ರವಿ-ರೇಣುಕಾ ಕೆಸರೆರಚಾಟ, ಪುಕ್ಕಟೆ ಮನರಂಜನೆ

CT Ravi
ಚಿಕ್ಕಮಗಳೂರು, ಮೇ.15: ಅತ್ತ ಯಡಿಯೂರಪ್ಪ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮುಂದೂಡಿಕೆ ಮಾಡುವ ಹೊತ್ತಿಗೆ ಶಾಸಕ ಸಿಟಿ ರವಿ ಹಾಗೂ ರೇಣುಕಾಚಾರ್ಯ ಅವರ ವಾಕ್ಸಮರ ಕ್ಲೈಮ್ಯಾಕ್ಸ್ ಹಂತ ತಲುಪಿತ್ತು.

ಶಾಸಕ ರೇಣುಕಾಚಾರ್ಯ ಅವರು ಸಿಟಿ ರವಿಯನ್ನು ಭೂಗಳ್ಳ ಎಂದು ಜರೆದಿರುವುದಕ್ಕೆ ಸಿಟಿ ರವಿ ಆಕ್ರೋಶಿತರಾದರು.ರೇಣುಕಾಚಾರ್ಯ ಯಾವ ರೀತಿಯ ಮನುಷ್ಯ ಎಂಬುದು ನನಗೆ ಗೊತ್ತಿದೆ ಅವರ ನಾಲಿಗೆ ಕುಲ ಹೇಳುತ್ತೆ. ಅವರ ಯೋಗ್ಯತೆ ನಾಡಿನ ಜನರಿಗೆ ಗೊತ್ತಿದೆ ಎಂದು ಸಿಟಿ ರವಿ ಕಿಡಿಕಾರಿದರು.

ರೇಣುಕಾಚಾರ್ಯ ಚಿಕ್ಕಮಗಳೂರಿಗೆ ಬಂದು ಸವಾಲು ಹಾಕಲಿ ನೋಡೋಣ. ಪಕ್ಷದಲ್ಲಿ ಭಿನ್ನಮತ ಚಟುವಟಿಕೆ ಆರಂಭವಾಗಿದ್ದೇ ರೇಣುಕಾಚಾರ್ಯ ಅವರ ಮೂಲಕ ಎಂಬುದನ್ನು ಮರೆಯುವಂತಿಲ್ಲ. ರಸ್ತೆ ಮಧ್ಯೆದಲ್ಲಿ ನಿಂತು ಯಡಿಯೂರಪ್ಪ ಹಾಗೂ ಶೋಭಾರ ವಿರುದ್ಧ ಬಾಯಿಗೆ ಬಂದಂತೆ ಬಡಬಡಾಯಿಸಿದ್ದು ಇದೇ ರೇಣುಕಾಚಾರ್ಯ ಎಂಬುದು ಎಲ್ಲರಿಗೂ ತಿಳಿದಿದೆ.

ಶಾಸಕರ ಹೈಜಾಕ್ ಮಾಡಿದ್ದು ಯಾರು?: ರೆಡ್ಡಿಗಳಿಂದ ಹಣ ಪಡೆದು ಯಡಿಯೂರಪ್ಪರ ವಿರುದ್ಧ ಶಾಸಕರ ಪಡೆ ಕಟ್ಟಿಕೊಂಡು ಮದ್ರಾಸ್, ಗೋವಾಕ್ಕೆ ಹೋಗಿದ್ದು ಯಾರು? ಸರ್ಕಾರದ ವಿರುದ್ಧ ಸಹಿ ಸಂಗ್ರಹ ಮಾಡಿ ರಾಜ್ಯಪಾಲರ ಬಳಿ ಹೋಗಿದ್ದು ಯಾರು? ಅಲ್ಲದೆ ಇಂದಿನ ಬಿಜೆಪಿ ಬಿಕ್ಕಟ್ಟಿಗೂ ಇದೇ ರೇಣುಕಾಚಾರ್ಯ ಕಾರಣ ಎಂದು ಸಿಟಿ ರವಿ ಗುಡುಗಿದ್ದಾರೆ.

ಬಿಎಸ್‌ವೈ ಸಿಎಂ ಆಗಿದ್ದಾಗ, ತನ್ನನ್ನು ಮಂತ್ರಿ ಮಾಡಿ ಎಂದು ಎಷ್ಟು ಬಾರಿ ಅವರ ಕಾಲಿಗೆ ಡೈ ಹೊಡೆದಿದ್ದ. ನೀನು ಯಾವ ಸತ್ಯ ಹರಿಶ್ಚಂದ್ರ, ಚಿಕ್ಕಮಗಳೂರಿನಲ್ಲಿರುವಾಗ ಏನಾಗಿದ್ದಿ, ಈಗ ಬೆಂಗಳೂರಿಗೆ ಬಂದು ಏನು ಆಗಿದ್ದೀಯ ಎಂಬುದು ಎಲ್ಲರಿಗೂ ತಿಳಿದಿದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕಾಲಿಗೆ ಬಿದ್ದು, ರಿಯಲ್ ಎಸ್ಟೇಟ್ ದಂಧೆ ನಡೆಸಿದ್ದಾರೆ ಎಂದು ರವಿ ವಿರುದ್ಧ ರೇಣುಕಾ ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+