Facebook ಅವಾಂತರ: ಟೆಕ್ಕಿ ಪತ್ನಿ ಡೈವೋರ್ಸಿಗೆ

ಏನಪಾ ಅಂದರೆ 28 ವರ್ಷದ ಟೆಕ್ಕಿ ಪಲ್ಲವಿ 31 ವರ್ಷದ ತನ್ನ ಉದ್ಯಮಿ ಪತಿ ಗೌರವ್ ಅವರಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಗುಜರಾಯಿಸಿದ್ದಾರೆ. ಅಷ್ಟಕ್ಕೂ ಆತ ಮಾಡಿದ ತಪ್ಪಾದರೂ ಏನು ಎಂದಿರಾ!? ಪಾಪ ಅವಯ್ಯ ಮದುವೆಗೆ ಮುನ್ನ ತನ್ನ Facebook ಖಾತೆಯ marriage ಕಾಲಂನಲ್ಲಿ single ಎಂದು ತುಂಬಿದ್ದ. ಆದರೆ ಮದುವೆಯ ನಂತರ ಪಲ್ಲವಿ ತನ್ನ ಮನ-ಮನೆ ತುಂಬಿರುವುದನ್ನು ದಾಖಲಿಸಲಿಲ್ಲ. ಅಂದರೆ Facebook ನಲ್ಲಿ ವ್ಯಕ್ತಿಗತ ವಿವರವನ್ನು update ಮಾಡಲಿಲ್ಲ.
ಸರಿ ಕಲಿತಾ ನಾರಿ... ಅದೂ ಐಟಿ ನಾರಿ. ಮದುವೆಯಾದ ಎರಡೇ ತಿಂಗಳಲ್ಲಿ ಪತಿ ಎಸಗಿರುವ 'ಭಾರಿ ಪ್ರಮಾದವನ್ನು' ಪತ್ತೆ ಹಚ್ಚೇ ಬಿಟ್ಟಳು. ತಡವೇಕೆ... ಸೀದಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಹತ್ತಿಯೇ ಬಿಟ್ಟಳು ಪುಣ್ಯಾತಗಿತ್ತಿ. ಆ ಬಡಪಾಯಿ ಉದ್ಯಮಿ ಗಂಡನೋ ಅಂಬೋ ಅನ್ನುತ್ತಾ.
ಯುವರ್ ಆನರ್. ನನ್ನಿಂದ ಅಚಾತುರ್ಯವಾಗಿದೆ ಒಪ್ಕೋತೀತಿ. ಆದರೆ ಏನೋ business tension... ಹಾಗಾಗಿ ತಕ್ಷಣಕ್ಕೆ ನನ್ನ Facebook update ಮಾಡಕ್ಕೆ ಆಗಲಿಲ್ಲ, ಅಷ್ಟೇ. ಯಾರೂ ಅನ್ಯತಾ ಭಾವಿಸಬಾರದು ಎಂದು ಕೋರ್ಟಿನಲ್ಲಿ ಅಂಗಾಲಾಚಿದ್ದಾನೆ.
ಆದರೆ...ಕಲಿತಾ ನಾರಿ... ಅದೂ ಐಟಿ ನಾರಿ... ಪಲ್ಲವಿ ಗಂಡನ 'ಅಚಾತುರ್ಯ' ಮನ್ನಿಸಿ, ಆತನ ಬಾಳಲ್ಲಿ ಅನುಪಲ್ಲವಿ ನುಡಿಸುವ ಬದಲು... ಲೇದು ಲೇದು. ನನ್ನ ಗಂಡನನ್ನು ನಾನು ನಂಬೋಲ್ಲ. ಅವ ಬೇಕಂತಲೇ ಹೀಗೆ ಆ ಕಾಲಂ ಅನ್ನು ಬಿಟ್ಟಿದ್ದಾನೆ. ಯಾವುದಾದರೂ 'ಹಕ್ಕಿ' ತಮಗೆ ಬೀಳುತ್ತದೆ ಎಂದು Facebook ಕಿಟಕಿ ತೆರೆದಿಟ್ಟುಕೊಂಡಿದ್ದಾನೆ. ಇವನನ್ನು ನಂಬೋ ಹಾಗಿಲ್ಲ ಅಂತ ಖಂಡತುಂಡವಾಗಿ ಕೋರ್ಟಿನಲ್ಲಿ ಹೇಳಿದ್ದಾಳೆ.
ಪಾಪ ಜಡ್ಜ್ ತಾನೆ ಏನು ಮಾಡುತ್ತಾರೆ. ಅಮ್ಮಾ ತಾಯೀ ಒಂದಾರು ತಿಂಗಳು counselling ತಗೋ ಆಮೇಲೆ ನೊಡೋಣ ನಿನ್ನ ಕೇಸು ಎಂದು ವಾಯಿದಾ ಹಾಕಿದ್ದಾರೆ! ಹಳ್ಳಿಗಳ ಕಡೆ ಮಾತನಾಡಿಕೊಳ್ಳುತ್ತಿರುತ್ತಾರೆ- ಈ ಐಟಿ ಮಂದಿಗೆ ತಲೆ ಇರೋಲ್ಲ, ಜೀವನಾನುಭವ ಅಸಲಿಗೇ ಇರೋಲ್ಲ. ಅಕ್ಕಿ/ಭತ್ತ ಬೆಳೆಯೋದು ಆಲದ ಮರದಿಂದ ಅಂತ ಹೇಳಿದರೆ ಹೌದಾ ಅಂತ ಆಶ್ಚರ್ಯ ತೋರುತ್ತಾರಂತೆ!












Click it and Unblock the Notifications