ನಿಗೂಢ ರೀತಿಯಲ್ಲಿ ವಿಪ್ರೋ ಟೆಕ್ಕಿ ಆತ್ಮಹತ್ಯೆ

Chennai: Wipro techie commits suicide
ಚೆನ್ನೈ, ಮೇ.18: ವಿಪ್ರೋ ಸಂಸ್ಥೆಯ 26 ವರ್ಷ ವಯಸ್ಸಿನ ಮಹಿಳಾ ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ಸ್ಟಾರ್ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಅತಿಯಾದ ನಿದ್ರಾಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ವಿಪ್ರೋ ಟೆಕ್ಕಿ ರಾಮಲಕ್ಷ್ಮಿ ಗಂಡನಿಂದ ವಿಚ್ಛೇದನ ಪಡೆದ ಮೇಲೆ ತನ್ನ ತಾಯಿ ಕೃಷ್ಣವೇಣಿ ಜೊತೆ ಪಳವಂಥಗಲ್ ಪ್ರದೇಶದಲ್ಲಿ ವಾಸವಾಗಿದ್ದರು. ಜಿಎಸ್ ಟಿ ರಸ್ತೆ, ಸೈಂಟ್ ಥಾಮಸ್ ಮೌಂಟ್ ಏರಿಯಾದ ಸ್ಟಾರ್ ಹೋಟೆಲ್ ನಲ್ಲಿ ಸೂಸೈಡ್ ನೋಟ್ ಬರೆದಿಟ್ಟು ಸತ್ತಿದ್ದಾರೆ.

"ನನ್ನ ನಿರ್ಣಯದಿಂದ ಅಮ್ಮನಿಗೆ ತೀವ್ರ ನೋವಾಗುತ್ತದೆ ಎಂಬುದನ್ನು ಬಲ್ಲೆ. ಆದರೆ, ನನಗೆ ಬೇರೆ ವಿಧಿಯಿರಲಿಲ್ಲ. ಪ್ರೊಫೇಷನಲ್ ಹಾಗೂ ಪರ್ಸನಲ್ ಲೈಫ್ ಸರಿದೂಗಿಸಲು ನನಗೆ ಕಷ್ಟವಾಗುತ್ತಿದೆ. ಆದರೆ, ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಆತ್ಮಹತ್ಯಾ ಪತ್ರದಲ್ಲಿ ರಾಮಲಕ್ಷ್ಮಿ ಬರೆದಿಟ್ಟಿದ್ದಾರೆ.

ಆದರೆ, ರಾಮಲಕ್ಷ್ಮಿ ತಾಯಿ ಕೃಷ್ಣವೇಣಿ ಅವರು ಪೊಲೀಸರಿಗೆ ದೂರು ನೀಡಿದ್ದು, ಬುಧವಾರದಿಂದ ನಾಪತ್ತೆಯಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕಷ್ಟ ಬಂದಿರಲಿಲ್ಲ. ನಿಜವಾದ ಕಾರಣ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಮನೆ ಬಿಟ್ಟ ರಾಮಲಕ್ಷ್ಮಿ ಸ್ಟಾರ್ ಹೋಟೆಲ್ ನಲ್ಲಿ ರೂಮ್ ಮಾಡಿದ್ದಾಳೆ. ಸಾಯುವುದಕ್ಕೂ ಮುನ್ನ ಹೊಟೆಲ್ ರಿಷಪ್ಷನಿಸ್ಟ್ ಗೆ ಕರೆ ಮಾಡಿ ಇನ್ನು 15 ನಿಮಿಷದಲ್ಲಿ ರೂಮ್ ಖಾಲಿ ಮಾಡುತ್ತೇನೆ ಎಂದಿದ್ದಾರೆ. 10 ನಿಮಿಷ ಬಿಟ್ಟು ರೂಮ್ ಬಾಯ್ ಹೋಗಿ ನೋಡಿದರೆ ರಾಮಲಕ್ಷ್ಮಿ ಶವ ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+