆಯಲ್ಲಿ ಮಂಗಳವಾರ ಪ್ರಸ್ತಾಪಿಸಿದ್ದಾರೆ.
ಕೇರಳ ಸಂಸದ ವೇಣುಗೋಪಾಲ್ ಅವರು ಮಹಾಂತೇಶ್ ಹತ್ಯೆ ಬಗ್ಗೆ ಪ್ರಸ್ತಾಪಿಸಿ ಬಿಇಎಂಎಲ್ ಹೌಸಿಂಗ್ ಸೊಸೈಟಿ ಮತ್ತು ಟೆಟ್ರಾ ಹಗರಣಕ್ಕೆ ಸಂಬಂಧಿಸಿದ ಆಡಿಟ್ ವರದಿಯನ್ನು ಮಹಾಂತೇಶ್ ಪರಿಶೀಲಿಸುತ್ತಿದ್ದ ಸಂದರ್ಭದಲ್ಲೇ ಅವರ ಕೊಲೆ ನಡೆದಿದೆ. ಹಾಗಾಗಿ, ಕೇಂದ್ರ ಸರಕಾರ ಮುಂದೆ ಬಂದು ಪ್ರಜರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಮೇಲ್ಮನೆಯಲ್ಲಿ ಆಗ್ರಹಿಸಿದರು.
ನಿರೀಕ್ಷಿಸಿ: KAS ಮಹಾಂತೇಶ್ ಗೆ ಪ್ರೇಮಪಾಶ ಮುಳುವಾಯಿತೇ ?












Click it and Unblock the Notifications