ಅತ್ಯಾಚಾರ ಬಾಧಿತರಿಗೆ ಲಕ್ಷಾಂತರ ಸರಕಾರಿ ಪರಿಹಾರ

ಕೇಂದ್ರ ಸರಕಾರದ ಬಾಧಿತರಿಗೆ ಪರಿಹಾರ ವಿನಿಯೋಗ ಯೋಜನೆಯಡಿ ಈ ಯೋಜನೆ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಸಂಪುಟವು ಸೋಮವಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಯೋಜನೆ ಜಾರಿ ಸಂಬಂಧ ದೆಹಲಿ ಸರಕಾರ ಬಜೆಟಿನಲ್ಲಿ 15 ಕೋಟಿ ರು. ತೆಗೆದಿರಿಸಿದೆ. ಈ ಪ್ರಕರಣಗಳಲ್ಲಿ ಸಾವು ಸಂಭವಿಸಿದರೆ ಸಾವಿಗೀಡಾದ ಮಹಿಳೆಯ ಮಕ್ಕಳಿಗೆ 3 ರಿಂದ 5 ಲಕ್ಷ ರು. ವಿತರಿಸಲಾಗುವುದು. ಹಾಗೆಯೇ, ಶೆ. 80 ಸುಟ್ಟ ಗಾಯಗಳು ಅಥವಾ ದೈಹಿಕ ನ್ಯೂನತೆಗೆ ಒಳಗಾದರೆ ಅವರಿಗೂ ಸಹ ಇದೇ ಪ್ರಮಾಣದ ಆರ್ಥಿಕ ನೆರವು ಲಭಿಸಲಿದೆ ಎಂದು ಮುಖ್ಯಮಂತ್ರಿ ಶೀಲಾ ತಿಳಿಸಿದ್ದಾರೆ.
ಮಾನವ ಕಳ್ಳ ಸಾಗಣೆ, ಶಿಶು ದುರ್ಬಳಕೆ ಮತ್ತು ಅಪಹರಣದಂತಹ ಪ್ರಕರಣಗಳಲ್ಲಿ 50,000 ರು. ಹಾಗೂ ಬಾಧಿತ ಮಕ್ಕಳಿಗೆ ಗಾಯಗಳಾದರೆ 10,000 ರು. ಪರಿಹಾರ ವಿತರಿಸುವುದಾಗಿ ಅವರು ಘೋಷಿಸಿದರು.












Click it and Unblock the Notifications