• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜೀನಾಮೆ ನಿರ್ಧಾರ ಮುಂದೂಡಿದ ಯಡಿಯೂರಪ್ಪ

By Mahesh
|
BS Yeddyurappa
ಬೆಂಗಳೂರು, ಮೇ.14: ನಿರೀಕ್ಷೆಯಂತೆ ಬೆಂಗಳೂರಿನಲ್ಲಿ ಸಂಜೆ ಮಳೆ ಸುರಿದ ಕಾರಣ, ಯಡಿಯೂರಪ್ಪ ಅವರು ಹಚ್ಚಿದ ಪಠಾಕಿ ಟುಸ್ ಆಗಿದೆ. ಕ್ಲೈಮ್ಯಾಕ್ಸ್ ತನಕ ಹಲವು ತಿರುವು ಗಳನ್ನು ಪಡೆದುಕೊಂಡ ರಾಜಕೀಯ ವಿದ್ಯಮಾನಗಳು ಕೊನೆಗೆ Anti Climax ನಲ್ಲಿ ಅಂತ್ಯಗೊಂಡಿದೆ. ಒಂದೇ ಸಾಲಿನಲ್ಲಿ ಹೇಳುವುದಾದರೆ..ಯಡಿಯೂರಪ್ಪ ಬಿಜೆಪಿ ಪಕ್ಷ ತೊರೆಯುತ್ತಿಲ್ಲ. ಆದರೆ, ರಾಜೀನಾಮೆ ನೀಡುವುದನ್ನು ಮುಂದೂಡಿದ್ದಾರೆ.

ರೇಸ್ ಕೋರ್ಸ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯುದಕ್ಕೂ ಸದಾನಂದ, ಈಶ್ವರಪ್ಪ ಹಾಗೂ ಅನಂತ್ ಕುಮಾರ್ ಅವರನ್ನು ಯಡಿಯೂರಪ್ಪ ಅವರು ಟಾರ್ಗೆಟ್ ಮಾಡಿದರು. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಇಲ್ಲಿದೆ:

* ಸಿಎಂ ಆದಾಗಿನಿಂದ ಶಾಸಕಾಂಗ ಸಭೆ ಕರೆದಿಲ್ಲ. ಬಿಜೆಪಿಯನ್ನು 40ವರ್ಷಗಳ ಕಾಲ ಕಟ್ಟಿ ಬೆಳೆಸಿದ್ದೇನೆ
* ಶಾಸಕಾಂಗ ಸಭೆ ಕರೆಯಲು ಮನವಿ ಸಲ್ಲಿಸಿದ ತುಮಕೂರಿನ ಶಾಸಕರಿಗೆ ಸದಾನಂದರಿಂದ ಬೆದರಿಕೆ.
* ನಾನೇನು ಸನ್ಯಾಸಿಯಲ್ಲ..ಆದರೆ ಜಾತಿ ರಾಜಕಾರಣಿಯಾಗಿಲ್ಲ.
* ಸಿಎಂ ಡಿವಿಎಸ್. ಜೆಡಿಎಸ್ ಜೊತೆ ಕೈಜೋಡಿಸಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ.
* ಅನಂತ್ ಕುಮಾರ್ ಅವರು ನನ್ನನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮೂರು ಬಾರಿ ಯತ್ನಿಸಿದರು.
* ಸತತ 16 ವರ್ಷ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅನಂತ್ ಕುಮಾರ್.
* ನನ್ನ ನಿರ್ಧಾರ ಬದಲಿಸಲು ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಪಕ್ಷದ ಹಿರಿಯರು, ಮಠಾಧೀಶರ ಸಲಹೆ ಕಾರಣ.
* ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ 70 ಶಾಸಕರು ನನ್ನ ಜೊತೆ ಇದ್ದರು. ಈಗಲೂ ಇದ್ದಾರೆ.
* ನನ್ನ ಬೆಂಬಲಿಗರ ಕ್ಷೇತ್ರಗಳಿಗೆ ಈ ವರೆಗೂ ಚಿಕ್ಕಾಸು ಅನುದಾನ ನೀಡಿಲ್ಲ.
* ಅನಂತ್ ಕುಮಾರ್ ಅವರಿಗೆ ಸಿಎಂ ಕುರ್ಚಿ ಮೇಲೆ ಕಣ್ಣು. ಕರ್ನಾಟಕದ ಅಭಿವೃದ್ಧಿ ಅವರಿಗೆ ಬೇಕಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
Ex-cm Karnataka BS Yeddyurappa on Monday(May.14) gave a rude shock to people who thought he would quit the party and resign from Assembly. The leader in distress said he has deferred his decision to say good bye to party to an indefinite date. "I am deeply hurt by the conspiracy hatched by Party president KS Eshwarappa, CM Sadananda Gowda and BJP General Secretary Ananth Kumar" BSY told a crowded media Conference in Bangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more