ನಿರೀಕ್ಷಿಸಿ: ಅನಂತ ಹುಡ್ಕೋ ಹಗರಣ ತೆರೆ ಮೇಲೆ

hudco-scam-on-screen-by-yeddyurappa-basavaraj
ಬೆಂಗಳೂರು, ಮೇ 21: ಎನ್ ಡಿಎ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಎಚ್. ಎನ್. ಅನಂತಕುಮಾರ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ಹುಡ್ಕೋ ಹಗರಣವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶೀಘ್ರವೇ ಬೆಳ್ಳಿತೆರೆಗೆ ತರಲಿದ್ದಾರಾ !?

ಇದಕ್ಕೆ ಉತ್ತರ ಹೌದು. ಹುಡ್ಕೋ Housing and Urban Development Corporation (HUDCO) ಹಗರಣವಷ್ಟೇ ಅಲ್ಲ ಇತರೆ ಹಗರಣಗಳನ್ನೂ ಯಡಿಯೂರಪ್ಪ ಅವರು ಶೀಘ್ರವೇ ಬೆಳ್ಳಿತೆರೆಗೆ ತರಲಿದ್ದಾರೆ ಎಂದು ಯಡಿಯೂರಪ್ಪ ನಿಷ್ಠ ತುಮಕೂರು ಸಂಸದ ಜಿ ಎಸ್ ಬಸವರಾಜ್.

ಸರಿ, ಹುಡ್ಕೋ ಹಗರಣದ ತೆರೆಯನ್ನು ಯಾವಾಗ ಸರಿಸುತ್ತಾರೆ? ಇದಕ್ಕಾಗಿ ಸ್ವಲ್ಪ ದಿನ ಕಾಯಬೇಕು. ಯಡಿಯೂರಪ್ಪ ಅವರು ಬಿಜೆಪಿ ಪಕ್ಷಿದಿಂದ ಹೊರಬಂದ ನಂತರವಷ್ಟೇ ಹುಡ್ಕೋ ಹಗರಣ ಪರದೆ ಮೇಲೆ ರಾರಾಜಿಸಲಿದೆ ಎಂಬುದು ಬಸವರಾಜ್ ಭವಿಷ್ಯ.

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಲೋಕಸಭೆಯಲ್ಲಿ ನನಗೆ ಮಾತನಾಡಲು ಬಿಡುವುದಿಲ್ಲ. ಕಣ್ಸನ್ನೆ, ಕೈಸನ್ನೆಗಳ ಮೂಲಕ ಜಾಸ್ತಿ ಮಾತನಾಡದಂತೆ ತಡೆಯುತ್ತಾರೆ. ಇದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಕಾರಣ ಎಂದೂ ಸಂಸದ ಬಸವರಾಜ್ ಝಾಡಿಸಿದ್ದಾರೆ. ಕಾಂಗ್ರೆಸ್ಸಿನಲ್ಲೇ ಸ್ವಾತಂತ್ರ್ಯವಿತ್ತು. ಇಲ್ಲಿ ಸ್ವಾತಂತ್ರ್ಯವೇ ಇಲ್ಲ. ನನಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಅವರು ನೇರಾನೇರಾ ಆರೋಪ ಮಾಡಿದ್ದಾರೆ.

ಗಮನಾರ್ಹವೆಂದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೂ ಸಹ ಮೊನ್ನೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಇದೇ ರೀತಿಯ ಆರೋಪ ಮಾಡಿದ್ದರು. ಅನಂತ್-ಅಡ್ವಾಣಿಯ ನಿಷ್ಠರಿಗೆ ಮಾತ್ರ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಬಿಜೆಪಿಯ ಇತರೆ ಸಂಸದರನ್ನು ಕಡೆಗಳಿಸಲಾಗುತ್ತಿದೆ ಎಂದು ಯಡಿಯೂರಪ್ಪ ಕಿಡಿಕಾರಿದ್ದರು.

ಲೋಕಾಯುಕ್ತ ವರದಿಗೆ ಮುನ್ನವೇ ರಾಜೀನಾಮೆಗೆ ಆದೇಶ!:
ನ್ಯಾ ಸಂತೋಷ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ವರದಿ ಸಲ್ಲಿಸುವುದಕ್ಕೆ ಒಂದು ಗಂಟೆ ಮುಂಚೆಯೇ ಎಲ್ ಕೆ ಅಡ್ವಾಣಿ ಅವರು ಯಡಿಯೂರಪ್ಪನವರಿಗೆ ಫೋನ್ ಮಾಡಿ, ತಕ್ಷಣ ರಾಜೀನಾಮೆ ನೀಡಿ ಎಂದು ಫರ್ಮಾನು ಹೊರಡಿಸಿದ್ದರು. ವರದಿ ಸಲ್ಲಿಕೆಗೆ ಮುಂಚೆಯೇ ದೆಹಲಿ ನಾಯಕರಿಗೆ ಮಾಹಿತಿ ರವಾನೆಯಾಗಿತ್ತು ಎಂದರೆ ಯಡಿಯೂರಪ್ಪ ವಿರುದ್ಧ ಯಾವ ಮಟ್ಟದಲ್ಲಿ ಕುತಂತ್ರ ನಡೆದಿತ್ತು ಎಂಬುದನ್ನು ಊಹಿಸಬಹುದು ಎಂದು ಬಸವರಾಜ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+