ಬಿಎಸ್ ವೈ ಹೊಸಪಕ್ಷ ಕಟ್ಟುವುದಿಲ್ಲ: ರೇಣುಕಾ
ಬೆಂಗಳೂರು,
ಮೇ.13: 'ಯಡಿಯೂರಪ್ಪ ಅವರು ನಮ್ಮ ನಾಯಕರು, ಅವರು ಹೊಸ ಪಕ್ಷ ಕಟ್ಟುವುದಿಲ್ಲ' ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ನೂರ ಇಪ್ಪತ್ತನೇ ಸರಿ (ಸರಿಯಾದ ಎಣಿಕೆ ಇನ್ನೂ ಸಿಕ್ಕಿಲ್ಲ) ಹೇಳಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ಯಾರು ಯಾರು ಬಂದು ತಿಂಡಿ ತೀರ್ಥ ಸೇವಿಸಿ ಹೋದರು ಎಂಬ ವರದಿ ಇಲ್ಲಿ ಓದಿಕೊಳ್ಳಿ.. ನಂತರ ಬಿಜೆಪಿಯ ಶಿಸ್ತಿನ ಸಿಪಾಯಿ ರೇಣುಕಾ ಅವರ ಹೇಳಿಕೆಗಳನ್ನು ಆಸ್ವಾದಿಸಿರಿ.. id="toptextpromo">*
ಇದು ಅಧಿಕೃತ ಶಾಸಕಾಂಗ ಸಭೆ ಅಲ್ಲ. ಸ್ವ ಇಚ್ಛೆಯಿಂದ ಒಂದೆಡೆ ಸೇರಿದ್ದೇವೆ.* ಅಧಿಕಾರ ಶಾಶ್ವತವಲ್ಲ, ಅಧಿಕಾರ ಬರುತ್ತೇ ಹೋಗುತ್ತೆ.
* ರಾಜ್ಯದಲ್ಲಿ ನಾಯಕತ್ವ (ಮುಖ್ಯಮಂತ್ರಿ) ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ.
* style="color:
#ff0000;">ಯಡಿಯೂರಪ್ಪ
ಯಾವ
ಪಕ್ಷಕ್ಕೂ
ಸೇರುವುದಿಲ್ಲ.
ಹೊಸ
ಪಕ್ಷ
ಕಟ್ಟುವುದಿಲ್ಲ.
* ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು.
* ಯಡಿಯೂರಪ್ಪ ನಿರ್ದೋಷಿ, ನ್ಯಾಯಾಂಗದ ಮೇಲೆ ವಿಶ್ವಾಸವಿದೆ.
* 2000 ದಿಂದ ಇಲ್ಲಿವರೆಗೆ ಅಕ್ರಮ ಗಣಿಗಾರಿಕೆ ತನಿಖೆಯಾಗಲಿ (ಇದಂತೂ ಯಡಿಯೂರಪ್ಪ ಡೈಲಾಗ್ ಕಾಪಿ)
* ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಚರ್ಚಿಸಲು ಶಾಸಕಾಂಗ ಸಭೆ ಕರೆಯುವಂತೆ ಮನವಿ ಮಾಡಿದರು.
* ನಾನು ಶಾಸಕರು ಬರೆದ ಪತ್ರಕ್ಕೆ ಸಹಿ ಹಾಕಿಲ್ಲ (ಯಾಕೋ.. ಪೆನ್ ನಲ್ಲಿ ಇಂಕ್ ಖಾಲಿಯಾಗಿತ್ತಾ?) id='are-slot-1' class='oiad oi-axt oiadv'> id='top-searched-articles'>
ಮೊಟ್ಟ
ಮೊದಲಿಗೆ ಎಂಪಿ ರೇಣುಕಾಚಾರ್ಯ ಅವರಿಗೆ ಡೈಲಾಗ್ ಬರೆದುಕೊಡುವ ಆಪ್ತ ಸಹಾಯಕರನ್ನು ಚೇಂಜ್ ಮಾಡಬೇಕು ಕಣ್ರಿ. ಇಲ್ಲದೇ ಹೋದರೆ, ಯಡಿಯೂರಪ್ಪ ಅವರಂತೆ ಅವರ ಶಿಷ್ಯ ರೇಣುಕಾ ಅವರು ಕೂಡಾ ಹೇಳಿದ್ದೆ ಹೇಳುತ್ತಾ ಜನರನ್ನು ಗೋಳಾಡಿಸುತ್ತಾರೆ. ಮೇಲ್ಕಂಡ ಮಾತುಗಳಲ್ಲಿ ಕೊನೆಯ ಎರಡು ವಾಕ್ಯ ಬಿಟ್ಟರೆ ಉಳಿದಿದ್ದೆಲ್ಲವು ಹಳೆ ಡೈಲಾಗ್ ಗಳು. ಮತ್ತೆ ಇವತ್ತು ರಿಪೀಟ್ ಆಗಿದೆ ಅಷ್ಟೇ. ಯಡಿಯೂರಪ್ಪ ನಮ್ಮ ನಾಯಕ ಅನ್ನೋ ಮಾತು ಕ್ಲೀಷೆಯಾಗಿದೆ.











Click it and Unblock the Notifications