ಅತ್ಯಚ್ಚರಿ: ಯಡಿಯೂರಪ್ಪಗೆ ಶರಣೆಂದ ಶ್ರೀರಾಮುಲು

cbi-raid-sriramulu-comes-to-yeddyurappa-rescue
ಬೆಂಗಳೂರು, ಮೇ 16: ಅತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ನಿವಾಸಗಳ ಮೇಲೆ ಸಿಬಿಐ ತಂಡ ಮರುಕುಕೊಂಡು ಬಿದ್ದಿರುವಾಗ ರಾಜ್ಯ ರಾಜಕೀಯದಲ್ಲಿ ಅತ್ಯಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಈ ಬೆಳವಣಿಗೆ ನಡೆದಿದೆ.

ಕಳೆದ ಆರೇಳು ತಿಂಗಳಿಂದ ಯಡಿಯೂರಪ್ಪ ನಮ್ಮ ಬಳಿ ಭಿಕ್ಷೆಯೆತ್ತಿದ್ದರು ಎಂದು ಕಟುವಾಗಿ ಟೀಕಿಸುತ್ತಿದ್ದ ಬಳ್ಳಾರಿ ಶಾಸಕ ಶ್ರೀರಾಮುಲು plate change ಮಾಡಿದ್ದು, ಯಡಿಯೂರಪ್ಪಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಯಡಿಯೂರಪ್ಪ ಅವರನ್ನು 'ಆಕಳು ಮನಸ್ಸಿನ ವ್ಯಕ್ತಿ' ಎಂದು ರಾಮುಲು ಬಣ್ಣಿಸಿದ್ದಾರೆ.

ಚಯ್ಯೆತ್ತಿ ಜೈ ಕೊಟ್ಟಿನ ಶ್ರೀರಾಮುಲು: 54 ದಿನಗಳ ಪಾದಯಾತ್ರೆಯಲ್ಲಿರುವ ಶ್ರೀರಾಮುಲು ಹೆಜ್ಜೆಹೆಜ್ಜೆಗೂ ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಹಳಿಯುತ್ತಾ ಬಂದಿದ್ದರು. ಆದರೆ ಏಕಾಏಕಿ ಕೊಪ್ಪಳದಲ್ಲಿ ಇಂದು ತಮ್ಮ ದಿಕ್ಕನ್ನು ಬದಲಿಸಿದ್ದು, ಯಡಿಯೂರಪ್ಪಗೆ ಜೈ ಎಂದಿದ್ದಾರೆ.

ಜೂನ್ 17ರ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದಿರಿ ಎಂದು ಸಿಬಿಐ ದಾಳಿ ಸಂದರ್ಭದಲ್ಲಿ ಯಡಿಯೂರಪ್ಪಗೆ ತುಂಬು ಧೈರ್ಯ ತುಂಬಿರುವ ಶ್ರೀರಾಮುಲು ಯಡಿಯೂರಪ್ಪನವರತ್ತ ರಾಜಕೀಯ ನೆರವಿನ ಹಸ್ತ ಚಾಚಿದ್ದಾರೆ. ಸೋ, ರಾಜ್ಯ ರಾಜಕೀಯ ಸಮೀಕರಣ ಬದಲಾಗುವ ಲಕ್ಷಣಗಳು ದಟ್ಟವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+