ಭಯೋತ್ಪಾದನೆ ಜಾಲದಲ್ಲಿ ಬೆಂಗಳೂರು ಟೆಕ್ಕಿ

31 ವರ್ಷ ಎಸ್ ಸಿಬಿ ಜಗದೀಶ್ ಬೆಂಗಳೂರಿನಲ್ಲಿ ಕಂಪ್ಯೂಟರ್ ಕಲಿಕಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಜಗದೀಶ್ ತನ್ನ ಬಂಧುಗಳನ್ನು ಕಾಣಲು ಹೈದರಾಬಾದಿಗೆ ಹೋಗಿದ್ದಾಗ ಅಲ್ಲಿನ ಪೊಲೀಸರು ಆತನ ಮೇಲೆ ಕಣ್ಗಾವಲು ಹಾಕಿದ್ದಾರೆ.
ಜಗದಿಶ್ ಹೈದರಾಬಾದಿಗೆ ತೆರಳಿದ್ದಾಗ ಅಲ್ಲಿ ಬಾಂಬ್ ತಯಾರಿಸುವ ಬಗ್ಗೆ ಅಂತರ್ಜಾಲ ಸಂಪರ್ಕದ ಮೂಲಕ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದ. ಹಾಗೆ ಮಾಹಿತಿ ಪಡೆಯುತ್ತಿದ್ದಾಗಲೇ ಆ ಬಾಂಬ್ ಸ್ಫೋಟಿಸಿ, ಜಗದೀಶ್ ತೀವ್ರವಾಗಿ ಗಾಯಗೊಂಡಿದ್ದಾನೆ. ಸದ್ಯಕ್ಕೆ ಆತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಾಂಬ್ ಸ್ಫೋಟದ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಲ್ಲಿ ಮೂರು ಮೊಬೈಲುಗಳು, ಸಿಮ್ ಕಾರ್ಡುಗಳು, ಬ್ಯಾಟರಿ ಚಾಲಿತ ಗಡಿಯಾರವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೆಲ್ಲ ಬಾಂಬ್ ತಯಾರಿಸಲು ಬಳಸಲಾಗಿತ್ತು ಎನ್ನಲಾಗಿದೆ. ಸ್ಥಳದಲ್ಲೇ ಜಗದೀಶ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಜಗದೀಶ್ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ.












Click it and Unblock the Notifications